Virat Kohli: ವಿರಾಟ್ ಕೊಹ್ಲಿ ಔಟಾಗಿದಕ್ಕೆ ಬಾಲಿವುಡ್ ನಟನಿಗೆ ಬೈಗುಳ..!
IPL 2025 RCB vs GT: ಐಪಿಎಲ್ 2025ರ 14ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 169 ರನ್ ಕಲೆಹಾಕಿದರೆ, ಗುಜರಾತ್ ಟೈಟಾನ್ಸ್ ತಂಡವು ಈ ಗುರಿಯನ್ನು ಕೇವಲ 17.5 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 14ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮುಗ್ಗರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿರಾಟ್ ಕೊಹ್ಲಿ (Virat Kohli) ವಿಫಲರಾಗಿದ್ದರು. ಅದರಲ್ಲೂ ಪವರ್ಪ್ಲೇನಲ್ಲೇ ವಿಕೆಟ್ ಒಪ್ಪಿಸಿ ಕಿಂಗ್ ಕೊಹ್ಲಿ ನಿರಾಸೆ ಮೂಡಿಸಿದರು.
ಹೀಗೆ 2ನೇ ಓವರ್ನ 4ನೇ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದು ಅರ್ಷದ್ ಖಾನ್. ಯುವ ಎಡಗೈ ವೇಗಿ ಕಿಂಗ್ ಕೊಹ್ಲಿಯ ವಿಕೆಟ್ ಪಡೆಯುತ್ತಿದ್ದಂತೆ ಬೈಗುಳ ತಿಂದದ್ದು ಬಾಲಿವುಡ್ ನಟ ಎಂಬುದೇ ಇಲ್ಲಿ ಅಚ್ಚರಿ.
ಅರ್ಷದ್ vs ಅರ್ಷದ್:
ಅರ್ಷದ್ ಖಾನ್ ವಿಕೆಟ್ ಕಬಳಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ಗಳ ಮಹಾಪೂರ ಹರಿಸಿದ್ದಾರೆ. ಆದರೆ ಅದು ಬಾಲಿವುಡ್ ನಟ ಅರ್ಷದ್ ವಾರ್ಸಿ ವಿರುದ್ಧ ಎಂಬುದೇ ಇಲ್ಲಿ ಟ್ವಿಸ್ಟ್.
ಅರ್ಷದ್ ವಾರ್ಸಿ ಇನ್ಸ್ಟಾ ಖಾತೆಯಲ್ಲಿ ಕಂಡುಬಂದ ಕಾಮೆಂಟ್ಗಳು:
— Out Of Context Cricket (@GemsOfCricket) April 2, 2025
ಅಂದರೆ ಗುಜರಾತ್ ಟೈಟಾನ್ಸ್ ವೇಗಿ ಅರ್ಷದ್ ಖಾನ್ ಎಂದು ತಪ್ಪಾಗಿ ಅರ್ಥೈಸಿ ವಿರಾಟ್ ಕೊಹ್ಲಿ ಫ್ಯಾನ್ಸ್ ನಟ ಅರ್ಷದ್ ವಾರ್ಸಿ ಅವರ ಸೋಷಿಯಲ್ ಮೀಡಿಯಾ ಖಾತೆಗೆ ದಾಂಗುಡಿಯಿಟ್ಟಿದ್ದಾರೆ. ಅಲ್ಲದೆ ಕೊಹ್ಲಿಯನ್ನು ಔಟ್ ಮಾಡಿದ್ದೇಕೆ ಎಂದು ಬೈಗುಳಗಳ ಸುರಿಮಳೆಗೈದಿದ್ದಾರೆ.

ಅರ್ಷದ್ ವಾರ್ಸಿ ಬೈದ ವಿರಾಟ್ ಕೊಹ್ಲಿ ಫ್ಯಾನ್ಸ್
ಆದರೆ ಅತ್ತ ಅರ್ಷದ್ ವಾರ್ಸಿಗೂ ಕ್ರಿಕೆಟ್ಗೂ ಯಾವುದೇ ಸಂಬಂಧವಿಲ್ಲ. ಇದಾಗ್ಯೂ ಕಿಂಗ್ ಕೊಹ್ಲಿ ಅಭಿಮಾನಿಗಳ ಅತಿರೇಕದಾಟಕ್ಕೆ ಬಾಲಿವುಡ್ ನಟ ಕಂಗಾಲಾಗಿರುವುದಂತು ನಿಜ.
ಫಿಲಿಪ್ಸ್ ಕಂಪೆನಿಗೆ ಬೈದಿದ್ದ ಅಭಿಮಾನಿಗಳು:
ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಕ್ಯಾಚ್ ಹಿಡಿದಿದ್ದ ನ್ಯೂಝಿಲೆಂಡ್ನ ಗ್ಲೆನ್ ಫಿಲಿಪ್ಸ್ಗೆ ಬೈಯ್ಯುವ ಭರದಲ್ಲಿ ಕೊಹ್ಲಿ ಫ್ಯಾನ್ಸ್ ಫಿಲಿಪ್ಸ್ ಕಂಪೆನಿಯನ್ನು ಟಾರ್ಗೆಟ್ ಮಾಡಿದ್ದರು.
ಇದನ್ನೂ ಓದಿ: IPL 2025: ಹೀನಾಯ ಅತ್ಯಂತ ಹೀನಾಯ ದಾಖಲೆ ಬರೆದ RCB
ಅಂದು ಸಹ ಗ್ಲೆನ್ ಫಿಲಿಪ್ಸ್ ಸೋಷಿಯಲ್ ಮೀಡಿಯಾ ಖಾತೆ ಯಾವುದೆಂದು ತಿಳಿಯದೇ ಫಿಲಿಪ್ಸ್ ಕಂಪೆನಿಯ ಪೋಸ್ಟ್ಗಳಿಗೆ ವಿರಾಟ್ ಕೊಹ್ಲಿ ಅಭಿಮಾನಿಗಳು ಬೈಗುಗಳ ಸುರಿಮಳೆಗೈದಿದ್ದರು. ಇದೀಗ ಮತ್ತೊಮ್ಮೆ ಅರ್ಷದ್ ಖಾನ್ ಅವರನ್ನು ಗುರಿಯಾಗಿಸುವ ದಾಂಗುಡಿಯಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳಿಂದ ಬಾಲಿವುಡ್ ನಟ ಅರ್ಷದ್ ವಾರ್ಸಿ ಬೈಗುಳಗಳನ್ನು ತಿಂದಿದ್ದಾರೆ.