Rishabh Pant Injury: ಬ್ಯಾಟಿಂಗ್ ವೇಳೆ ರಿಷಬ್ ಪಂತ್ ಕೈಗೆ ಗಂಭೀರ ಗಾಯ; ವಿಡಿಯೋ ನೋಡಿ
Rishabh Pant Injury: ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಚೆಲ್ ಸ್ಟಾರ್ಕ್ ಅವರ ವೇಗದ ಎಸೆತ ಪಂತ್ ಅವರ ಬೈಸೆಪ್ ಮತ್ತು ಹೆಲ್ಮೆಟ್ಗೆ ತಗುಲಿದೆ. ನೋವಿನ ನಡುವೆಯೂ ಛಲ ಬಿಡದ ಪಂತ್ 40 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಭಾರತದ ಬ್ಯಾಟಿಂಗ್ ಇಡೀ ಸರಣಿಯಂತೆ ಈ ಪಂದ್ಯದಲ್ಲೂ ನಿರಾಸಾದಾಯಕವಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಮೊದಲ ದಿನದಾಟದಲ್ಲೇ ತಂಡದ ಪ್ರಮುಖ ಆಟಗಾರರ ಪೆವಿಲಿಯನ್ ಸೇರಿಕೊಂಡಿದ್ದಾರೆ. ತಂಡದ ನಾಯಕ ಬದಲಾದರೂ ತಂಡದ ಆಟಗಾರರ ಪ್ರದರ್ಶನ ಮಾತ್ರ ಬದಲಾಗಿಲ್ಲ. ಇಡೀ ಸರಣಿಯಲ್ಲಿ ತಂಡಕ್ಕೆ ಕೈಕೊಟ್ಟಿದ್ದ ಬ್ಯಾಟಿಂಗ್ ವಿಭಾಗ ಈ ಟೆಸ್ಟ್ನಲ್ಲೂ ಅದೇ ನಿರಸ ಪ್ರದರ್ಶನ ನೀಡಿದೆ. ತಂಡದ ಯಾವೊಬ್ಬ ಬ್ಯಾಟರ್ ಕೂಡ ಇದುವರೆಗೆ ಅರ್ಧಶತಕದ ಇನ್ನಿಂಗ್ಸ್ ಆಡಿಲ್ಲ. ಇದೇ ವೇಳೆ ತಂಡದ ಪರ ಕೊಂಚ ಹೋರಾಟದ ಇನ್ನಿಂಗ್ಸ್ ಆಡಿದ ರಿಷಬ್ ಪಂತ್ ಕೂಡ 40 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದ್ದಾರೆ. ಆದರೆ ಅದಕ್ಕೂ ಮುನ್ನ ಬ್ಯಾಟಿಂಗ್ ವೇಳೆ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಂತ್ ಗಾಯ ಎಷ್ಟು ಗಂಭೀರವಾಗಿದೆ?
ವಾಸ್ತವವಾಗಿ, ಮಿಚೆಲ್ ಸ್ಟಾರ್ಕ್ ಅವರ ವೇಗದ ಚೆಂಡು ರಿಷಭ್ ಪಂತ್ ಅವರ ಬೈಸೆಪ್‌ಗೆ ಬಡಿದಿತು. ಚೆಂಡು ತುಂಬಾ ವೇಗವಾಗಿದ್ದು ಅದು ಪಂತ್ ಅವರ ಬೈಸೆಪ್ನಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡಿತು. ಕೂಡಲೇ ಮೈದಾನಕ್ಕೆ ಆಗಮನಿಸಿದ ಫಿಸಿಯೋ ಪಂತ್ ಕೈಗೆ ಬ್ಯಾಂಡೇಜ್ ಹಾಕಬೇಕಾಯಿತು. ಸಹಿಸಲಾರದ ನೋವಿನಿಂದ ಬಳಲುತ್ತಿದ್ದರೂ ಪಂತ್ ಮಾತ್ರ ತಮ್ಮ ಆಟವನ್ನು ಮುಂದುವರೆಸಿದರು. ಆದರೆ ಸಿಕ್ಕ ಉತ್ತಮ ಆರಂಭವನ್ನು ಪಂತ್ ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು.
Rishabh Pant took a number of heavy hits to the body.#AUSvIND pic.twitter.com/TdyJ1qhm9C
— cricket.com.au (@cricketcomau) January 3, 2025
ಇಷ್ಟು ಮಾತ್ರವಲ್ಲದೆ, ಮುಂದಿನ ಕೆಲವು ಎಸೆತಗಳ ನಂತರ ಸ್ಟಾರ್ಕ್ ಅವರ ಒಂದು ಎಸೆತ ಪಂತ್ ಅವರ ಹೆಲ್ಮೆಟ್ ಗೆ ತಾಗಿತು. ಈ ಚೆಂಡಿನ ವೇಗ ಸುಮಾರು 144 ಕಿ.ಮೀ. ಇತ್ತು. ಹೀಗಾಗಿ ಸ್ವಲ್ಪ ಹೊತ್ತು ಪಂದ್ಯವನ್ನು ನಿಲ್ಲಿಸಬೇಕಾಯಿತು. ಮತ್ತೆ ಮೈದಾನಕ್ಕೆ ಓಡಿ ಬಂದ ಫಿಸಿಯೋ ಪಂತ್ ಅವರನ್ನು ತಪಾಸಣೆ ನಡೆಸಿ ಹೆಲ್ಮೆಟ್ ಅನ್ನು ಸಹ ತಪಾಸಣೆ ನಡೆಸಿದರು.
50 ರನ್ ಜೊತೆಯಾಟ
ಸಿಡ್ನಿ ಟೆಸ್ಟ್‌ನಲ್ಲಿ ರಿಷಬ್ ಪಂತ್ ಭಾರತದ ಇನ್ನಿಂಗ್ಸ್‌ನ ಮೊದಲ ಸಿಕ್ಸರ್ ಬಾರಿಸಿದರು. ಅಲ್ಲದೆ 5ನೇ ವಿಕೆಟ್‌ಗೆ ಜಡೇಜಾ ಜೊತೆ ಸುಮಾರು 50 ರನ್‌ಗಳ ಜೊತೆಯಾಟ ನಡೆಸಿದರು. ಆದರೆ ಸಿಕ್ಕ ಉತ್ತಮ ಆರಂಭವನ್ನು ಬಿಗ್ ಸ್ಕೋರ್ ಆಗಿ ಪರಿವರ್ತಿಸಲು ಪಂತ್ಗೆ ಸಾಧ್ಯವಾಗಲಿಲ್ಲ. 98 ಎಸೆತಗಳನ್ನು ಎದುರಿಸಿದ ಪಂತ್ 1 ಸಿಕ್ಸರ್ ಮತ್ತು 3 ಬೌಂಡರಿ ಒಳಗೊಂಡ 40 ರನ್ ಗಳಿಸಲಷ್ಟೇ ಶಕ್ತರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:14 am, Fri, 3 January 25