ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ (Rishabh Pant) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯಿಂದ ಉತ್ತರ ಖಂಡದ ಹರಿದ್ವಾರದಲ್ಲಿರುವ ರೂರ್ಕೀಯಲ್ಲಿರುವ ತನ್ನ ಮನೆಗೆ ರಿಷಭ್ ಪಂತ್ ತನ್ನ ಬೆನ್ಝ್ ಕಾರ್ನಲ್ಲಿ ಬರ್ತಿದ್ರು. ಈ ವೇಳೆ ಪಂತ್ ಇದ್ದ ಕಾರು ಅಪಘಾತಕ್ಕೀಡಾಗಿತ್ತು. ದೆಹಲಿ-ಡೆಹ್ರಾಡೂನ್ ಹೈವೇನಲ್ಲಿ ರಭಸವಾಗಿ ಬಂದ ಕಾರು ಡಿವೈಡರ್ಗೆ ಗುದ್ದಿತ್ತು. ಗುದ್ದಿದ ರಭಸಕ್ಕೆ ಕಾರು ಪಲ್ಟಿಯಾಗಿದ್ದಲ್ಲದೆ, ಕಾರಿನಲ್ಲಿ ಬೆಂಕಿ ಹತ್ತಿಕೊಂಡಿತ್ತು. ಅಷ್ಟರಲ್ಲಾಗಲೇ ಕಾರಿನಿಂದ ಹೊರಬಂದಿದೆ ಪಂತ್, ತಮ್ಮ ಪ್ರಾಣ ಉಳಿಸಿಕೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಈ ಯುವ ಕ್ರಿಕೆಟರ್ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸುದ್ದಿಯಾಗಿದೆ. ಆದರೆ ಅಪಘಾತಕ್ಕೀಡಾಗಿರುವ ಪಂತ್ ಕೆಲವು ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯುವುದು ಅನಿವಾರ್ಯವಾಗಿದೆ. ಆದರೆ ಪಂತ್ ಎಷ್ಟು ದಿನ ಕ್ರಿಕೆಟ್‌ನಿಂದ ದೂರವಿರಲಿದ್ದಾರೆ? ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಪ್ರಶ್ನೆಯಾಗಿದೆ.
ಪಂತ್ ಅವರ ಅತ್ಯಂತ ಗಂಭೀರವಾದ ಗಾಯವೆಂದರೆ ಅವರ ‘ಲಿಗಮೆಂಟ್ ಟಿಯರ್’. ಆದ್ದರಿಂದ ಬಿಸಿಸಿಐ ತನ್ನ ವೈದ್ಯರಿಂದಲೇ ಪಂತ್ಗೆ ಚಿಕಿತ್ಸೆ ನೀಡುವುದಾಗಿ ಮ್ಯಾಕ್ಸ್ ಆಸ್ಪತ್ರೆ ವೈದ್ಯರ ಬಳಿ ಹೇಳಿಕೊಂಡಿದೆ. ಹೀಗಾಗಿ ಪಂತ್ ಮೈದಾನಕ್ಕೆ ಮರಳುವ ಸ್ಥಿತಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ, ಆದರೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಮೂಲಗಳ ಪ್ರಕಾರ, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಪಂತ್ ಕಣಕ್ಕಿಳಿಯುವುದು ಅಸಾಧ್ಯವಾಗಿದೆ.
Finn Allen: 37 ಎಸೆತಗಳಲ್ಲಿ 78 ರನ್; ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದ ಆರ್ಸಿಬಿ ಆಟಗಾರ!
ಹೀಗಾಗಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಸರಣಿಯನ್ನು ಗೆದ್ದರಷ್ಟೇ ಟೀಂ ಇಂಡಿಯಾಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಬಾಗಿಲು ತೆರೆಯಲಿದೆ. ಹೀಗಾಗಿ ಟೆಸ್ಟ್ನಲ್ಲಿ ಉತ್ತಮ ಫಾರ್ಮ್ನಲ್ಲಿದ್ದ ಪಂತ್ ಬದಲಿ ಆಟಗಾರನ ಹುಡುಕಾಟದಲ್ಲಿ ಬಿಸಿಸಿಐ ನಿರತವಾಗಿದೆ. ಮೂಲಗಳ ಪ್ರಕಾರ ಪಂತ್ ಸ್ಥಾನಕ್ಕೆ ಮೂವರು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ ಎಂಬುದು ತಿಳಿದು ಬಂದಿದೆ. ಪ್ರಸ್ತುತ ಪಂತ್ ಬದಲಿ ಆಟಗಾರನಾಗಿ ರೇಸ್ನಲ್ಲಿರುವ ಆಟಗಾರರ ಪೈಕಿ ಕೋನಾ ಭರತ್ ಮೊದಲಿಗರಾಗಿದ್ದಾರೆ. ಅವರ ನಂತರ ಭಾರತ ಎ ತಂಡದಲ್ಲಿ ಆಡುತ್ತಿರುವ ಉಪೇಂದ್ರ ಯಾದವ್ ಕೂಡ ರೇಸ್ನಲ್ಲಿದ್ದಾರೆ. ಹಾಗೆಯೇ ವೈಟ್-ಬಾಲ್ ಸ್ಪೆಷಲಿಸ್ಟ್ ಇಶಾನ್ ಕಿಶನ್ ಕೂಡ ಈ ಸ್ಥಾನಕ್ಕೆ ಸೂಕ್ತ ಎಂತಲೇ ಹೇಳಲಾಗುತ್ತಿದೆ.
ಈಗ ಈ ತಿಂಗಳಲ್ಲೇ ಹೊಸದಾಗಿ ಆಯ್ಕೆಯಾಗುವ ಆಯ್ಕೆ ಸಮಿತಿಯ ಮುಂದೆ ಈ ಮೂರು ಆಯ್ಕೆಗಳಿವೆ. ಈ ಮೂವರಲ್ಲಿ ಇಬ್ಬರು ಇಂಡಿಯಾ ಎ ಕೀಪರ್‌ಗಳಾದ ಭರತ್ ಮತ್ತು ಉಪೇಂದ್ರ ಅವರು ಮುಖ್ಯ ತಂಡಕ್ಕೆ ನೇರವಾಗಿ ಆಯ್ಕೆಯಾಗುತ್ತಾರಾ ಅಥವಾ ಇಶಾನ್ ಕಿಶನ್ ಅವರಂತಹ ಎಡಗೈ ಆಟಗಾರನ ಮೇಲೆ ಆಯ್ಕೆ ಮಂಡಳಿ ನಂಬಿಕೆ ಇರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಈ ಮೂವರ ಹೊರತಾಗಿ ಸಂಜು ಸ್ಯಾಮ್ಸನ್ ಕೂಡ ಆಯ್ಕೆಗೆ ಲಭ್ಯರಿದ್ದಾರೆ.
ತಾಂತ್ರಿಕವಾಗಿ, ಭರತ್ ಟೆಸ್ಟ್ ತಂಡದ ಎರಡನೇ ಕೀಪರ್ ಆಗಿರುವುದರಿಂದ ನಾಗ್ಪುರದಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಉಪೇಂದ್ರ ಯಾದವ್ ಕೂಡ ಉತ್ತಮ ಕೀಪರ್ ಮತ್ತು ಕ್ಲೀನ್ ಹಿಟ್ಟರ್ ಆಗಿದ್ದು, ಇದುವರೆಗೆ ಅವರ ಬ್ಯಾಟಿಂಗ್ ಸರಾಸರಿ 45 ಪ್ಲಸ್ ಇದೆ. ಹಾಗಾಗಿ ಅವರಿಗೂ ಆಯ್ಕೆ ಮಂಡಳಿ ಮಣೆ ಹಾಕುವ ಸಾಧ್ಯತೆಗಳಿವೆ. ಆದರೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿರುವ ಅನುಭವ ಹೊಂಡಿರುವ ಇಶಾನ್ ಅಥವಾ ಸಂಜು ಸ್ಯಾಮ್ಸನ್ ಕೂಡ ಉತ್ತಮ ಆಯ್ಕೆಯಾಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:11 am, Sun, 1 January 23