India vs Sri Lanka: ತಪ್ಪಿದ ಗುರಿ, ಟೀಮ್ ಇಂಡಿಯಾ ಪಾಲಿಗೆ ಕೈಜಾರಿದ ಏಷ್ಯಾಕಪ್

Rishabh Pant: ರಿಷಬ್ ಪಂತ್ ಎಸೆದ ಚೆಂಡು ನಿಖರವಾಗಿ ಗುರಿ ಮುಟ್ಟಿದ್ದರೆ ಟೀಮ್ ಇಂಡಿಯಾಗೆ ಗೆಲ್ಲುವ ಅವಕಾಶವಿತ್ತರು. ಇಲ್ಲ, ಸೂಪರ್ ಓವರ್​ನತ್ತ ಪಂದ್ಯವನ್ನು ಕೊಂಡೊಯ್ಯಬಹುದಿತ್ತು.

India vs Sri Lanka: ತಪ್ಪಿದ ಗುರಿ, ಟೀಮ್ ಇಂಡಿಯಾ ಪಾಲಿಗೆ ಕೈಜಾರಿದ ಏಷ್ಯಾಕಪ್
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 07, 2022 | 11:54 AM

Asia Cup 2022: ಏಷ್ಯಾಕಪ್​ನಲ್ಲಿನ ಸೂಪರ್-4 ಹಂತದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ (India vs Sri Lanka) ವಿರುದ್ದ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಟೀಮ್ ಇಂಡಿಯಾ ಫೈನಲ್​ಗೆ ಪ್ರವೇಶಿಸುವ ಹಾದಿ ಬಹುತೇಕ ಮುಚ್ಚಿದೆ. ಇನ್ನೇನಿದ್ದರೂ ಉಳಿದ ತಂಡಗಳ ಫಲಿತಾಂಶವನ್ನು ಅವಲಂಭಿಸಿ ಫೈನಲ್ ಪ್ರವೇಶಿಸುವ ಹಾದಿ ಮಾತ್ರ ಉಳಿದಿದೆ. ಅಚ್ಚರಿ ಎಂದರೆ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲುವ ಅವಕಾಶವಿದ್ದರೂ ಟೀಮ್ ಇಂಡಿಯಾ ಆಟಗಾರರು ಮಾಡಿದ ತಪ್ಪಿನಿಂದ ಸೋಲಬೇಕಾಯಿತು ಎಂದರೆ ತಪ್ಪಾಗಲಾರದು. ಅದರಲ್ಲೂ ಕೊನೆಯ ಓವರ್​ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ರನೌಟ್ ಅವಕಾಶ ತಪ್ಪಿಸಿಕೊಂಡಿದ್ದು ಭಾರತ ತಂಡದ ಪಾಲಿಗೆ ಮುಳುವಾಯಿತು.

ಏಕೆಂದರೆ ಕೊನೆಯ ಓವರ್​ನಲ್ಲಿ ಶ್ರೀಲಂಕಾ ತಂಡಕ್ಕೆ 7 ರನ್​ಗಳ ಅವಶ್ಯಕತೆಯಿತ್ತು. ಮೊದಲ ಮೂರು ಎಸೆತಗಳಲ್ಲಿ 4 ರನ್ ಕಲೆಹಾಕಿದ ಲಂಕಾ ಬ್ಯಾಟ್ಸ್​ಮನ್​ಗಳ ಮುಂದೆ 3 ಎಸೆತಗಳಲ್ಲಿ 3 ರನ್​ಗಳ ಗುರಿಯಿತ್ತು. ಇತ್ತ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್ ಶ್ರೀಲಂಕಾ ಬ್ಯಾಟ್ಸ್​ಮನ್​ಗಳನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಅದರಂತೆ ಕೊನೆಯ 2 ಎಸೆತಗಳಲ್ಲಿ 2 ರನ್​ಗಳು ಬೇಕಿತ್ತು. ಈ ವೇಳೆ ದಸುನ್ ಶಾನಕ ಚೆಂಡನ್ನು ಮಿಸ್ ಮಾಡಿಕೊಂಡರು. ಬಾಲ್ ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತು. ಆದರೆ ಅದಾಗಲೇ ನಾನ್ ಸ್ಟ್ರೈಕ್​ನಿಂದ ಭಾನುಕಾ ರಾಜಪಕ್ಸೆ ಕ್ರೀಸ್​ ಬಿಟ್ಟಿದ್ದರು. ಅತ್ತ ಗ್ಲೌಸ್ ಇಲ್ಲದೆ ಚೆಂಡು ಹಿಡಿದಿದ್ದ ಪಂತ್​ಗೆ ನೇರವಾಗಿ ವಿಕೆಟ್ ಎಸೆದು ರನೌಟ್ ಮಾಡುವ ಅವಕಾಶವಿತ್ತು.

ಇದನ್ನೂ ಓದಿ
Image
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಆದರೆ ರಿಷಭ್ ಪಂತ್ ಎಸೆದ ಥ್ರೋ ವಿಕೆಟ್​ಗೆ ತಾಗಿರಲಿಲ್ಲ. ಇತ್ತ ಬಾಲ್ ನೇರವಾಗಿ ಅರ್ಷದೀಪ್ ಕೈ ಸೇರಿತು. ಚೆಂಡು ಸಿಕ್ಕ ತಕ್ಷಣವೇ ಅರ್ಷದೀಪ್ ನಾನ್ ಸ್ಟ್ರೈಕರ್ ಅನ್ನು ರನೌಟ್ ಮಾಡಲು ಮುಂದಾದರು. ಆದರೆ ಚೆಂಡು ವಿಕೆಟ್​ಗೆ ತಾಗದೇ ನೇರವಾಗಿ ಬೌಂಡರಿ ಲೈನ್​ನತ್ತ ಹೋಯಿತು. 1 ರನ್​ ಕದಿಯಲು ಯತ್ನಿಸಿದ್ದ ಲಂಕಾ ಬ್ಯಾಟ್ಸ್​ಮನ್​ಗಳು ಓವರ್​ ಥ್ರೋ ಮೂಲಕ ಒಟ್ಟು 2 ರನ್​ ಓಡಿದರು. ಇದರೊಂದಿಗೆ ಶ್ರೀಲಂಕಾ ತಂಡವು 19.5 ಓವರ್​ಗಳಲ್ಲಿ ರೋಚಕ ಜಯ ಸಾಧಿಸಿತು.

ರಿಷಬ್ ಪಂತ್ ಎಸೆದ ಚೆಂಡು ನಿಖರವಾಗಿ ಗುರಿ ಮುಟ್ಟಿದ್ದರೆ ಟೀಮ್ ಇಂಡಿಯಾಗೆ ಗೆಲ್ಲುವ ಅವಕಾಶವಿತ್ತರು. ಇಲ್ಲ, ಸೂಪರ್ ಓವರ್​ನತ್ತ ಪಂದ್ಯವನ್ನು ಕೊಂಡೊಯ್ಯಬಹುದಿತ್ತು. ಆದರೆ ಟೀಮ್ ಇಂಡಿಯಾ ಆಟಗಾರರು ಕೊನೆಯ ಹಂತದಲ್ಲಿ ಗುರಿ ತಪ್ಪಿದ್ದರಿಂದ ಏಷ್ಯಾಕಪ್​ ಕೈ ತಪ್ಪಿದೆ ಎಂದರೆ ತಪ್ಪಾಗಲಾರದು.

ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ?
ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ?
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ