Rishabh Pant: ಐಪಿಎಲ್​ನಿಂದ ಔಟ್: ರಿಷಭ್​ಗೆ ಎಷ್ಟು ತಿಂಗಳುಗಳ ಕಾಲ ರೆಸ್ಟ್?: ಪಂತ್ ಮೈದಾನಕ್ಕಿಳಿಯುವುದು ಯಾವಾಗ?

Rishabh Pant Car Accident: ರಿಷಭ್ ಪಂತ್ ಗಾಯದ ಪ್ರಮಾಣ ಅಧಿಕವಾಗಿರುವ ಕಾರಣ ಕ್ರಿಕೆಟ್​ನಿಂದ ಕನಿಷ್ಠ ಎಂಟು ತಿಂಗಳುಗಳ ಕಾಲ ದೂರವಿರಬೇಕಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ, ಐಪಿಎಲ್ 2023 ಟೂರ್ನಿಯಿಂದಲೂ ಔಟ್ ಆಗಲಿದ್ದಾರೆ.

Rishabh Pant: ಐಪಿಎಲ್​ನಿಂದ ಔಟ್: ರಿಷಭ್​ಗೆ ಎಷ್ಟು ತಿಂಗಳುಗಳ ಕಾಲ ರೆಸ್ಟ್?: ಪಂತ್ ಮೈದಾನಕ್ಕಿಳಿಯುವುದು ಯಾವಾಗ?
Rishabh Pant
Follow us
TV9 Web
| Updated By: Vinay Bhat

Updated on:Dec 31, 2022 | 12:06 PM

ರಿಷಭ್ ಪಂತ್ (Rishabh Pant) ಅವರು ಶುಕ್ರವಾರ ದಿಲ್ಲಿಯಿಂದ ಉತ್ತರಾಖಂಡದ ರೂರ್ಕಿಗೆ ಪ್ರಯಾಣ ಬೆಳೆಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಭೀಕರ ಅಪಘಾತ (Accident) ಎದುರಿಸಿದರು. ಮುಂಜಾನೆ 5.30ರ ಸುಮಾರಿಗೆ ಪಂತ್ ಕಾರು ಅಪಘಾತಕ್ಕೀಡಾಯಿತು. ಬಹಳಾ ವೇಗದಲ್ಲಿ ಸಾಗಿದ್ದ ಕಾರು ರಸ್ತೆಯ ವಿಭಜಕ್ಕೆ ಬಡಿದು ಗಾಳಿಯಲ್ಲಿ ಹಲವು ಬಾರಿ ತಿರುಗಿ ನೆಲಕ್ಕೆ ಅಪ್ಪಳಿಸಿತ್ತು. ಸಿಸಿಟಿವಿಯಲ್ಲಿ ಈ ದೃಶ್ಯ ಕೂಡ ಸೆರೆಯಾಗಿದ್ದು ಭಯಾನಕವಾಗಿದೆ. ಕಾರಿನ ಪೆಟ್ರೋಲ್‌ ಟ್ಯಾಂಕ್‌ ಸ್ಪೋಟಗೊಂಡು ಕ್ಷಣಮಾತ್ರದಲ್ಲೇ ಬೆಂಕಿ ಕೂಡ ಹೊತ್ತಿಕೊಂಡಿದೆ. ರಿಷಭ್ ಪಂತ್‌ ಪವಾಡ ರೀತಿಯಲ್ಲಿ ಬಚಾವಾದರು ಎನ್ನಬಹುದು. ಗಾಯದ ಪ್ರಮಾಣ ಅಧಿಕವಾಗಿರುವ ಕಾರಣ ಕ್ರಿಕೆಟ್​ನಿಂದ ಕೆಲ ಸಮಯ ದೂರ ಉಳಿಯಬೇಕಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ಆವೃತ್ತಿಯಿಂದಲೂ ಪಂತ್ ಹೊರಗುಳಿಯಲಿದ್ದಾರೆ.

ಪಂತ್ ಅವರು ಕಾರಿನ ಗಾಜು ಒಡೆದು ಹೊರಗೆ ಬರುವ ಭರದಲ್ಲಿ ಅವರ ಬೆನ್ನು ರಸ್ತೆಗೆ ಉಜ್ಜಿದ್ದರಿಂದ ಚರ್ಮ ಕಿತ್ತುಬಂದಿದೆ. ತಲೆ, ಬೆನ್ನು ಮತ್ತು ಪಾದಗಳಿಗೆ ಗಂಭೀರ ಗಾಯಗಳಾಗಿದೆ. ಪಂತ್ ಅವರ ಮೆದುಳು ಮತ್ತು ಬೆನ್ನುಮೂಳೆಯ ಎಂಆರ್‌ಐ ರಿಸಲ್ಟ್ ಬಂದಿದ್ದು, ಅದರಲ್ಲಿ ಎಲ್ಲವೂ ಸಾಮಾನ್ಯವಾಗಿದೆ ಎಂದು ಹೇಳಲಾಗಿದೆ. ಮುಖ ಮತ್ತು ದೇಹದ ಗಾಯಗಳನ್ನು ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಲಾಗಿದೆ. ಇಂದು ಪಾದ ಮತ್ತು ಮೊಣಕಾಲಿನ MRI ಸ್ಕ್ಯಾನ್ ನಡೆಯಲಿದೆ. ಅಗತ್ಯವಿದ್ದರೆ ಅವರನ್ನು ದೆಹಲಿಗೆ ಪ್ಲಾಸ್ಟಿಕ್ ಸರ್ಜರಿಗಾಗಿ ವಿಮಾನದಲ್ಲಿ ಕರೆದೊಯ್ಯುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ. ಅತ್ತ ಬಿಸಿಸಿಐ ಕೂಡ ಪಂತ್ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡಿದ್ದು ಅವಶ್ಯಕತೆ ಇದ್ದರೆ ವಿದೇಶದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ತಿಳಿಸಿದೆ.

Rishabh Pant Health Update: ರಿಷಭ್ ಪಂತ್​ಗೆ ಇಂದು ಮೊಣಕಾಲು ಪರೀಕ್ಷೆ, ಪ್ಲಾಸ್ಟಿಕ್ ಸರ್ಜರಿಗೆ ದೆಹಲಿಗೆ ಶಿಫ್ಟ್ ಸಾಧ್ಯತೆ

ಇದನ್ನೂ ಓದಿ
Image
Cristiano Ronaldo: ಹೊಸ ಕ್ಲಬ್ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ; ವರ್ಷಕ್ಕೆ 1770 ಕೋಟಿ ಸಂಬಳ!
Image
‘ನಿಧಾನವಾಗಿ ಕಾರು ಓಡಿಸು’; ರಿಷಬ್ ಪಂತ್​ಗೆ ಮೊದಲೇ ಎಚ್ಚರಿಕೆ ನೀಡಿದ್ದ ಶಿಖರ್ ಧವನ್; ವಿಡಿಯೋ ನೋಡಿ
Image
BCCI: ಹೊಸ ವರ್ಷದಂದೇ ಬಿಸಿಸಿಐ ಮಹತ್ವದ ಸಭೆ; ರೋಹಿತ್, ದ್ರಾವಿಡ್​, ಲಕ್ಷ್ಮಣ್​ಗೆ ಬಿಗ್​ಬಾಸ್​ಗಳ ಆಹ್ವಾನ
Image
Rishabh Pant: ಮಾತೃ ವಿಯೋಗದ ನಡುವೆಯೂ ರಿಷಭ್‌ ಪಂತ್‌ ತಾಯಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ

ಕನಿಷ್ಠ 8 ತಿಂಗಳು ಕ್ರಿಕೆಟ್ ಆಡುವಂತಿಲ್ಲ:

ರಿಷಭ್ ಪಂತ್ ಬಲಗಾಲಿನ ಮಂಡಿಯ ಲಿಗಮೆಂಟ್‌ (ಅಸ್ಥಿರಜ್ಜು) ಹರಿದಿರುವುದು ಪರೀಕ್ಷೆಯಲ್ಲಿ ಗೊತ್ತಾಗಿದೆ. ಈ ಅಪಘಾತಕ್ಕೂ ಮುನ್ನ ಪಂತ್ ಮೊಣಕಾಲು ಬಲಪಡಿಸಲು ಜನವರಿ 6 ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹಾಜರಾಗಲು ಬಿಸಿಸಿಐ ಸೂಚಿಸಿತ್ತು. ಅಲ್ಲಿ ಕಂಡೀಷನಿಂಗ್ ಮತ್ತು ಅಭ್ಯಾಸ ಮಾಡಲು ಸೂಚನೆ ನೀಡಲಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುನ್ನ ಅವರು ಫಿಟ್ ಆಗಬೇಕೆಂದು ಬಿಸಿಸಿಐ ಬಯಸಿತ್ತು. ಆದರೀಗ ಮೊಣಕಾಲಿನ ನೋವು ಅಪಘಾತದಿಂದ ಹೆಚ್ಚಾಗಿರುವ ಸಾಧ್ಯತೆ ಇದೆ. ಅಪಘಾತದಲ್ಲಿ ಅವರಿಗೆ ಹಣೆಯ ಮೇಲೆ ಕೂಡ ಗಾಯವಾಗಿದೆ. ಬಲ ಮೊಣಕಾಲಿನ ಅಸ್ಥಿರಜ್ಜು ಕೂಡ ಗಾಯಗೊಂಡಿದ್ದು, ಬಲ ಮಣಿಕಟ್ಟು, ಪಾದ ಮತ್ತು ಬೆರಳಿಗೆ ಗಾಯವಾಗಿದೆ.

ಪಂತ್ ಗಾಯದ ಪ್ರಮಾಣ ಅಧಿಕವಾಗಿರುವ ಕಾರಣ ಕ್ರಿಕೆಟ್​ನಿಂದ ಕನಿಷ್ಠ ಎಂಟು ತಿಂಗಳುಗಳ ಕಾಲ ದೂರವಿರಬೇಕಾಗಿದೆ. ಪಂತ್ ಅವರ ಗಾಯಗಳ ತೀವ್ರತೆಯ ಕುರಿತು ಮಾತನಾಡಿದ ಏಮ್ಸ್ ವೈದ್ಯರು, ಅಸ್ಥಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಪಂತ್ ಕನಿಷ್ಠ ಮೂರರಿಂದ ಆರು ತಿಂಗಳು ತೆಗೆದುಕೊಳ್ಳುತ್ತದೆ. ಎಲ್ಲಾದರು ಗಾಯದ ಪ್ರಮಾಣ ತೀವ್ರವಾಗಿದ್ದರೆ, ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಒಟ್ಟಾರೆ ಪಂತ್‌ ಅವರು ಪೂರ್ಣ ಫಿಟ್‌ನೆಸ್‌ ಮರಳಿ ಪಡೆಯಲು ಕನಿಷ್ಠ ಎಂಟು ತಿಂಗಳುಗಳು ಬೇಕಾಗಬಹುದು.

ಇದು ಫೆಬ್ರವರಿ 9 ರಿಂದ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಪಂತ್ ಅಲಭ್ಯರಾಗಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಟೆಸ್ಟ್‌ನಲ್ಲಿ ಭಾರತ ಪರ ಅತ್ಯುತ್ತಮ ಪ್ರದರ್ಶನ ತೋರಿರುವ ಪಂತ್​ಗೆ ಇದು ದೊಡ್ಡ ಹಿನ್ನಡೆ. ಅಲ್ಲದೆ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ಪಂತ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದಿದ್ದ ಭಾರತ ತಂಡದ ಪರ ಪಂತ್‌ ಭರ್ಜರಿ ಪ್ರದರ್ಶನ ತೋರಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:06 pm, Sat, 31 December 22

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ