BCCI: ಹೊಸ ವರ್ಷದಂದೇ ಬಿಸಿಸಿಐ ಮಹತ್ವದ ಸಭೆ; ರೋಹಿತ್, ದ್ರಾವಿಡ್​, ಲಕ್ಷ್ಮಣ್​ಗೆ ಬಿಗ್​ಬಾಸ್​ಗಳ ಆಹ್ವಾನ

BCCI: ವಿಶ್ವದ ಕ್ರಿಕೆಟ್​ ಪ್ರೇಮಿಗಳೆಲ್ಲಾ ಕುತೂಹಲದಿಂದ ವೀಕ್ಷಿಸಿದ್ದ ಪುರುಷರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ, ಟೀಮ್ ಇಂಡಿಯಾದ ಪ್ರದರ್ಶನವನ್ನು ವಿಮರ್ಶಿಸಲು ಬಿಸಿಸಿಐ ನಿರ್ಧರಿಸಿದೆ.

BCCI: ಹೊಸ ವರ್ಷದಂದೇ ಬಿಸಿಸಿಐ ಮಹತ್ವದ ಸಭೆ; ರೋಹಿತ್, ದ್ರಾವಿಡ್​, ಲಕ್ಷ್ಮಣ್​ಗೆ ಬಿಗ್​ಬಾಸ್​ಗಳ ಆಹ್ವಾನ
ದ್ರಾವಿಡ್, ರೋಹಿತ್, ಲಕ್ಷ್ಮಣ್Image Credit source: insidesport
Follow us
TV9 Web
| Updated By: ಪೃಥ್ವಿಶಂಕರ

Updated on:Dec 31, 2022 | 10:28 AM

ಟಿ20 ವಿಶ್ವಕಪ್ (T20 World Cup)​ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ (India vs England) ಹೀನಾಯ ಸೋಲನುಭವಿಸಿತ್ತು. ಆವತ್ತು ಆಂಗ್ಲರೆದುರು ಮೆನ್ ಇನ್ ಬ್ಲೂ ನೀಡಿದ ಪ್ರದರ್ಶನ, ಬಿಸಿಸಿಐ (BCCI) ಕೆಂಗಣ್ಣು ಬಿಡುವಂತೆ ಮಾಡಿತ್ತು. ಇದೇ ಕಾರಣಕ್ಕಾಗಿ ಬಿಸಿಸಿಐ ಈಗ ಸಭೆ ಕರೆದಿದೆ. ಭಾರತೀಯ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆಗಳಾಗುವ ಮುನ್ಸೂಚನೆ ಈ ಮೊದಲೇ ಸಿಕ್ಕಿತ್ತು. ಇದಕ್ಕೆ ಪುಷ್ಟಿ ನೀಡುವಂತೆ, ಬಿಸಿಸಿಐಯಲ್ಲೀಗ ಮತ್ತೊಂದು ಬೆಳವಣಿಗೆಯಾಗಿದೆ. ಟೀಮ್ ಇಂಡಿಯಾದ ಇಡೀ ಚಿತ್ರಣ ಬದಲಾಗೋ ಸುಳಿವನ್ನು ಈ ಬೆಳವಣಿಗೆಯೇ ನೀಡಿದೆ. ಅಂದ್ರೆ, ಟಿ20 ವಿಶ್ವಕಪ್​ನಲ್ಲಿನ ಪ್ರದರ್ಶನವನ್ನು ಪರಾಮರ್ಶಿಸುವ ಸಲುವಾಗಿ ಬಿಸಿಸಿಐ ಮೀಟಿಂಗ್ ಕರೆದಿದೆ. ಮೀಟಿಂಗ್​ ಬಳಿಕ ಟೀಮ್ ಇಂಡಿಯಾದ ದಿಕ್ಸೂಚಿಯೇ ಬದಲಾಗಲಿದೆ.

ಸಭೆಯಲ್ಲಿ ಪಾಲ್ಗೊಳ್ಳಲು ರೋಹಿತ್, ದ್ರಾವಿಡ್​, ಲಕ್ಷ್ಮಣ್​ಗೆ ಸೂಚನೆ

ವಿಶ್ವದ ಕ್ರಿಕೆಟ್​ ಪ್ರೇಮಿಗಳೆಲ್ಲಾ ಕುತೂಹಲದಿಂದ ವೀಕ್ಷಿಸಿದ್ದ ಪುರುಷರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ, ಟೀಮ್ ಇಂಡಿಯಾದ ಪ್ರದರ್ಶನವನ್ನು ವಿಮರ್ಶಿಸಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿಯೇ ನಾಳೆ, ಅಂದ್ರೆ ಜನವರಿ 1ರಂದು ಮುಂಬೈನಲ್ಲಿ ಸಭೆ ನಡೆಸೋದಾಗಿ ಬಿಸಿಸಿಐ ಹೇಳಿದೆ. ಸಭೆಯಲ್ಲಿ ಪಾಲ್ಗೊಳ್ಳುವಂತೆ ಈಗಾಗಲೇ ನಾಯಕ ರೋಹಿತ್ ಶರ್ಮಾ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್​ಗೆ ಬಿಸಿಸಿಐ ಸಂದೇಶ ರವಾನಿಸಿದೆ.

Rishabh Pant accident: ಹೊರಬಿತ್ತು ರಿಷಬ್ ಪಂತ್ ಎಕ್ಸ್-ರೇ ರಿಪೋರ್ಟ್; ಬಿಸಿಸಿಐ ನೀಡಿದ ಹೇಳಿಕೆಯಲ್ಲೇನಿದೆ?

ಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನವೇ ಬಿಸಿಸಿಐ ಮಹತ್ವದ ಸಭೆ!

ಭಾರತಕ್ಕೆ ಪ್ರವಾಸ ಬರಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಇಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಜನವರಿ 3ರಿಂದ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಗೂ ಮುನ್ನವೇ ಬಿಸಿಸಿಐ ಮಹತ್ವದ ಸಭೆ ಕರೆದಿರೋದು ಕುತೂಹಲ ಮೂಡಿಸಿದೆ. ಯಾಕಂದ್ರೆ, 2023ರಲ್ಲಿ ಶ್ರೀಲಂಕಾ ವಿರುದ್ಧವೇ ಭಾರತ ತಂಡ ಚೊಚ್ಚಲ ಸರಣಿ ಆಡ್ತಿದೆ. ಈ ಸರಣಿಗೂ ಮುನ್ನವೇ ಬಿಸಿಸಿಐ ಸಭೆ ಕರೆದಿರೋದ್ರಿಂದ, ಹೊಸ ವರ್ಷದ ಆರಂಭದಿಂದಲೇ ಟೀಮ್ ಇಂಡಿಯಾದಲ್ಲಿ ಹೊಸ ಯುಗ ಶುರುವಾಗಲಿದ್ಯಾ ಅನ್ನೋ ಅನುಮಾನ ಮೂಡಿಸಿದೆ.

ಸೆ.ಫೈನಲ್​ನಲ್ಲಿ ಮುಗ್ಗರಿಸಿದ್ದ ಭಾರತ.. ಆಂಗ್ಲರೆದುರು ಹೀನಾಯ ಸೋಲು!

ಬಿಸಿಸಿಐ ಹೀಗೆ ಗಂಭೀರ ಸಭೆ ಕರೆದಿರೋದಕ್ಕೆ ಕಾರಣವಿದೆ. ಅದೇನಂದ್ರೆ, ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ರೋಹಿತ್ ಪಡೆ 10 ವಿಕೆಟ್​ಗಳಿಂದ ಹೀನಾಯವಾಗಿ ಸೋತಿತ್ತು. ಅಡಿಲೇಡ್ ಓವಲ್​ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ಎದುರಾಳಿಗೆ ಕೇವಲ 167 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಇಂಗ್ಲೆಂಡ್, 16 ಓವರ್​ಗಳಲ್ಲಿ ಅದೂ ಕೂಡ ವಿಕೆಟ್ ನಷ್ಟವಿಲ್ಲದೆ ಚೇಸ್ ಮಾಡಿತ್ತು. ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಸೋತು ಹೊರಬಿದ್ದಿದ್ದಲ್ಲದೆ, ಟಿ20 ವಿಶ್ವಕಪ್​ನಲ್ಲೂ ರೋಹಿತ್ ಪಡೆ ನೀರಸ ಪ್ರದರ್ಶನ ನೀಡಿತು ನೋಡಿ, ಇದೇ ಬಿಸಿಸಿಐಯನ್ನು ಕೆರಳಿಸಿಬಿಟ್ಟಿತ್ತು.

ಬಿಸಿಸಿಐಯ ಸಭೆಯ ಬಳಿಕ, ಟೀಮ್ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಗಳಾಗೋದಂತೂ ಪಕ್ಕಾ ಎನಿಸಿದೆ. ಯಾಕಂದ್ರೆ, ಟಿ20ನಾಯಕತ್ವದಿಂದ ರೋಹಿತ್​ನನ್ನು ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಾಗೆ ಪಟ್ಟಾಭಿಷೇಕ ಮಾಡಲು ಬಿಸಿಸಿಐ ಪ್ಲ್ಯಾನ್ ಹಾಕಿಕೊಂಡಿದೆ ಅಂತ ಕ್ರಿಕೆಟ್ ಲೋಕ ಮಾತನಾಡಿಕೊಳ್ತಿದೆ. ಅಷ್ಟೇ ಅಲ್ಲ, 2024 ರ ಟಿ20 ವಿಶ್ವಕಪ್​ಗೆ ಸಂಪೂರ್ಣ ಹೊಸ ತಂಡವನ್ನೇ ರಚಿಸೋ ಆಲೋಚನೆ ಬಿಸಿಸಿಐ ತಲೆಯಲ್ಲಿದೆ ಅನ್ನೋ ಮಾತುಗಳೂ ಕೇಳಿಬರ್ತಿವೆ. ಒಟ್ಟಿನಲ್ಲಿ ನಾಳಿನ ಸಭೆಯ ಬಳಿಕ ನಮ್ಮ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳು ಸಿಗಲಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:27 am, Sat, 31 December 22

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು