VIDEO: ವಿದೇಶಿ ನೆಲದಲ್ಲಿ ಚೊಚ್ಚಲ ಟೆಸ್ಟ್ ಶತಕ ಗಳಿಸಿದ ರೋಹಿತ್; ಬಾಲ್ಕನಿಯಿಂದಲೇ ಫ್ಲೈಯಿಂಗ್ ಕಿಸ್ ಕೊಟ್ಟ ಹೃತಿಕಾ

Rohit Sharma: ರೋಹಿತ್ ಈ ಸಾಧನೆಗೆ ಫಿದಾ ಆಗಿರುವ ಅವರ ಪತ್ನಿ ಹೃತಿಕಾ ಕೂಡ ಹರ್ಷಗೊಂಡಿದ್ದಾರೆ. ಅವರು ರೋಹಿತ್‌ ಶತಕ ಗಳಿಸಿದ ಕೂಡಲೇ ಬಾಲ್ಕನಿಯಿಂದಲೇ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಅಭಿನಂದಿಸಿದರು.

VIDEO: ವಿದೇಶಿ ನೆಲದಲ್ಲಿ ಚೊಚ್ಚಲ ಟೆಸ್ಟ್ ಶತಕ ಗಳಿಸಿದ ರೋಹಿತ್; ಬಾಲ್ಕನಿಯಿಂದಲೇ ಫ್ಲೈಯಿಂಗ್ ಕಿಸ್ ಕೊಟ್ಟ ಹೃತಿಕಾ
ರೋಹಿತ್ ಶರ್ಮಾ ದಂಪತಿ
Follow us
TV9 Web
| Updated By: ಪೃಥ್ವಿಶಂಕರ

Updated on: Sep 05, 2021 | 5:53 PM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರವಾಸವು ತುಂಬಾ ವರ್ಣಮಯವಾಗಿದೆ. ಮೊದಲ ಪಂದ್ಯ ಡ್ರಾದಲ್ಲಿ ಕೊನೆಗೊಂಡ ನಂತರ, ಭಾರತ ಎರಡನೇ ಪಂದ್ಯವನ್ನು ಗೆದ್ದಿತು ಮತ್ತು ಇಂಗ್ಲೆಂಡ್ ಮೂರನೇ ಪಂದ್ಯವನ್ನು ಗೆದ್ದಿತು. ಈಗ ನಾಲ್ಕನೇ ಟೆಸ್ಟ್ ಭರದಿಂದ ಸಾಗಿದೆ. ಏತನ್ಮಧ್ಯೆ, ನಾಲ್ಕನೇ ಟೆಸ್ಟ್​ನ ಮೂರನೇ ದಿನದಂದು ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ವಿದೇಶಿ ನೆಲದಲ್ಲಿ ಚೊಚ್ಚಲ ಟೆಸ್ಟ್ ಶತಕ ಗಳಿಸಿದ್ದಾರೆ. ಭಾರತೀಯರೆಲ್ಲರೂ ರೋಹಿತ್​ ಅವರ ಈ ಶತಕಕ್ಕೆ ಚಪ್ಪಾಳೆಯ ಸುರಿಮಳೆಗೈದಿದ್ದಾರೆ. ರೋಹಿತ್ ಈ ಸಾಧನೆಗೆ ಫಿದಾ ಆಗಿರುವ ಅವರ ಪತ್ನಿ ಹೃತಿಕಾ ಕೂಡ ಹರ್ಷಗೊಂಡಿದ್ದಾರೆ. ಅವರು ರೋಹಿತ್‌ ಶತಕ ಗಳಿಸಿದ ಕೂಡಲೇ ಬಾಲ್ಕನಿಯಿಂದಲೇ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಅಭಿನಂದಿಸಿದರು.

ಒಂದೆಡೆ, ಇತರ ಭಾರತೀಯ ಬ್ಯಾಟ್ಸ್‌ಮನ್‌ಗಳು ಹೆಣಗಾಡುತ್ತಿರುವುದು ಕಂಡುಬಂದರೆ, ರೋಹಿತ್ ಶರ್ಮಾ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಅದ್ಭುತವಾಗಿ ಆಡಿದರು ಮತ್ತು ಲಾರ್ಡ್ಸ್ ಮತ್ತು ಹೆಡಿಂಗ್ಲಿಯಲ್ಲಿ ಟೆಸ್ಟ್ ನಲ್ಲಿ ಅರ್ಧ ಶತಕಗಳನ್ನು ಗಳಿಸಿದರು. ಆದರೆ ಆ ಅರ್ಧ ಶತಕಗಳನ್ನು ಶತಕಗಳಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಓವಲ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ರೋಹಿತ್ ಈ ಸಾಧನೆ ಮಾಡಿದರು. ಅವರ ಪ್ರದರ್ಶನದ ನಂತರ, ಎಲ್ಲೆಡೆ ಅವರನ್ನು ಅಭಿನಂದಿಸಲಾಗುತ್ತಿದೆ ಮತ್ತು ಅವರ ಪತ್ನಿ ಹೃತಿಕಾ ನೀಡಿದ ಫ್ಲೈಯಿಂಗ್ ಕಿಸ್​ನ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ರೋಹಿತ್ ಹಲವು ದಾಖಲೆಗಳನ್ನು ಮಾಡಿದ್ದಾರೆ ಏತನ್ಮಧ್ಯೆ, ರೋಹಿತ್ ಇನ್ನಿಂಗ್ಸ್ 127 ರನ್ ಗಳಿಗೆ ಕೊನೆಗೊಂಡಿತು. ಆದರೆ ಅದಕ್ಕೂ ಮೊದಲು ಅವರು ತಮ್ಮ ಹೆಸರಿಗೆ ಹಲವು ದಾಖಲೆಗಳನ್ನು ಮಾಡಿದ್ದಾರೆ. ಇಂದಿನ ಶತಕದ ಮೂಲಕ ರೋಹಿತ್ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ 15000 ರನ್ ಗಡಿ ದಾಟಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 3000 ರನ್ ಪೂರೈಸಿದ್ದಾರೆ. ರೋಹಿತ್ ಇಂಗ್ಲೆಂಡ್ ವಿರುದ್ಧದ ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ 3000 ರನ್ ಪೂರೈಸಿದ್ದಾರೆ. ಅವರು ಓಪನರ್ ಆಗಿ 11000 ರನ್ ಗಳಿಸಿದ್ದಾರೆ. 2021 ರಲ್ಲಿ, ರೋಹಿತ್ 1000 ಅಂತರಾಷ್ಟ್ರೀಯ ರನ್ ಗಳಿಸಿದ್ದಾರೆ.

ರೋಹಿತ್ ನವೆಂಬರ್ 2013 ರಲ್ಲಿ ಕೋಲ್ಕತ್ತಾದಲ್ಲಿ ಚೊಚ್ಚಲ ಟೆಸ್ಟ್ ಆಡಿದರು. ಆದರೆ ರೋಹಿತ್ ಏಳು ವರ್ಷಗಳ ನಂತರ (2021) ಇಂಗ್ಲೆಂಡಿನಲ್ಲಿ ಈ ಬಾರಿ ಈ ಕೊರತೆಯನ್ನು ತುಂಬಿದರು. ಸಿಕ್ಸರ್ ಬಾರಿಸಿ ರೋಹಿತ್ ಟೆಸ್ಟ್ ಶತಕ ಪೂರೈಸುತ್ತಿರುವುದು ಇದು ಮೂರನೇ ಬಾರಿ.