Road safety world series: ಮತ್ತೆ ಕ್ರಿಕೆಟ್ ಮೈದಾನಕ್ಕೆ ದಿಗ್ಗಜರು; ಭಾರತ- ಪಾಕ್ ನಡುವೆ ಕ್ರಿಕೆಟ್ ಕದನ! ಯಾವಾಗ?
Road safety world series: ಮಾರ್ಚ್ 12 ರಂದು ಯುಎಇಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಒಟ್ಟು 38 ಪಂದ್ಯಗಳು ನಡೆಯಲಿವೆ. ಲೀಗ್ ಹಂತವು ಮಾರ್ಚ್ 15 ರವರೆಗೆ ನಡೆಯಲಿದ್ದು ಒಟ್ಟು 35 ಪಂದ್ಯಗಳು ಮತ್ತು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ನ ಎರಡನೇ ಸೀಸನ್ ಆರಂಭವಾಗದೆ. ಹೀಗಾಗಿ ಮತ್ತೊಮ್ಮೆ ಮಾಜಿ ಆಟಗಾರರ ವೈಭವವನ್ನು ಕ್ರಿಕೆಟ್ ಮೈದಾನದಲ್ಲಿ ನೋಡುವ ಅವಕಾಶ ಸಿಗಲಿದೆ. ಈ ಲೀಗ್ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿದೆ. ಭಾರತದಲ್ಲಿ ಈ T20 ಲೀಗ್ ಫೆಬ್ರವರಿ 5-2022 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 1 ರಿಂದ ಇದು ಯುಎಇಯಲ್ಲಿ ನಡೆಯಲಿದೆ. ಈ ಋತುವಿನ ಫೈನಲ್ ಪಂದ್ಯ ಮಾರ್ಚ್ 19 ರಂದು ನಡೆಯಲಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸುತ್ತಾರೆ. ಈ ಟೂರ್ನಿಯಲ್ಲಿ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಕಳೆದ ವರ್ಷ ನಡೆದ ಲೀಗ್‌ನ ಮೊದಲ ಸೀಸನ್‌ನಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಮೊಹಮ್ಮದ್ ಕೈಫ್ ಯೂಸುಫ್ ಪಠಾಣ್ ಭಾರತ ಪರ ಆಡಿದ್ದರು. ಭಾರತವಲ್ಲದೆ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳೂ ಇದರಲ್ಲಿ ಆಡಿದ್ದವು. ಈ ತಂಡಗಳಲ್ಲಿ ಜಾಂಟಿ ರೋಡ್ಸ್, ಕಾರ್ಲ್ ಹೂಪರ್, ಬ್ರಿಯಾನ್ ಲಾರಾ, ತಿಲಕರತ್ನೆ ದಿಲ್ಶನ್, ಕಾರ್ಲ್ ಹೂಪರ್ ಮುಂತಾದ ಆಟಗಾರರೂ ಆಡಿದ್ದಾರೆ. ಈ ಬಾರಿಯೂ ಈ ಆಟಗಾರರು ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಮಾರ್ಚ್ 12 ರಂದು ಮೊದಲ ಪಂದ್ಯ ಇಂಡಿಯಾ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್, ಸೌತ್ ಆಫ್ರಿಕಾ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ನ್ಯೂಜಿಲೆಂಡ್ ಲೆಜೆಂಡ್ಸ್, ಪಾಕಿಸ್ತಾನ್ ಲೆಜೆಂಡ್ಸ್, ಬಾಂಗ್ಲಾದೇಶ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್ ತಂಡಗಳು ಪ್ರಸಕ್ತ ಲೀಗ್‌ನಲ್ಲಿ ಭಾಗವಹಿಸಲಿವೆ. ಮೊದಲ ಪಂದ್ಯ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿದೆ. ಮಾರ್ಚ್ 12 ರಂದು ಯುಎಇಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಒಟ್ಟು 38 ಪಂದ್ಯಗಳು ನಡೆಯಲಿವೆ. ಲೀಗ್ ಹಂತವು ಮಾರ್ಚ್ 15 ರವರೆಗೆ ನಡೆಯಲಿದ್ದು ಒಟ್ಟು 35 ಪಂದ್ಯಗಳು ಮತ್ತು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಈ ಸೆಮಿಫೈನಲ್ ಪಂದ್ಯಗಳು ಮಾರ್ಚ್ 16 ಮತ್ತು 17 ರಂದು ನಡೆಯಲಿವೆ. ಫೈನಲ್ ಪಂದ್ಯ ಮಾರ್ಚ್ 19 ರಂದು ನಡೆಯಲಿದೆ. ಆದರೆ, ಪಂದ್ಯಾವಳಿಗೆ ತಂಡಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ.
ಈ ಪಂದ್ಯಾವಳಿ ನಡೆಯುವ ಉದ್ದೇಶ? ಜನರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಪಂದ್ಯಾವಳಿಯ ಹಿಂದಿನ ಉದ್ದೇಶವಾಗಿದೆ. ಎರಡನೇ ಋತುವಿನಲ್ಲಿ 160 ಕ್ಕೂ ಹೆಚ್ಚು ನಿವೃತ್ತ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಈ ಸರಣಿಯನ್ನು MSPL ಮತ್ತು ANZA ಇನ್ವೆಸ್ಟ್‌ಮೆಂಟ್ ಗ್ರೂಪ್ ಅದ್ಧೂರಿಯಾಗಿ ಆಯೋಜಿಸುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ಇದನ್ನು ಖಚಿತಪಡಿಸಿದ್ದಾರೆ. ಸಂಘಟಕರು ANZA ಇನ್ವೆಸ್ಟ್‌ಮೆಂಟ್ ಗ್ರೂಪ್‌ಗೆ ಮೆಗಾ ಈವೆಂಟ್‌ಗೆ NOC ಅನ್ನು ಸಹ ನೀಡಿದ್ದಾರೆ. ANZA ಇನ್ವೆಸ್ಟ್ಮೆಂಟ್ ಗ್ರೂಪ್ ಹಿಸ್ ಹೈನೆಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ನಾಹ್ಯಾನ್ ಅವರ ಸಮೂಹ ಕಂಪನಿಯಾಗಿದೆ.