
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಈ ಸೀಸನ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಡಿರುವ 13 ಪಂದ್ಯಗಳಲ್ಲಿ ಮುಂಬೈ ಕೇವಲ 4 ಪಂದ್ಯಗಳನ್ನು ಗೆದ್ದು ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ತಂಡದ ಈ ಕಳಪೆ ಪ್ರದರ್ಶನಕ್ಕೆ ಆಟಗಾರರ ಸ್ಥಿರ ಪ್ರದರ್ಶನದಲ್ಲಿನ ಕೊರೆತೆಯೇ ಪ್ರಮುಖ ಕಾರಣ ಎನ್ನಬಹುದು. ಅದರಲ್ಲೂ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದು ಕೂಡ ತಂಡವನ್ನು ಸಂಕಷ್ಟಕ್ಕೆ ದೂಡಿತು. ರೋಹಿತ್ ಪಂದ್ಯವನ್ನು ಆಡದಿದ್ದರೂ ಅವರ ಅಭಿಮಾನಿಗಳ ಬಳಗ ಕೊಂಚವೂ ಕಡಿಮೆ ಆಗಿಲ್ಲ. ಅವರನ್ನು ನೋಡುವುದಕ್ಕಾಗಿಯೇ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಾರೆ. ಅದರಂತೆ ಅವರನ್ನು ನೋಡಲು ತಂಡದ ಹೋಟೆಲ್ ಹೊರಗೆ ಕಾಯುತ್ತಿದ್ದ ಅಭಿಮಾನಿಯೊಬ್ಬರಿಗೆ ರೋಹಿತ್ ದರ್ಶನವಾಗಿಲ್ಲ. ಇದರಿಂದ ಬೇಸರಗೊಂಡ ಆ ಅಭಿಮಾನಿ ಅಲ್ಲಿಯೇ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸ್ವತಃ ರೋಹಿತ್ ಅವರೇ ಆ ಅಭಿಮಾನಿ ಬಳಿ ಕ್ಷಮೆಯಾಚಿಸಿದ್ದಾರೆ.
ವಾಸ್ತವವಾಗಿ ಈಡನ್ ಗಾರ್ಡನ್ಸ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆದಿತ್ತಿ. ಈ ಸಂದರ್ಭದಲ್ಲಿ, ಮುಂಬೈ ತಂಡ ತಂಗಿದ್ದ ಹೋಟೆಲ್ ಹೊರಗೆ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ರೋಹಿತ್ ಶರ್ಮಾ ಅವರನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಜಮಾಯಿಸಿದ್ದರು. ಆ ಜನಸಂದಣಿಯಲ್ಲಿ ಯುವತಿಯೂ ಕೂಡ ಬಹಳ ಹೊತ್ತು ರೋಹಿತ್ಗಾಗಿ ಕಾಯುತ್ತಿದ್ದರು. ಆದಾಗ್ಯೂ, ಭಾರಿ ಜನಸಂದಣಿ ಮತ್ತು ಭದ್ರತಾ ಕಾರಣಗಳಿಂದಾಗಿ, ರೋಹಿತ್ ಅವರನ್ನು ಗಮನಿಸದೆ ತೆರಳಿದ್ದರು. ಇದರಿಂದ ನಿರಾಶೆಗೊಂಡಿದ್ದ ಆಕೆ ಅಲ್ಲಿಯೇ ಕಣ್ಣೀರಿಟ್ಟಿದ್ದರು. ಆ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
A cute fangirl started crying because she couldn’t meet Rohit Sharma. She tried a lot, but couldn’t meet him, so she began crying loudly.😭❤️
Next level madness for boss @ImRo45 🐐 pic.twitter.com/xJN5Y8PyTy
— 𝐑𝐮𝐬𝐡𝐢𝐢𝐢⁴⁵ (@rushiii_12) May 19, 2026
Rohit Sharma apologized to the fangirl who started crying at Eden Gardens after not being able to meet him. Rohit made a special video for her and said sorry, and he also promised that he would meet her the next time he comes to Kolkata.🥹❤️
bRO doesn’t disappoint his fans.🙌 pic.twitter.com/NA5FR9AlMM
— 𝐑𝐮𝐬𝐡𝐢𝐢𝐢⁴⁵ (@rushiii_12) May 23, 2026
ಸಾಮಾನ್ಯವಾಗಿ ಎಷ್ಟೇ ದೊಡ್ಡ ಸ್ಟಾರ್ ಆಟಗಾರನಾಗಿದ್ದರೂ, ಇಂತಹ ಸಣ್ಣ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಇದಕ್ಕೆ ತದ್ವೀರುದ್ದವಾಗಿರುವ ರೋಹಿತ್ ಶರ್ಮಾ ಯುವತಿಯ ಅಳುವ ವಿಡಿಯೋ ನೋಡಿದ ತಕ್ಷಣ ಪ್ರತಿಕ್ರಿಯಿಸಿದ್ದು, ‘ಕ್ಷಮಿಸಿ.. ಆ ಸಮಯದಲ್ಲಿ ನಾನು ನಿಮ್ಮನ್ನು ಈಡನ್ ಗಾರ್ಡನ್ಸ್‌ನಲ್ಲಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ನಾನು ನಿಮ್ಮ ವೀಡಿಯೊವನ್ನು ನೋಡಿದೆ. ಮೈದಾನದ ಹೊರಗೆ, ಹೋಟೆಲ್‌ನಲ್ಲಿ, ಕೆಲವೊಮ್ಮೆ ಬಹಳಷ್ಟು ಜನಸಂದಣಿ ಮತ್ತು ಜೋರಾದ ಶಬ್ದಗಳು ಇರುತ್ತವೆ. ಅದಕ್ಕಾಗಿಯೇ ನನ್ನ ಗಮನ ನಿಮ್ಮ ಮೇಲೆ ಬೀಳಲಿಲ್ಲ. ಆದರೆ ನಾನು ನಿಮಗೆ ಭರವಸೆ ನೀಡುತ್ತೇನೆ, ಮುಂದಿನ ಬಾರಿ ನಾನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ಗೆ ಬಂದಾಗ, ನಾನು ಖಂಡಿತವಾಗಿಯೂ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ