ಕಂಬ್ಯಾಕ್ ನಿರೀಕ್ಷೆಯಲ್ಲಿರುವ ರೋಹಿತ್ ಶರ್ಮಾಗೆ ಅಗ್ನಿ’ಪರೀಕ್ಷೆ’
Rohit Sharma: ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದಾಗ್ಯೂ ಅವರು 2027ರ ಏಕದಿನ ವಿಶ್ವಕಪ್ವರೆಗೆ ಒಡಿಐ ಕ್ರಿಕೆಟ್ನಲ್ಲಿ ಮುಂದುವರೆಯಲು ಬಯಸಿದ್ದಾರೆ. ಆದರೆ ಅದಕ್ಕೂ ಮುನ್ನ ಯೋ-ಯೋ ಟೆಸ್ಟ್ನಲ್ಲಿ ಪಾಸಾಗಬೇಕೆಂದು ಬಿಸಿಸಿಐ ರೋಹಿತ್ ಶರ್ಮಾ ಅವರಿಗೆ ನಿರ್ದೇಶಿಸಿದೆ.

ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಸೆಪ್ಟೆಂಬರ್ 13 ರಂದು ಯೋ-ಯೋ ಟೆಸ್ಟ್ಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಹಿಟ್ಮ್ಯಾನ್ ಅವರ ದೈಹಿಕ ಫಿಟ್‍ನೆಸ್ ಅನ್ನು ಪರೀಕ್ಷಿಸಲು ಬಿಸಿಸಿಐ ನಿರ್ಧರಿಸಿದ್ದು, ಇದಕ್ಕಾಗಿ ಅವರಿಗೆ 2 ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ನಿರ್ದೇಶಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅದರಂತೆ ಸೆಪ್ಟೆಂಬರ್ 13 ರಂದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ರೋಹಿತ್ ಶರ್ಮಾ ಫಿಟ್‍ನೆಸ್ ಟೆಸ್ಟ್ಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಅವರು ಯೋ-ಯೋ ಟೆಸ್ಟ್ ಹಾಗೂ ಬ್ರಾಂಕೋ ಟೆಸ್ಟ್ಗೆ ಒಳಗಾಗಲಿದ್ದಾರೆ. ಬ್ರಾಂಕೋ ಟೆಸ್ಟ್ ಎಂಬುದು ರಗ್ಬಿ ಆಟಗಾರರ ಫಿಟ್‍ನೆಸ್ ಪರೀಕ್ಷೆಗಾಗಿ ಬಳಸಲಾಗುವ ಟೆಸ್ಟ್.
ಇದೀಗ ಇದನ್ನು ಭಾರತೀಯ ಆಟಗಾರರ ದೈಹಿಕ ಪರೀಕ್ಷಾ ಸಾಮರ್ಥ್ಯವನ್ನು ಅಳೆಯಲು ಬಳಸಲು ನಿರ್ಧರಿಸಲಾಗಿದೆ. ಅದರಂತೆ ರೋಹಿತ್ ಶರ್ಮಾ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಯೋ-ಯೋ ಟೆಸ್ಟ್ ಜೊತೆ ಬ್ರಾಂಕೋ ಟೆಸ್ಟ್ಗೂ ಒಳಗಾಗಲಿದ್ದಾರೆ.
ಏನಿದು ಯೋ ಯೋ ಟೆಸ್ಟ್?
ಟೀಮ್ ಇಂಡಿಯಾ ಆಟಗಾರರ ಫಿಟ್‍ನೆಸ್ ಟೆಸ್ಟ್ ಹಲವು ದೈಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಯೋ ಯೋ ಟೆಸ್ಟ್ ಪಾಸಾಗಲೇಬೇಕು. ಇಲ್ಲಿ ಕ್ರಮಬದ್ಧ ಹಾಗೂ ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಈ ಫಿಟ್‍ನೆಸ್ ಟೆಸ್ಟ್ನಲ್ಲಿ 20 ಮೀಟರ್ ಅಳತೆಯಲ್ಲಿ ಎರಡು ಕೋನಗಳನ್ನು ನೇರವಾಗಿ ಇರಿಸಲಾಗಿರುತ್ತದೆ. ಇಲ್ಲಿ ಆಟಗಾರನು ಓಟವನ್ನು ಆರಂಭಿಸಿ, ಎರಡು ಲೈನ್ಗಳಲ್ಲಿಟ್ಟಿರುವ ಕೋನಗಳ ಬೀಪ್ ಧ್ವನಿಯನ್ನು ಅನುಸರಿಸಿ ತನ್ನ ದೂರವನ್ನು ಕ್ರಮಿಸಬೇಕಾಗುತ್ತದೆ.
ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ ಶಾಕಿಬ್ ಅಲ್ ಹಸನ್..!
ಹಾಗೆಯೇ ಈ ಟೆಸ್ಟ್ನಲ್ಲಿ 8.15 ನಿಮಿಷದೊಳಗೆ 2 ಕಿ. ಮೀಟರ್ ಓಡಬೇಕಾಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಫೇಲ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಅಂಕಗಳು ತಂತ್ರಾಂಶ ಆಧಾರಿತವಾಗಿದ್ದು, ಹೀಗಾಗಿ ಯಾವುದೇ ಸುತ್ತಿನಲ್ಲಿ ಎಡವಿದರೂ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿಯೇ ಯೋ ಯೋ ಟೆಸ್ಟ್ ಪಾಸಾಗುವುದು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಅಗ್ನಿ ಪರೀಕ್ಷೆ ಎಂದು ವಿಶ್ಲೇಷಿಸಲಾಗುತ್ತಿದೆ.
ರೋಹಿತ್ ಶರ್ಮಾಗೆ ಯೋ ಯೋ ಟೆಸ್ಟ್ ಯಾಕೆ?
ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅಲ್ಲದೆ ಕಳೆದ 6 ತಿಂಗಳಿಂದ ಟೀಮ್ ಇಂಡಿಯಾ ಪರ ಯಾವುದೇ ಪಂದ್ಯವಾಡಿಲ್ಲ. ಇದಾಗ್ಯೂ ಅವರು 2027ರ ಏಕದಿನ ವಿಶ್ವಕಪ್ ಆಡುವ ಇಂಗಿತದಲ್ಲಿದ್ದಾರೆ. ಅದಕ್ಕೂ ಮುನ್ನ ಅವರನ್ನು ಫಿಟ್‍ನೆಸ್ ಟೆಸ್ಟ್ಗೆ ಒಳಪಡಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.
