ಬದಲಾಗದಿದ್ದರೆ ಟಿ20 ವಿಶ್ವಕಪ್ ಗೆಲ್ಲಲಾಗುವುದಿಲ್ಲ; ಬಿಸಿಸಿಐಗೆ ತಲೆನೋವಾದ ಕೊಹ್ಲಿ, ರೋಹಿತ್, ರಾಹುಲ್..!

| Updated By: ಪೃಥ್ವಿಶಂಕರ

Updated on: Sep 01, 2022 | 5:41 PM

Asia Cup 2022: ಏಷ್ಯಾಕಪ್ ಆರಂಭಕ್ಕೂ ಮುನ್ನ ಮಾತನಾಡಿದ್ದ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್, ಟಿ20 ಕ್ರಿಕೆಟ್ ಆಡುವ ರೀತಿ ಬದಲಾಗಿದ್ದು, ನಾವು ಹೆದರದೆ ಆಕ್ರಮಣಕಾರಿ ಕ್ರಿಕೆಟ್ ಆಡುತ್ತೇನೆ ಎಂದು ಹೇಳಿದ್ದರು.

ಬದಲಾಗದಿದ್ದರೆ ಟಿ20 ವಿಶ್ವಕಪ್ ಗೆಲ್ಲಲಾಗುವುದಿಲ್ಲ; ಬಿಸಿಸಿಐಗೆ ತಲೆನೋವಾದ ಕೊಹ್ಲಿ, ರೋಹಿತ್, ರಾಹುಲ್..!
Follow us on

ಏಷ್ಯಾಕಪ್‌ನಲ್ಲಿ (Asia Cup 2022) ಟೀಂ ಇಂಡಿಯಾ ಸತತ ಎರಡು ಪಂದ್ಯಗಳನ್ನು ಗೆದ್ದಿದೆ. ವಾಸ್ತವವಾಗಿ, ಒಮ್ಮೊಮ್ಮೆ ತಂಡದ ಗೆಲುವು ಒಬ್ಬ ಆಟಗಾರನ ಪ್ರದರ್ಶನದ ಮೇಲೆ ನಿರ್ಧಾರವಾಗುತ್ತದೆ. ಆದರೆ ಟೀಮ್ ಇಂಡಿಯಾ ತನ್ನ ಗೆಲುವನ್ನು ಸಂಭ್ರಮಿಸುವ ಬದಲು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ಮಾಡಿದೆ. ಟೀಂ ಇಂಡಿಯಾ ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳನ್ನು ಸೋಲಿಸಿತು. ಆದರೆ ಈ ಎರಡು ವಿಜಯಗಳಲ್ಲಿ ಹಳೆಯ ಟೀಂ ಇಂಡಿಯಾ ಕಾಣಿಸಿಕೊಂಡಿಲ್ಲ. ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿತ್ತಾದರೂ ಆ ಗೆಲುವಿನಲ್ಲಿ ಭಾರತದ ಬ್ಯಾಟಿಂಗ್‌ ವಿಶೇಷವಾಗಿರಲಿಲ್ಲ. ನಿನ್ನೆ ಹಾಂಕಾಂಗ್ ವಿರುದ್ಧ ಆಡುವಾಗಲೂ ಮೊದಲ 10 ಓವರ್‌ಗಳಲ್ಲಿ ಭಾರತದ ಬ್ಯಾಟಿಂಗ್ ಟಿ20 ಕ್ರಿಕೆಟ್‌ಗೆ ಸೂಕ್ತವಾಗಿರಲಿಲ್ಲ. ಏಷ್ಯಾಕಪ್ ಆರಂಭಕ್ಕೂ ಮುನ್ನ ಮಾತನಾಡಿದ್ದ ರೋಹಿತ್ ಶರ್ಮಾ (Rohit Sharma) ಮತ್ತು ರಾಹುಲ್ ದ್ರಾವಿಡ್, ಟಿ20 ಕ್ರಿಕೆಟ್ ಆಡುವ ರೀತಿ ಬದಲಾಗಿದ್ದು, ನಾವು ಹೆದರದೆ ಆಕ್ರಮಣಕಾರಿ ಕ್ರಿಕೆಟ್ ಆಡುತ್ತೇನೆ ಎಂದು ಹೇಳಿದ್ದರು.

ಆ ಉದ್ದೇಶ ಎಲ್ಲೂ ಕಾಣಲಿಲ್ಲ

ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ಮೊದಲ ಎರಡು ವಿಜಯಗಳಲ್ಲಿ ಆ ಉದ್ದೇಶ ಎಲ್ಲೂ ಕಾಣಲಿಲ್ಲ. ಅದು ಕಣ್ಮರೆಯಾಯಿತು. ಮುಖ್ಯವಾಗಿ ಟೀಂ ಇಂಡಿಯಾಗೆ ಸಂಕಷ್ಟ ಹೆಚ್ಚಿಸುತ್ತಿರುವವರು ತಂಡದಲ್ಲಿರುವ ಹಿರಿಯ ಬ್ಯಾಟ್ಸ್​ಮನ್​ಗಳು. ಇದರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆಎಲ್ ರಾಹುಲ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ.

ಇದನ್ನೂ ಓದಿ
ಪಂದ್ಯಕ್ಕೂ ಮುನ್ನ ಬಾಂಗ್ಲಾ- ಲಂಕಾ ತಂಡಗಳ ನಡುವೆ ವಾಕ್ಸಮರ; ಉರಿವ ಬೆಂಕಿಗೆ ತುಪ್ಪ ಸುರಿದ ಜಯವರ್ಧನೆ!
Asia Cup 2022: ಜಡೇಜಾ ರಾಕೆಟ್ ಥ್ರೋಗೆ ಹಾಂಗ್ ಕಾಂಗ್ ನಾಯಕನ ಆಟ 5 ಸೆಕೆಂಡ್‌ಗಳಲ್ಲಿ ಅಂತ್ಯ! ವಿಡಿಯೋ ನೋಡಿ
Asia Cup 2022: 6 ತಿಂಗಳು, 11 ಇನ್ನಿಂಗ್ಸ್​ ಬಳಿಕ ಅರ್ಧಶತಕ ಸಿಡಿಸಿ ಮಿಂಚಿದ ಕಿಂಗ್ ಕೊಹ್ಲಿ..!

ರಾಹುಲ್ ಕಥೆ ಹೇಳಲಾಗದು

ನಿನ್ನೆ ನಡೆದ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಈ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ಮತ್ತು ಸುಲಭವಾಗಿ ಬ್ಯಾಟ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಫಾರ್ಮ್‌ಗೆ ಮರಳಲು ಇದೊಂದು ಉತ್ತಮ ಅವಕಾಶ ಎಂತಲೂ ಪರಿಣಿತರು ಹೇಳಿದ್ದರು. ಆದರೆ ಪರಿಣಿತರ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ಬ್ಯಾಟಿಂಗ್ ಟೀಂ ಇಂಡಿಯಾ ಪಾಳಯದಲ್ಲಿ ಕಂಡಬಂತು. ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ 13 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಆ ಬಳಿಕ ಕೆಎಲ್ ರಾಹುಲ್ ಕೂಡ ಟಿ20 ಕ್ರಿಕೆಟ್‌ಗೆ ಸೂಕ್ತವಾದ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ನಿಧಾನಗತಿಯ ಬ್ಯಾಟಿಂಗ್ ಮಾಡಿದ ಉಪನಾಯಕ 36 ರನ್ ಗಳಿಸಲು ಬರೋಬ್ಬರಿ 39 ಎಸೆತಗಳನ್ನು ತೆಗೆದುಕೊಂಡರು. ಜೊತೆಗೆ ಕ್ರೀಸ್​ನಲ್ಲಿ ರಾಹುಲ್ ಸುಲಭವಾಗಿ ಬ್ಯಾಟಿಂಗ್ ಮಾಡದಿರುವುದು ಗಮನಕ್ಕೆ ಬಂತು.

ವಿರಾಟ್ ಅರ್ಧಶತಕವೇನೋ ಬಾರಿಸಿದರು, ಆದರೆ…?

ಕೆಟ್ಟ ಫಾರ್ಮ್ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಅಂತಿಮವಾಗಿ ಅರ್ಧಶತಕ ಗಳಿಸಿದರು. ಆದರೆ ಆ ಅರ್ಧಶತಕದಲ್ಲಿ ಟಿ20 ಕ್ರಿಕೆಟ್​ನ ರೋಚಕತೆ ಎಲ್ಲೂ ಕಾಣಿಸಲಿಲ್ಲ. ಪಂದ್ಯ ನೋಡಿದ ಎಲ್ಲರಿಗೂ ಇದು ಏಕದಿನ ಅರ್ಧಶತಕದಂತೆ ಭಾಸವಾಯಿತು. 44 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದ ವಿರಾಟ್, 140ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದರು. ಹೀಗಾಗಿ ಮುಂದೆ ಬರಲಿರುವ ಟಿ20 ವಿಶ್ವಕಪ್​ನಲ್ಲಿ ಮೂವರು ಹಿರಿಯ ಆಟಗಾರರು ಇದೇ ರೀತಿಯ ಪ್ರದರ್ಶನ ನೀಡಿದರೆ ಟೀಂ ಇಂಡಿಯಾಗೆ ಚಾಂಪಿಯನ್ ಪಟ್ಟ ಒಲಿಯುವುದು ಅನುಮಾನ. ಅಲ್ಲದೆ ಆಕ್ರಮಣಕಾರಿ ಬ್ಯಾಟಿಂಗ್ ಕ್ರಿಕೆಟಿಗರಾದ ದೀಪಕ್ ಹೂಡಾ, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಈ ಮೂವರಿಂದ ಅವಕಾಶ ವಂಚಿತರಾಗುತ್ತಿರುವುದು ಕೂಡ ಇದಕ್ಕೆ ಇನ್ನೊಂದು ಉದಾಹರಣೆಯಾಗಿದೆ.

Published On - 5:41 pm, Thu, 1 September 22