AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವರ್ ಪ್ಲೇನಲ್ಲಿಯೇ ಪವರ್ ಕಳೆದುಕೊಳ್ಳುವ ರೋಹಿತ್ ಫಾರ್ಮ್​ಗೆ ಮರಳುವುದು ಯಾವಾಗ?

T20 World Cup 2022: ವಿಶ್ವಕಪ್‌ನ ಐದು ಪಂದ್ಯಗಳಲ್ಲಿ, ರೋಹಿತ್ ಶರ್ಮಾ ಪವರ್‌ಪ್ಲೇನಲ್ಲಿ ಕೇವಲ 52 ರನ್ ಗಳಿಸಿ, 4 ಬಾರಿ ಪವರ್​ ಪ್ಲೇನಲ್ಲಿಯೇ ಔಟಾಗಿದ್ದಾರೆ.

ಪವರ್ ಪ್ಲೇನಲ್ಲಿಯೇ ಪವರ್ ಕಳೆದುಕೊಳ್ಳುವ ರೋಹಿತ್ ಫಾರ್ಮ್​ಗೆ ಮರಳುವುದು ಯಾವಾಗ?
Rohit Sharma
TV9 Web
| Edited By: |

Updated on:Nov 06, 2022 | 7:10 PM

Share

ಎಲ್ಲಾ ನಿರೀಕ್ಷೆಗಳಿಗೆ ತಕ್ಕಂತೆ ಭಾರತ ತಂಡ 2022 ರ ಟಿ20 ವಿಶ್ವಕಪ್‌ನ (T20 World Cup 2022) ಸೆಮಿಫೈನಲ್‌ ತಲುಪಿದೆ. ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಅತ್ಯಂತ ಸುಲಭವಾಗಿ ಸೋಲಿಸಿದ ಟೀಂ ಇಂಡಿಯಾ (Team India) ಬಲಿಷ್ಠ ಶೈಲಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ ಪ್ರಶಸ್ತಿಗೆ ಇನ್ನೆರಡು ಹೆಜ್ಜೆಗಳು ಬಾಕಿಯಿದ್ದು, ಭಾರತ ತಂಡ ಪಂದ್ಯವಾರು ಪ್ರದರ್ಶನವನ್ನು ಉತ್ತಮಪಡಿಸಿಕೊಂಡಿರುವ ರೀತಿಯಲ್ಲಿ ತಂಡವನ್ನು ಪ್ರಶಸ್ತಿಗೆ ದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗುತ್ತಿದೆ. ಇದರ ಹೊರತಾಗಿಯೂ, ಟೀಮ್ ಇಂಡಿಯಾಗೆ ಒಂದು ಕಾಳಜಿ ಉಳಿದಿದೆ. ಅದು ನಾಯಕ ರೋಹಿತ್ ಶರ್ಮಾ (Rohit Sharma) ಅವರ ಫಾರ್ಮ್.

ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದ ಆರಂಭಿಕ ಜೋಡಿಯ ಬಗ್ಗೆ ಆತಂಕಗಳು ಹುಟ್ಟಿಕೊಂಡಿದ್ದವು. ಇದಕ್ಕೆ ಪೂರಕವೆಂಬಂತೆ ಇಲ್ಲಿಯವರೆಗಿನ ಟೂರ್ನಿಯಲ್ಲಿ ಈ ಜೋಡಿ ಯಶಸ್ವಿಯಾಗಲೇ ಇಲ್ಲ. ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ಆಡಿದ ಐದು ಪಂದ್ಯಗಳಲ್ಲೂ ಉತ್ತಮ ಆರಂಭ ನೀಡುವಲ್ಲಿ ಈ ಜೋಡಿ ವಿಫಲವಾಯಿತು. ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಪಂದ್ಯಾವಳಿಯಲ್ಲಿ ಒಮ್ಮೆಯೂ ವೇಗವಾಗಿ ಅಥವಾ ದೊಡ್ಡ ಜೊತೆಯಾಟವನ್ನು ಮಾಡಲು ಸಾಧ್ಯವಾಗಲಿಲ್ಲ.

ಪವರ್‌ಪ್ಲೇಯಲ್ಲಿ ರೋಹಿತ್ ಇನ್ನಿಂಗ್ಸ್ ಅಂತ್ಯ

ಇದರಲ್ಲೂ ಮೊದಲ ಮೂರು ಪಂದ್ಯಗಳ ವೈಫಲ್ಯದ ನಂತರ ಕೆಎಲ್ ರಾಹುಲ್ ಸತತ ಎರಡು ಅರ್ಧಶತಕ ಬಾರಿಸಿದ್ದರೂ ನಾಯಕ ರೋಹಿತ್ ಇನ್ನೂ ಫಾರ್ಮ್​ನಲ್ಲಿ ಕಾಣಿಸಿಕೊಂಡಿಲ್ಲ. ವಿಶ್ವಕಪ್‌ನ ಐದು ಪಂದ್ಯಗಳಲ್ಲಿ, ರೋಹಿತ್ ಶರ್ಮಾ ಪವರ್‌ಪ್ಲೇನಲ್ಲಿ ಕೇವಲ 52 ರನ್ ಗಳಿಸಿ, 4 ಬಾರಿ ಔಟಾಗಿದ್ದಾರೆ. ಈ 52 ರನ್‌ಗಳಲ್ಲಿ ಅತ್ಯಂತ ತ್ರಾಸದಾಯಕ ವಿಷಯವೆಂದರೆ ಅವರ ಸ್ಟ್ರೈಕ್ ರೇಟ್, ಅದು ಕೇವಲ 89.65.

ಇದನ್ನೂ ಓದಿ: IND vs ZIM: ಭಾರತಕ್ಕೆ ಸುಲಭ ತುತ್ತಾದ ಜಿಂಬಾಬ್ವೆ; ಸೆಮಿಫೈನಲ್​ನಲ್ಲಿ ರೋಹಿತ್​ ಪಡೆಗೆ ಇಂಗ್ಲೆಂಡ್ ಎದುರಾಳಿ

ರೋಹಿತ್ ಶರ್ಮಾ ಈ ಐದು ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ ಪವರ್‌ಪ್ಲೇನಲ್ಲಿ ಔಟಾಗಲಿಲ್ಲ. ಅದೂ ಕೂಡ ನೆದರ್ಲೆಂಡ್ಸ್ ವಿರುದ್ಧ. ಆ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ರೋಹಿತ್ ಅದರಲ್ಲಿಯೂ ಎರಡು ಜೀವದಾನಗಳನ್ನು ಪಡೆದಿದ್ದರು. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಸೆಮಿಫೈನಲ್‌ನಲ್ಲಿ ತಮ್ಮ ಲಯವನ್ನು ಕಂಡುಕೊಳ್ಳಲ್ಲಿ ಮತ್ತು ಭಾರತವನ್ನು ಫೈನಲ್‌ಗೆ ಕೊಂಡೊಯ್ಯಲಿ ಎಂಬುದು ಟೀಮ್ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ.

ಟಾಪ್ ಆರ್ಡರ್ ಪ್ರದರ್ಶನ ಹೇಗಿತ್ತು?

ಅಂದಹಾಗೆ, ಇದುವರೆಗಿನ ಟೂರ್ನಿಯಲ್ಲಿ ಭಾರತ ತಂಡದ ಅಗ್ರ 4 ಬ್ಯಾಟ್ಸ್‌ಮನ್‌ಗಳು ಕನಿಷ್ಠ ಒಂದು ಅರ್ಧಶತಕ ಗಳಿಸಿದ್ದಾರೆ. ಟೀಂ ಇಂಡಿಯಾ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಸತತವಾಗಿ ರನ್ ಗಳಿಸುತ್ತಿದ್ದು, ಇಬ್ಬರು ತಲಾ 3 ಅರ್ಧಶತಕ ಗಳಿಸಿದ್ದಾರೆ. ಕೊಹ್ಲಿ ಗರಿಷ್ಠ 246 ರನ್ ಗಳಿಸಿದ್ದರೆ, ಸೂರ್ಯ 225 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ ರಾಹುಲ್ ಎರಡು ಅರ್ಧಶತಕಗಳ ನಂತರ 123 ರನ್​ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಮತ್ತೊಂದೆಡೆ, ನಾಯಕ ರೋಹಿತ್ 5 ಇನ್ನಿಂಗ್ಸ್‌ಗಳಲ್ಲಿ ಕೇವಲ 89 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 pm, Sun, 6 November 22

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ