ಸನ್ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ನಾಟಕೀಯ ರೀತಿಯಲ್ಲಿ ನಾಲ್ಕು ವಿಕೆಟ್ಗಳಿಂದ ಸೋಲಿಸಿದಲ್ಲದೆ ಟೂರ್ನಿಯಲ್ಲಿ 4ನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಜೋಸ್ ಬಟ್ಲರ್ (95), ಸಂಜು ಸ್ಯಾಮ್ಸನ್ (ಅಜೇಯ 66) ಅವರ ಅದ್ಭುತ ಇನ್ನಿಂಗ್ಸ್ನ ಆಧಾರದ ಮೇಲೆ 214 ರನ್ ಕಲೆಹಾಕಿತು. ಹೈದರಾಬಾದ್ ಕೊನೆಯ ಎಸೆತದಲ್ಲಿ ಈ ಗುರಿಯನ್ನು ಸಾಧಿಸಿತು.ಹೈದರಾಬಾದ್ಗೆ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಐದು ರನ್ಗಳ ಅಗತ್ಯವಿತ್ತು. ಕೊನೆಯ ಎಸೆತದಲ್ಲಿ ಸಂದೀಪ್ ಶರ್ಮಾ ಅವರು ಅಬ್ದುಲ್ ಸಮದ್ ಅವರನ್ನು ಔಟ್ ಮಾಡಿದ್ದರು. ಆದರೆ ಅದು ನೋ ಬಾಲ್ ಆಯಿತು. ನಂತರ ಸಮದ್ ಕೊನೆಯ ಎಸೆತವನ್ನು ಸಿಕ್ಸರ್ಗೆ ಹೊಡೆದು ಹೈದರಾಬಾದ್ಗೆ ಜಯ ತಂದುಕೊಟ್ಟರು.
20ನೇ ಓವರ್ನಲ್ಲಿ ಗೆಲುವಿಗೆ 9 ರನ್ ಟಾರ್ಗೆಟ್ ಪಡೆದ ಹೈದರಾಬಾದ್ಗೆ ಲಕ್ ಕೈಹಿಡಿಯಿತು. 20ನೇ ಓವರ್ನ ಕೊನೆಯ ಎಸೆತವನ್ನು ನೋ ಬಾಲ್ ಮಾಡಿದ ಸಂದೀಪ್ ಶರ್ಮಾ ರಾಜಸ್ಥಾನ್ ಸೋಲಿಗೆ ಕಾರಣರಾದರು. ಫ್ರೀ ಹಿಟ್ ಎಸೆತದ ಲಾಭ ಪಡೆದ ಹೈದರಾಬಾದ್ ಬ್ಯಾಟರ್ ಸಮದ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು.
19ನೇ ಓವರ್ನ 5ನೇ ಎಸೆತದಲ್ಲಿ ಕ್ಯಾಚಿತ್ತು ಫಿಲಿಫ್ಸ್ ಔಟಾದರು. ಹೈದರಾಬಾದ್ ಗೆಲುವಿಗೆ 6 ಎಸೆತಗಳಲ್ಲಿ 17 ರನ್ ಬೇಕು.
19ನೇ ಓವರ್ನ ಮೊದಲ 3 ಎಸೆತಗಳಲ್ಲಿ ಫಿಲಿಫ್ಸ್ ಭರ್ಜರಿ ಸಿಕ್ಸರ್ ಬಾರಿಸಿದರು. ಆ ಬಳಿಕ 4ನೇ ಎಸೆತದಲ್ಲೂ ಬೌಂಡರಿ ಬಂತು.
ಏಡನ್ ಮಾರ್ಕ್ರಾಮ್ ಔಟ್ ಆಗಿದ್ದಾರೆ. 18ನೇ ಓವರ್ನ ಐದನೇ ಎಸೆತದಲ್ಲಿ ಚಾಹಲ್ ಅವರನ್ನು ಎಲ್ಬಿಡಬ್ಲು ಮಾಡಿದರು. ಅಂಪೈರ್ ಔಟ್ ನೀಡಿದರು ಆದರೆ ಹೈದರಾಬಾದ್ ನಾಯಕ ರಿವ್ಯೂ ತೆಗೆದುಕೊಂಡರು ಅದು ವಿಫಲವಾಯಿತು.
29 ಎಸೆತಗಳಲ್ಲಿ 47 ರನ್ ಬಾರಿಸಿದ್ದ ತ್ರಿಪಾಠಿ ಚಹಲ್ ಬೌಲಿಂಗ್ನಲ್ಲಿ ಕ್ಯಾಚಿತ್ತು ಔಟಾದರು.
ಮೆಕಾಯ್ ಬೌಲ್ ಮಾಡಿದ 17ನೇ ಓವರ್ನಲ್ಲಿ 13 ರನ್ ಬಂದವು. ಈ ಓವರ್ನಲ್ಲಿ ತ್ರಿಪಾಠಿ ಸಿಕ್ಸರ್ ಬಾರಿಸಿದರೆ, ಮಾಕ್ರಾಮ್ ಬೌಂಡರಿ ಬಾರಿಸಿದರು.
ಹೆನ್ರಿಕ್ ಕ್ಲಾಸೆನ್ ಸ್ಪಿನ್ನರ್ಗಳ ವಿರುದ್ಧ ಉತ್ತಮವಾಗಿ ಆಡಿದ ಕ್ಲಾಸೆನ್ ಕೇವಲ 12 ಎಸೆತಗಳಲ್ಲಿ 26 ರನ್ ಗಳಿಸಿ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ.
14ನೇ ಓವರ್ ಬೌಲ್ ಮಾಡಿದ ಮುರುಗನ್ ಬರೋಬ್ಬರಿ 19 ರನ್ ಬಿಟ್ಟುಕೊಟ್ಟರು. ಇಬ್ಬರೂ ಬ್ಯಾಟರ್ಗಳು ತಲಾ ಒಂದೊಂದು ಸಿಕ್ಸರ್ ಬಾರಿಸಿದರು.
ಅಶ್ವಿನ್ ಬೌಲ್ ಮಾಡಿದ 13ನೇ ಓವರ್ನ ಮೂರನೇ ಎಸೆತವನ್ನು ಸಿಕ್ಸರ್ಗಟ್ಟಿದ ಅಭಿಷೇಕ್ 33 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. ಆದರೆ ಆ ನಂತರದ ಎಸೆತದಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ್ದಾರೆ.
ಅಶ್ವಿನ್ ಬೌಲ್ ಮಾಡಿದ 11ನೇ ಓವರ್ನ 3ನೇ ಎಸೆತವನ್ನು ತ್ರಿಪಾಠಿ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಬೌಂಡರಿಗಟ್ಟಿದರು.
ಅಶ್ವಿನ್ ಬೌಲ್ ಮಾಡಿದ 10ನೇ ಓವರ್ನಲ್ಲಿ ರಾಹುಲ್ ಸಿಕ್ಸರ್ ಬಾರಿಸಿದರೆ, ಅಭಿಷೇಕ್ ಫೈನ್ ಲೆಗ್ ಮೇಲೆ ಬೌಂಡರಿ ಬಾರಿಸಿದರು. 10 ಓವರ್ ಅಂತ್ಯಕ್ಕೆ ಹೈದರಾಬಾದ್ 87 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.
ಚಹಲ್ ಬೌಲ್ ಮಾಡಿದ 8ನೇ ಓವರ್ನ ಕೊನೆಯ ಎಸೆತದಲ್ಲಿ ಅಭಿಷೇಕ್ ಸ್ಕ್ವೇರ್ ಲೆಗ್ನಲ್ಲಿ ಬೌಂಡರಿ ಬಾರಿಸಿದರು.
ಅನ್ಮೋಲ್ಪ್ರೀತ್ ಸಿಂಗ್ ಔಟಾಗಿದ್ದಾರೆ. ಆರನೇ ಓವರ್ನ ಐದನೇ ಎಸೆತದಲ್ಲಿ ಯುಜ್ವೇಂದ್ರ ಚಾಹಲ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು.ಅನ್ಮೋಲ್ಪ್ರೀತ್ ಸಿಂಗ್ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು ಆದರೆ ಚೆಂಡು ಶಿಮ್ರಾನ್ ಹೆಟ್ಮೆಯರ್ ಕೈಗೆ ಹೋಯಿತು. ಆರು ಓವರ್ಗಳ ನಂತರ ರಾಜಸ್ಥಾನದ ಸ್ಕೋರ್ ಒಂದು ವಿಕೆಟ್ ಕಳೆದುಕೊಂಡು 52 ರನ್ ಆಗಿದೆ.
ಹೈದರಾಬಾದ್ ಇನ್ನಿಂಗ್ಸ್ನ 5 ಓವರ್ಗಳು ಮುಗಿದಿವೆ. ಹೈದರಾಬಾದ್ ಮೊದಲ 5 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿತು.
3ನೇ ಓವರ್ ಬೌಲ್ ಮಾಡಿದ ಸಂದೀಪ್ 10 ರನ್ ಬಿಟ್ಟುಕೊಟ್ಟರು. ಈ ಓವರ್ನಲ್ಲಿ 2 ಬೌಂಡರಿ ಬಂದವು.
ಕುಲ್ದೀಪ್ ಬೌಲ್ ಮಾಡಿದ 2ನೇ ಓವರ್ನ 4ನೇ ಎಸೆತವನ್ನು ಅನ್ಮೋಲ್ಪ್ರೀತ್ ಡೀಪ್ ಸ್ಕ್ವೈರ್ ಲೆಗ್ನಲ್ಲಿ ಸಿಕ್ಸರ್ಗಟ್ಟಿದರು.
ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್ ಆರಂಭವಾಗಿದೆ. ಅಭಿಷೇಕ್ ಶರ್ಮಾ ಅವರೊಂದಿಗೆ ಅನ್ಮೋಲ್ಪ್ರೀತ್ ಸಿಂಗ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ನಟರಾಜನ್ ಬೌಲ್ ಮಾಡಿದ 20ನೇ ಓವರ್ನಲ್ಲಿ ಒಟ್ಟು 17 ರನ್ ಹರಿದುಬಂದವು. ಅಂತಿಮವಾಗಿ ರಾಜಸ್ಥಾನ್ 2 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿದೆ.
ಭುವಿ ಬೌಲ್ ಮಾಡಿದ 19ನೇ ಓವರ್ನ 3ನೇ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದ ಬಟ್ಲರ್ ಕೇವಲ 5 ರನ್ಗಳಿಂದ ಶತಕ ವಂಚಿತರಾದರು.
ಭುವಿ ಬೌಲ್ ಮಾಡಿದ 17ನೇ ಓವರ್ನಲ್ಲಿ ಬಟ್ಲರ್ 3 ಬೌಂಡರಿ ಬಾರಿಸಿದರು.
ಮಾರ್ಕಂಡೆ ಬೌಲ್ ಮಾಡಿದ 16ನೇ ಓವರ್ನಲ್ಲಿ 2 ಸಿಕ್ಸರ್ ಬಂದವು.ಇದರಲ್ಲಿ ಸಂಜು 1 ಸಿಕ್ಸರ್ ಹೊಡೆದರೆ, ಬಟ್ಲರ್ ಕೂಡ 1 ಸಿಕ್ಸರ್ ಹೊಡೆದರು.
ಯಾನ್ಸೆನ್ ಬೌಲ್ ಮಾಡಿದ 15ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಹೊಡೆದ ಬಟ್ಲರ್ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಮಾರ್ಕಂಡೆ ಬೌಲ್ ಮಾಡಿದ 14ನೇ ಓವರ್ನ ಕೊನೆಯ ಎಸೆತದಲ್ಲಿ ಸಂಜು ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು.
ವಿವ್ರಾಂತ್ ಬೌಲ್ ಮಾಡಿದ 13ನೇ ಓವರ್ನ 4ನೇ ಎಸೆತವನ್ನು ಬಟ್ಲರ್ ಸಿಕ್ಸರ್ಗಟ್ಟಿದರು.
12ನೇ ಓವರ್ನಲ್ಲಿ ಸಿಂಗಲ್ ಬಾರಿಸುವ ಮೂಲಕ ಬಟ್ಲರ್ ತಮ್ಮ ಅರ್ಧಶತಕ ಪೂರೈಸಿದ್ದಾರೆ.
ಅಭಿಷೇಕ್ ಬೌಲ್ ಮಾಡಿದ 10ನೇ ಓವರ್ನ 4ನೇ ಎಸೆತವನ್ನು ಸಿಕ್ಸರ್ಗಟ್ಟಿದ ಬಟ್ಲರ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಮಾರ್ಕಂಡೆ ಬೌಲ್ ಮಾಡಿದ 9ನೇ ಓವರ್ನಲ್ಲಿ ಬರೋಬ್ಬರಿ 3 ಸಿಕ್ಸರ್ ಬಂದವು. ಮೊದಲ ಸಿಕ್ಸರ್ ಸಂಜು ಬ್ಯಾಟ್ನಿಂದ ಬಂದರೆ, ಉಳಿದ 2 ಸಿಕ್ಸರ್ ಬಟ್ಲರ್ ಬ್ಯಾಟ್ನಿಂದ ಬಂದವು.
ಮಯಾಂಕ್ ಬೌಲ್ ಮಾಡಿದ 7ನೇ ಓವರ್ನ ಕೊನೆಯ ಎಸೆತದಲ್ಲಿ ಸಂಜು ಕಟ್ ಶಾಟ್ ಆಡಿ ಬೌಂಡರಿ ಪಡೆದರು.
ನಟರಾಜನ್ ಬೌಲ್ ಮಾಡಿದ 6ನೇ ಓವರ್ನ 5ನೇ ಎಸೆತದಲ್ಲಿ ಸಂಜು ಬೌಂಡರಿ ಬಾರಿಸಿದರು. ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ 61 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.
5ನೇ ಓವರ್ನ ಕೊನೆಯ ಎಸೆತದಲ್ಲಿ ಜೈಸ್ವಾಲ್ ಕ್ಯಾಚಿತ್ತು ಔಟಾದರು. ಯಶಸ್ವಿ 18 ಎಸೆತಗಳಲ್ಲಿ 35 ರನ್ ಬಾರಿಸಿ ನಿರ್ಗಮಿಸಿದರು.
ಯಾನ್ಸೆನ್ ಬೌಲ್ ಮಾಡಿದ 5ನೇ ಓವರ್ನ 2ನೇ ಎಸೆತದಲ್ಲಿ ಬೌಂಡರಿ ಹೊಡೆದ ಜೈಸ್ವಾಲ್ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು.
ಭುವಿ ಬೌಲ್ ಮಾಡಿದ 4ನೇ ಓವರ್ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಜೈಸ್ವಾಲ್, 3ನೇ ಎಸೆತದಲ್ಲಿ 90 ಮೀ. ಉದ್ದದ ಸಿಕ್ಸರ್ ಹೊಡೆದರು.
ಯಾನ್ಸೆನ್ ಬೌಲ್ ಮಾಡಿದ 2ನೇ ಓವರ್ನಲ್ಲಿ ಬಟ್ಲರ್ 2 ಬೌಂಡರಿ ಹೊಡೆದರೆ, ಕೊನೆಯ ಎಸೆತದಲ್ಲಿ ಜೈಸ್ವಾಲ್ ಸಿಕ್ಸರ್ ಹೊಡೆದರು.
ರಾಜಸ್ಥಾನ ಮತ್ತು ಹೈದರಾಬಾದ್ ನಡುವಿನ ಪಂದ್ಯ ಆರಂಭವಾಗಿದೆ. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್ನಲ್ಲಿ ಜೈಸ್ವಾಲ್ 2 ಬೌಂಡರಿ ಹೊಡೆದರು.
ಐಪಿಎಲ್ನ 51ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 56 ರನ್ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ ಸಮೀಪಕ್ಕೆ ಬಂದಿದೆ
ಆಯುಷ್ ಬಧೋನಿ 11 ಎಸೆತಗಳಲ್ಲಿ 21 ರನ್ ಗಳಿಸಿ ಶಮಿ ಓವರ್ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದರು.
ಯಶಸ್ವಿ ಜೈಸ್ವಾಲ್ (ನಾಯಕ), ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜೋ ರೂಟ್, ಧ್ರುವ್ ಜುರೈಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಸಂದೀಪ್ ಶರ್ಮಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್.
ಏಡೆನ್ ಮಾರ್ಕ್ರಾಮ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಮಾರ್ಕೊ ಯಾನ್ಸೆನ್, ವಿವ್ರಾಂತ್ ಶರ್ಮಾ, ಮಯಾಂಕ್ ಮಾರ್ಕೆಡೆ.
ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
Published On - 7:08 pm, Sun, 7 May 23