ಅರ್ಜುನ್ ಮ್ಯಾಚ್ ನೋಡಲು ನಾನು ಹೋಗಲ್ಲ.. ಹೋದರೂ ಗುಟ್ಟಾಗಿ ನೋಡಿ ಬಂದು ಬಿಡುತ್ತೇನೆ; ಸಚಿನ್ ತೆಂಡೂಲ್ಕರ್

| Updated By: ಪೃಥ್ವಿಶಂಕರ

Updated on: Feb 19, 2022 | 10:22 AM

Sachin Tendulkar: ಅರ್ಜುನ್‌ನ ಮೊದಲ ಆಯ್ಕೆ ಕ್ರಿಕೆಟ್ ಅಲ್ಲ, ಅವರು ಮೊದಲು ಫುಟ್‌ಬಾಲ್ ಮತ್ತು ಚೆಸ್ ಆಡುತ್ತಿದ್ದರು. ನಂತರ ಅವರು ಕ್ರಿಕೆಟ್ ಆಯ್ಕೆ ಮಾಡಿಕೊಂಡರು ಎಂದು ಸಚಿನ್ ಹೇಳಿಕೊಂಡಿದ್ದಾರೆ.

ಅರ್ಜುನ್ ಮ್ಯಾಚ್ ನೋಡಲು ನಾನು ಹೋಗಲ್ಲ.. ಹೋದರೂ ಗುಟ್ಟಾಗಿ ನೋಡಿ ಬಂದು ಬಿಡುತ್ತೇನೆ; ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್
Follow us on

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರು ತಮ್ಮ ಮಗ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರ ಪಂದ್ಯಗಳನ್ನು ನೋಡಲು ಹೋಗುವುದಿಲ್ಲ ಎಂಬ ಹೇಳಿಕೆ ನೀಡಿ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಅರ್ಜುನ್ ಪ್ರಸ್ತುತ ಮುಂಬೈನ ರಣಜಿ ಟ್ರೋಫಿ ತಂಡದಲ್ಲಿ ಆಡುತ್ತಿದ್ದಾರೆ. IPL-2022 ಮೆಗಾ ಹರಾಜಿ (IPL-2022 Mega Auction )ನಲ್ಲಿ ಅವರನ್ನು ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಖರೀದಿಸಿದೆ. ಈ ಮುಂಚೆ ಸಚಿನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. ಅದು ಆಟಗಾರನಾಗಿ ನಂತರ ಮಾರ್ಗದರ್ಶಕನಾಗಿ ಈಗ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಅರ್ಜುನ್ ಪಂದ್ಯಗಳನ್ನು ಏಕೆ ನೋಡಲು ಹೋಗುವುದಿಲ್ಲ ಎಂಬುದರ ಹಿಂದಿನ ಕಾರಣವನ್ನು ವಿವರಿಸಿದ ಸಚಿನ್, ಪೋಷಕರು ಮಕ್ಕಳ ಪಂದ್ಯಗಳನ್ನು ವೀಕ್ಷಿಸಲು ಹೋಗುವುದರಿಂದ ಅವರ ಮೇಲೆ ಒತ್ತಡ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಅರ್ಜುನ್ ಆಟವನ್ನು ಪ್ರೀತಿಸಬೇಕು ಮತ್ತು ಇಡೀ ಆಟದ ಮೇಲೆ ತನ್ನ ಗಮನವನ್ನು ಇಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಸಚಿನ್ ವಿವರಿಸಿದ್ದಾರೆ. ಇನ್ ಡೆಪ್ತ್ ವಿತ್ ಗ್ರಹಾಂ ಸಂಚಿಕೆಯಲ್ಲಿ ಸಚಿನ್ ಮಾತನಾಡಿ, “ಪೋಷಕರು ತಮ್ಮ ಮಕ್ಕಳು ಆಡುವುದನ್ನು ನೋಡಲು ಹೋದರೆ ಅವರು ಒತ್ತಡಕ್ಕೆ ಒಳಗಾಗುತ್ತಾರೆ. ಅದಕ್ಕಾಗಿಯೇ ನಾನು ಅರ್ಜುನ್ ಅವರ ಪಂದ್ಯಗಳನ್ನು ನೋಡಲು ಹೋಗುವುದಿಲ್ಲ. ಏಕೆಂದರೆ ಆಟವನ್ನು ಪ್ರೀತಿಸುವ ಸ್ವಾತಂತ್ರ್ಯ ಅವನಿಗೆ ಇರಬೇಕು ಎಂದು ನಾನು ಬಯಸುತ್ತೇನೆ. ಅವನು ಏನು ಮಾಡಲು ಬಯಸುತ್ತಾನೆ ಎಂಬುದರ ಮೇಲೆ ಅವನು ಗಮನ ಹರಿಸಬೇಕು. ಆದ್ದರಿಂದಲೇ ನಾನು ಅವನ ಆಟ ನೋಡಲು ಹೋಗುವುದಿಲ್ಲ ಎಂದಿದ್ದಾರೆ.

ನಾನು ಹೋದರೆ ಅವಿತುಕೊಂಡು ನೋಡುತ್ತೇನೆ

ಅರ್ಜುನ್ ಪಂದ್ಯ ನೋಡಲು ಹೋದರೆ ಯಾರಿಗೂ ಗೊತ್ತಾಗದಂತೆ ಅವಿತುಕೊಂಡು ಪಂದ್ಯ ವೀಕ್ಷಿಸುತ್ತೇನೆ ಎಂದು ಸಚಿನ್ ಹೇಳಿದ್ದಾರೆ. ಅರ್ಜುನ್ ತಮ್ಮ ಆಟದ ಮೇಲೆ ಗಮನ ಹರಿಸಬೇಕು. ಯಾರೂ ನನ್ನನ್ನು ನೋಡುವುದು ನನಗೆ ಇಷ್ಟವಿಲ್ಲ. ಹೀಗಾಗಿ ಪಂದ್ಯ ನೋಡಲು ಹೋದರೂ ಗುಟ್ಟಾಗಿ ಮ್ಯಾಚ್ ನೋಡುತ್ತೇನೆ. ಇದರಿಂದ ನಾನು ಅಲ್ಲಿದ್ದೇನೆ ಎಂದು ಅವನಿಗೆ ತಿಳಿಯುವುದಿಲ್ಲ. ಜೊತೆಗೆ ಬೇರೆಯವರಿಗೂ ತಿಳಿಯುವುದಿಲ್ಲ ಎಂದಿದ್ದಾರೆ.

ಅರ್ಜುನ್ ಆಯ್ಕೆ ಕ್ರಿಕೆಟ್ ಅಲ್ಲ

ಅರ್ಜುನ್‌ನ ಮೊದಲ ಆಯ್ಕೆ ಕ್ರಿಕೆಟ್ ಅಲ್ಲ, ಅವರು ಮೊದಲು ಫುಟ್‌ಬಾಲ್ ಮತ್ತು ಚೆಸ್ ಆಡುತ್ತಿದ್ದರು. ನಂತರ ಅವರು ಕ್ರಿಕೆಟ್ ಆಯ್ಕೆ ಮಾಡಿಕೊಂಡರು ಎಂದು ಸಚಿನ್ ಹೇಳಿಕೊಂಡಿದ್ದಾರೆ. ಅರ್ಜುನ್‌ಗೆ ಕ್ರಿಕೆಟ್‌ ಆಡುವಂತೆ ನಾವ್ಯಾರೂ ಬಲವಂತ ಮಾಡಿಲ್ಲ. ಅವರು ಫುಟ್ಬಾಲ್ ಆಡುತ್ತಿದ್ದರು, ಜೊತೆಗೆ ಚೆಸ್ ಕೂಡ ಆಡುತ್ತಿದ್ದರು, ನಂತರ ಅವರು ಕ್ರಿಕೆಟ್ ಆಯ್ಕೆ ಮಾಡಿಕೊಂಡರು ಎಂದು ಸಚಿನ್ ಹೇಳಿದ್ದಾರೆ.

ಆದಾಗ್ಯೂ ಅರ್ಜುನ್ ಇನ್ನೂ ಪ್ರಥಮ ದರ್ಜೆ ಮತ್ತು ಲಿಸ್ಟ್-ಎಗೆ ಪಾದಾರ್ಪಣೆ ಮಾಡಿಲ್ಲ. ಅವರು ಮುಂಬೈನ ಅಂಡರ್-14, ಅಂಡರ್-16, ಅಂಡರ್-19 ತಂಡದ ಭಾಗವಾಗಿದ್ದಾರೆ. ಜೊತೆಗೆ ಐಪಿಎಲ್​ನಲ್ಲಿ ಕಾಣಿಸಿಕೊಂಡರು ಇನ್ನೂ ಮುಂಬೈ ಇಂಡಿಯನ್ಸ್‌ಗೆ ಪದಾರ್ಪಣೆ ಮಾಡಿಲ್ಲ.

ಇದನ್ನೂ ಓದಿ:IND vs WI: ವಿಂಡೀಸ್ ಬೌಲರ್‌ಗಳ ಮೇಲೆ ಕಿಂಗ್ ಕೊಹ್ಲಿ ಸವಾರಿ; 2ನೇ ಟಿ20ಯಲ್ಲಿ ಅರ್ಧಶತಕ ಸಿಡಿಸಿದ ವಿರಾಟ್

Published On - 10:22 am, Sat, 19 February 22