Hardik Pandya: ನಿಂದಿಸಿದ್ದಕ್ಕೆ ಹಾರ್ದಿಕ್ ಪಾಂಡ್ಯ ಮನೆಗೆ ನುಗ್ಗಿ ಸೇಡು ತೀರಿಸಿಕೊಂಡ ಸಾಯಿ ಕಿಶೋರ್

MI vs GT, IPL 2025: ಐಪಿಎಲ್ 2025 ರಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿ ಆದವು. ಇದರಲ್ಲಿ ಸಾಯಿ ಕಿಶೋರ್ ಅವರು ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡುವ ಮೂಲಕ ತಮಗಾದ ಅವಮಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 3 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು.

Hardik Pandya: ನಿಂದಿಸಿದ್ದಕ್ಕೆ ಹಾರ್ದಿಕ್ ಪಾಂಡ್ಯ ಮನೆಗೆ ನುಗ್ಗಿ ಸೇಡು ತೀರಿಸಿಕೊಂಡ ಸಾಯಿ ಕಿಶೋರ್
Hardik Pandya And Sai Kishore

Updated on: May 07, 2025 | 9:09 AM

ಬೆಂಗಳೂರು (ಮಾ. 07): ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2025 ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ (Mumbai Indians vs Gujarat Titans) ಮೊದಲ ಬಾರಿಗೆ ಮುಖಾಮುಖಿಯಾದಾಗ ದೊಡ್ಡ ವಿವಾದವೇ ನಡೆದಿತ್ತು. ಮುಂಬೈ ತಂಡದ ಇನ್ನಿಂಗ್ಸ್ ವೇಳೆ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಗುಜರಾತ್ ಸ್ಪಿನ್ನರ್ ಆರ್ ಸಾಯಿ ಕಿಶೋರ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಪಾಂಡ್ಯ ಈ ಯುವ ಆಟಗಾರನ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದರು. ಈಗ ಸಾಯಿ ಕಿಶೋರ್ ವಾಂಖೆಡೆ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಅವರಿಂದ ಅವಮಾನಿಸಲ್ಪಟ್ಟಿದ್ದಕ್ಕೆ ಸೇಡು ತೀರಿಸಿಕೊಂಡಿದ್ದಾರೆ.

ಹಾರ್ದಿಕ್ ರನ್ನು ತನ್ನ ಬಲೆಗೆ ಬೀಳಿಸಿದ ಸಾಯಿ ಕಿಶೋರ್

ಐಪಿಎಲ್ 2025 ರಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿ ಆದವು. ಇದರಲ್ಲಿ ಸಾಯಿ ಕಿಶೋರ್ ಅವರು ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡುವ ಮೂಲಕ ತಮಗಾದ ಅವಮಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 3 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು. ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್‌ನ 13ನೇ ಓವರ್ ಅನ್ನು ಸಾಯಿ ಕಿಶೋರ್ ಬೌಲಿಂಗ್ ಮಾಡುತ್ತಿದ್ದರು. ಹಾರ್ದಿಕ್ ಪಾಂಡ್ಯ ಈ ಓವರ್‌ನ ಎರಡನೇ ಎಸೆತದಲ್ಲಿ ಸ್ಟ್ರೈಕ್‌ಗೆ ಬಂದರು.

ಎರಡನೇ ಎಸೆತದಲ್ಲಿ ರನ್ ಬರಲಿಲ್ಲ. ಆದರೆ ಮೂರನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಮೊಣಕಾಲಿನಲ್ಲಿ ಕುಳಿತು ದೊಡ್ಡ ಶಾಟ್ ಆಡಲು ಮುಂದಾದರು. ಆದರೆ ಪಾಂಡ್ಯಗೆ ಚೆಂಡನ್ನು ಸಮಯಕ್ಕೆ ಸರಿಯಾಗಿ ಹೊಡೆಯಲು ಸಾಧ್ಯವಾಗಲಿಲ್ಲ ಮತ್ತು ಅದು ಮೇಲ್ಭಾಗಕ್ಕೆ ಹೋಯಿತು. ಜಿಟಿ ನಾಯಕ ಶುಭ್​ಮನ್ ಗಿಲ್ ಓಡಿ ಹೋಗಿ ಅದ್ಭುತ ಕ್ಯಾಚ್ ಹಿಡಿದರು. ಈ ರೀತಿಯಾಗಿ ಪಾಂಡ್ಯ ಹೀನಾಯವಾಗಿ ಔಟಾದರು.

ಇದನ್ನೂ ಓದಿ
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್
ವಿರಾಟ್ ಕೊಹ್ಲಿ ಕೋಡಂಗಿ... ಅವನ ಅಭಿಮಾನಿಗಳು ಅದಕ್ಕಿಂತ ದೊಡ್ಡ ಕೋಡಂಗಿಗಳು!
VIDEO: ಗೆರೆ ದಾಟಿ ಪಂದ್ಯ ಸೋತ ಮುಂಬೈ ಇಂಡಿಯನ್ಸ್
ಐಪಿಎಲ್​ ಬೆನ್ನಲ್ಲೇ ಟೆಸ್ಟ್ ಸರಣಿ: ಟೀಮ್ ಇಂಡಿಯಾದ ವೇಳಾಪಟ್ಟಿ ಪ್ರಕಟ

ಐಪಿಎಲ್​ ಬೆನ್ನಲ್ಲೇ ಟೆಸ್ಟ್ ಸರಣಿ: ಟೀಮ್ ಇಂಡಿಯಾದ ವೇಳಾಪಟ್ಟಿ ಪ್ರಕಟ

156 ರನ್‌ಗಳ ಗುರಿ ನೀಡಿದ ಮುಂಬೈ:

ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭ್​​ನ್ ಗಿಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇಂತಹ ಸ್ಥಿತಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 7 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಗುಜರಾತ್ ಟೈಟಾನ್ಸ್ ಗೆ 156 ರನ್ ಗಳ ಗುರಿ ನೀಡಲಾಗಿತ್ತು. ಐಪಿಎಲ್ 2025 ರ ಅತ್ಯಂತ ಮಹತ್ವದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಕೊನೆಯ ಎಸೆತದವರೆಗೂ ನಡೆದ ಈ ಪಂದ್ಯದಲ್ಲಿ ಗುಜರಾತ್ ತಂಡಕ್ಕೆ ಗೆಲ್ಲಲು 6 ಎಸೆತಗಳಲ್ಲಿ 15 ರನ್‌ಗಳು ಬೇಕಾಗಿದ್ದವು. ಮುಂಬೈ ಪರ ದೀಪಕ್ ಚಹಾರ್ ಈ ಓವರ್ ಬೌಲಿಂಗ್ ಮಾಡಲು ಬಂದರು ಮತ್ತು ರಾಹುಲ್ ತೆವಾಟಿಯಾ ಮತ್ತು ಜೆರಾಲ್ಡ್ ಕೋಟ್ಜೀ ಅವರ ಬಲದಿಂದ ಗುಜರಾತ್ ಪಂದ್ಯವನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ