AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಕೊಹ್ಲಿ ಸ್ಥಾನವನ್ನು ತುಂಬುವ ಒತ್ತಡದಲ್ಲಿ ಸಾಯಿ ಸುದರ್ಶನ್; ಮುಂದಿನ ಪಂದ್ಯವೇ ನಿರ್ಣಾಯಕ

Sai Sudharsan's Last Chance: ಭಾರತ-ವೆಸ್ಟ್ ಇಂಡೀಸ್ ನಡುವಿನ ದೆಹಲಿ ಟೆಸ್ಟ್ ಸಾಯಿ ಸುದರ್ಶನ್‌ಗೆ ಅತ್ಯಂತ ನಿರ್ಣಾಯಕವಾಗಿದೆ. ಆಡಿರುವ 7 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕದೊಂದಿಗೆ 147 ರನ್ ಗಳಿಸಿರುವ ಸುದರ್ಶನ್, ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ, ಏಕೆಂದರೆ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಇದೆ.

IND vs WI: ಕೊಹ್ಲಿ ಸ್ಥಾನವನ್ನು ತುಂಬುವ ಒತ್ತಡದಲ್ಲಿ ಸಾಯಿ ಸುದರ್ಶನ್; ಮುಂದಿನ ಪಂದ್ಯವೇ ನಿರ್ಣಾಯಕ
Sai Sudarshan
ಪೃಥ್ವಿಶಂಕರ
|

Updated on:Oct 06, 2025 | 7:35 PM

Share

ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 10 ರಿಂದ ದೆಹಲಿಯಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆಗೆಯಾಗುವ ಸಾಧ್ಯತೆಗಳು ತೀರ ಕಡಿಮೆ. ಆದಾಗ್ಯೂ ತಂಡದಲ್ಲಿರುವ ಸಾಯಿ ಸುದರ್ಶನ್​ಗೆ (Sai Sudharsan) ಈ ಪಂದ್ಯ ನಿರ್ಣಾಯಕವಾಗಲಿದೆ. ಏಕೆಂದರೆ ವಿರಾಟ್ ಕೊಹ್ಲಿ (Virat Kohli) ನಿವೃತ್ತಿ ಘೋಷಿಸಿದ ಬಳಿಕ ಅವರ ಸ್ಥಾನವನ್ನು ತುಂಬುವ ಆಟಗಾರನನ್ನು ಹುಡುಕುವ ಪ್ರಯೋಗಕ್ಕೆ ಬಿಸಿಸಿಐ ಮುಂದಾಗಿದೆ. ಅದರಂತೆ ಈ ಮೊದಲು ಕನ್ನಡಿಗೆ ಕರುಣ್ ನಾಯರ್ ಅವರನ್ನು ಆಡಿಸಲಾಯಿತು. ಆದರೆ ನಾಯರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟು ಸಾಯಿ ಸುದರ್ಶನ್ ಅವರನ್ನು ಆಡಿಸಲಾಗುತ್ತಿದೆ. ಆದರೆ ಅವರು ಕೂಡ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ವಿಂಡೀಸ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವರು ಉತ್ತಮ ಇನ್ನಿಂಗ್ಸ್ ಆಡದಿದ್ದರೆ, ಅವರಿಗೆ ಟೆಸ್ಟ್ ತಂಡದಿಂದ ಗೇಟ್​ಪಾಸ್ ಸಿಗುವುದು ಖಚಿತವಾಗಿದೆ.

ಒತ್ತಡದಲ್ಲಿ ಸಾಯಿ ಸುದರ್ಶನ್

ಸಾಯಿ ಸುದರ್ಶನ್ ಅವರನ್ನು ಭಾರತೀಯ ಟೆಸ್ಟ್ ತಂಡದಿಂದ ಹೊರಗಿಡಲು ಎರಡು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು ಅವರ ಕಳಪೆ ಪ್ರದರ್ಶನ. ಎರಡನೇಯದ್ದು ಅವರ ಸ್ಥಾನ ಮತ್ತು ತಂಡದಲ್ಲಿ ಸ್ಥಾನಕ್ಕಾಗಿ ನಾಲ್ವರು ಆಟಗಾರರು ಪೈಪೋಟಿ ನೀಡುತ್ತಿದ್ದಾರೆ. ಹೀಗಾಗಿ ಸಾಯಿ ಸುದರ್ಶನ್ ಅವರು ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಬೇಕಾಗದರೆ, ಮುಂದಿನ ಪಂದ್ಯದಲ್ಲಿ ಒಂದು ದೊಡ್ಡ ಇನ್ನಿಂಗ್ಸ್ ಆಡಲೇಬೇಕು.

7 ಇನ್ನಿಂಗ್ಸ್‌ಗಳಲ್ಲಿ ವಿಫಲ, ಕೇವಲ ಒಂದು ಅರ್ಧಶತಕ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಸಾಯಿ ಸುದರ್ಶನ್ ಕೇವಲ 7 ರನ್ ಗಳಿಸಿ ಔಟಾದರು. ಇದು ಅವರ ನಾಲ್ಕನೇ ಟೆಸ್ಟ್ ಮತ್ತು ಅವರ ವೃತ್ತಿಜೀವನದ ಏಳನೇ ಇನ್ನಿಂಗ್ಸ್ ಆಗಿತ್ತು. ಈ ವರ್ಷದ ಜೂನ್-ಜುಲೈನಲ್ಲಿ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಅವರಿಗೆ ಚೊಚ್ಚಲ ಟೆಸ್ಟ್ ಆಡುವ ಅವಕಾಶ ಸಿಕ್ಕಿತು. ಆದರೆ ಸಿಕ್ಕ ಅವಕಾಶವನ್ನು ಅವರು ಬಳಸಿಕೊಳ್ಳಲಿಲ್ಲ. ಸಾಯಿ ಸುದರ್ಶನ್ ಆಡಿದ 7 ಇನ್ನಿಂಗ್ಸ್‌ಗಳಲ್ಲಿ 21 ರ ಸರಾಸರಿಯಲ್ಲಿ ಕೇವಲ 147 ರನ್ ಮಾತ್ರ ಕಲೆಹಾಕಿದರು. ಇದರಲ್ಲಿ ಕೇವಲ ಒಂದೇ ಒಂದು ಅರ್ಧಶತಕ ಸೇರಿತ್ತು.

ಮೂರನೇ ಸ್ಥಾನಕ್ಕೆ ನಾಲ್ವರ ಪೈಪೋಟಿ

ವೆಸ್ಟ್ ಇಂಡೀಸ್ ವಿರುದ್ಧದ ದೆಹಲಿ ಟೆಸ್ಟ್‌ನಲ್ಲಿ ಆಡಲಿರುವ ಎಂಟನೇ ಇನ್ನಿಂಗ್ಸ್‌ನಲ್ಲಿಯೂ ಸಾಯಿ ಸುದರ್ಶನ್ ಅವರ ಪ್ರದರ್ಶನ ಇದೇ ರೀತಿ ಮುಂದುವರಿದರೆ, ಮುಂದಿನ ಸರಣಿಗೆ ತಂಡದ ಆಡಳಿತ ಮಂಡಳಿಯು ಕೆಲವು ಹೊಸ ಹೆಸರುಗಳನ್ನು ಪರಿಗಣಿಸುವುದರಲ್ಲಿ ಸಂದೇಹವಿಲ್ಲ. ಸಾಯಿ ಸುದರ್ಶನ್ ಅವರನ್ನು ಬದಲಿಸಬಹುದಾದ ಹೆಸರುಗಳಲ್ಲಿ ಅಭಿಮನ್ಯು ಈಶ್ವರನ್, ಧ್ರುವ್ ಜುರೆಲ್, ರಜತ್ ಪಾಟಿದಾರ್ ಮತ್ತು ದೇವದತ್ ಪಡಿಕ್ಕಲ್ ಸೇರಿದ್ದಾರೆ. ಇವರು ಅವಕಾಶಕ್ಕಾಗಿ ಕಾಯುತ್ತಿರುವ ಆಟಗಾರರು. ಅಂತಹ ಪರಿಸ್ಥಿತಿಯಲ್ಲಿ, ಸಾಯಿ ಸುದರ್ಶನ್ ಅವರಿಗೆ ಉತ್ತಮ ಪ್ರದರ್ಶನ ನೀಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Mon, 6 October 25

ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ: ಬಾಗಲಕೋಟೆಯಲ್ಲಿ ಹೆದ್ದಾರಿ ಬಂದ್
ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ: ಬಾಗಲಕೋಟೆಯಲ್ಲಿ ಹೆದ್ದಾರಿ ಬಂದ್
ಕ್ರಾಂತಿ ಚರ್ಚೆ ಮಧ್ಯೆ ರಾಜಣ್ಣ ನಿವಾಸದಲ್ಲಿಂದು ಡಿನ್ನರ್, ಸಿಎಂ ಭಾಗಿ
ಕ್ರಾಂತಿ ಚರ್ಚೆ ಮಧ್ಯೆ ರಾಜಣ್ಣ ನಿವಾಸದಲ್ಲಿಂದು ಡಿನ್ನರ್, ಸಿಎಂ ಭಾಗಿ
ಗಿಲ್ಲಿ ನಟನ ಮೇಲೆ ಏಕಾಏಕಿ ದಾಳಿಗೆ ಇಳಿದ ಅಶ್ವಿನಿ, ಧ್ರುವಂತ್
ಗಿಲ್ಲಿ ನಟನ ಮೇಲೆ ಏಕಾಏಕಿ ದಾಳಿಗೆ ಇಳಿದ ಅಶ್ವಿನಿ, ಧ್ರುವಂತ್
ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ?
ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ?
ರೋಹಿಣಿ ನಕ್ಷತ್ರದಲ್ಲಿ ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ವಿವರಣೆ ಇಲ್ಲಿದೆ
ರೋಹಿಣಿ ನಕ್ಷತ್ರದಲ್ಲಿ ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ವಿವರಣೆ ಇಲ್ಲಿದೆ
ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು; ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದ
ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು; ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದ
ಬೇರೊಬ್ಬರೊಂದಿಗೆ ಓಡಿಹೋದ ಹೆಂಡ್ತಿ: ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ ಪತಿ
ಬೇರೊಬ್ಬರೊಂದಿಗೆ ಓಡಿಹೋದ ಹೆಂಡ್ತಿ: ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ ಪತಿ
ಇದು ಕೊನೆ ಎಚ್ಚರಿಕೆ: ಸರ್ಕಾರಕ್ಕೆ ಮತ್ತೊಂದು ಡೆಡ್​​ಲೈನ್ ನೀಡಿದ ರೈತರು
ಇದು ಕೊನೆ ಎಚ್ಚರಿಕೆ: ಸರ್ಕಾರಕ್ಕೆ ಮತ್ತೊಂದು ಡೆಡ್​​ಲೈನ್ ನೀಡಿದ ರೈತರು
ಬೆಳಗಾವಿ ಕಬ್ಬು ಬೆಳೆಗಾರರ ಕಿಚ್ಚು: ಸ್ಥಳಕ್ಕೆ ಓಡಿ ಬಂದ ಸಚಿವ ಹೇಳಿದ್ದೇನು?
ಬೆಳಗಾವಿ ಕಬ್ಬು ಬೆಳೆಗಾರರ ಕಿಚ್ಚು: ಸ್ಥಳಕ್ಕೆ ಓಡಿ ಬಂದ ಸಚಿವ ಹೇಳಿದ್ದೇನು?
ರಾಹುಲ್, ಲಾಲುಗೆ ಸೀತಾ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ; ಅಮಿತ್ ಶಾ
ರಾಹುಲ್, ಲಾಲುಗೆ ಸೀತಾ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ; ಅಮಿತ್ ಶಾ