AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳಗೂ ಡಕ್, ಹೊರಗೂ ಡಕ್: ಇಂಗ್ಲೆಂಡ್ ಆಟಗಾರರನ್ನು ಲೈವ್​ನಲ್ಲೇ ಟ್ರೋಲ್ ಮಾಡಿದ ಬುಮ್ರಾ ಪತ್ನಿ..!

India vs England 1st Odi: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 110 ರನ್​ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ವಿಕೆಟ್ ನಷ್ಟವಿಲ್ಲದೆ ಚೇಸ್ ಮಾಡುವ ಮೂಲಕ 10 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು.

ಒಳಗೂ ಡಕ್, ಹೊರಗೂ ಡಕ್: ಇಂಗ್ಲೆಂಡ್ ಆಟಗಾರರನ್ನು ಲೈವ್​ನಲ್ಲೇ ಟ್ರೋಲ್ ಮಾಡಿದ ಬುಮ್ರಾ ಪತ್ನಿ..!
Jasprit Bumrah-Sanjana Ganesan
TV9 Web
| Edited By: |

Updated on: Jul 13, 2022 | 10:54 AM

Share

ಲಂಡನ್​ನ ಓವಲ್‌ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ (India vs England) ವಿರುದ್ಧ ಟೀಮ್ ಇಂಡಿಯಾ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನ ರೂವಾರಿ ಜಸ್​ಪ್ರೀತ್ ಬುಮ್ರಾ (Jasprit Bumrah). ಏಕೆಂದರೆ ಇಂಗ್ಲೆಂಡ್ ತಂಡವನ್ನು ಕೇವಲ 110 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 7.2 ಓವರ್ ಬೌಲಿಂಗ್ ಮಾಡಿದ್ದ ಬುಮ್ರಾ ಕೇವಲ 19 ರನ್ ನೀಡಿ 6 ವಿಕೆಟ್ ಉರುಳಿಸಿ ಮಿಂಚಿದ್ದರು. ವಿಶೇಷ ಎಂದರೆ ಈ ಪಂದ್ಯದಲ್ಲಿ ಜೇಸನ್ ರಾಯ್, ಜೋ ರೂಟ್, ಬೆನ್​ ಸ್ಟೋಕ್ಸ್ ಹಾಗೂ ಲಿಯಾಮ್ ಲಿವಿಂಗ್​ಸ್ಟೋನ್ ಶೂನ್ಯಕ್ಕೆ ಔಟಾಗಿದ್ದರು. ಇತ್ತ ಇಂಗ್ಲೆಂಡ್ ತಂಡವು ಕೇವಲ 110 ರನ್​ಗಳಿಗೆ ಆಲೌಟಾದ ಬಳಿಕ ಇನಿಂಗ್ಸ್​ ಬ್ರೇಕ್​ನಲ್ಲಿ ಬುಮ್ರಾ ಪತ್ನಿ ಸಂಜನಾ ಗಣೇಶನ್ (Sanjana Ganesan) ಕಾಣಿಸಿಕೊಂಡಿದ್ದರು.

ಸೋನಿ ನೆಟ್​ವರ್ಕ್​ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಸಂಜನಾ ಇಂಗ್ಲೆಂಡ್ ತಂಡದ ಪ್ರದರ್ಶನವನ್ನು ಲೈವ್​ನಲ್ಲೇ ಟ್ರೋಲ್ ಮಾಡುವ ಮೂಲಕ ಗಮನ ಸೆಳೆದರು. ದಿ ಓವಲ್​ ಮೈದಾನದ ಫುಡ್​ ಸ್ಟಾಲ್​ಗಳಲ್ಲಿ ಆಹಾರಗಳ ಬಗ್ಗೆ ಪರಿಚಯಿಸಿದ್ದ ಸಂಜನಾ ಗಣೇಶನ್ ಆತಿಥೇಯ ತಂಡದ ಬ್ಯಾಟರ್‌ಗಳನ್ನು ನಿರ್ದಯವಾಗಿ ಮತ್ತು ಉಲ್ಲಾಸದಿಂದ ಟ್ರೋಲ್ ಮಾಡಿದರು.

ಇದನ್ನೂ ಓದಿ
Image
Virat Kohli: ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಟೀಕೆ ಮಾಡುವ ಮುನ್ನ ಈ ಅಂಕಿ ಅಂಶಗಳನ್ನೊಮ್ಮೆ ನೋಡಿ..!
Image
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Image
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Image
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಫುಡ್​ ಸ್ಟಾಲ್​ಗಳ ಬಗ್ಗೆ ಮಾತನಾಡುತ್ತಾ, ಇಂಗ್ಲಿಷ್ ಕ್ರಿಕೆಟ್​ ಪ್ರೇಮಿಗಳು ಸದಾ ತುಂಬಿಕೊಂಡಿರುವ ಬ್ಲಾಕ್ ಇದಾಗಿದೆ. ಅವರು ಹೆಚ್ಚು ಹೊತ್ತು ಕ್ರಿಕೆಟ್ ನೋಡಲು ಬಯಸುತ್ತಿಲ್ಲ. ಏಕೆಂದರೆ ಇಲ್ಲಿ ಸಾಕಷ್ಟು ಫುಡ್​ ಸ್ಟಾಲ್‌ಗಳಿವೆ. ಇಲ್ಲಿರುವ ದಿ ಕ್ರಿಸ್ಪಿ ಡಕ್ ಸ್ಟಾಲ್​ಗೆ ಬನ್ನಿ. ನಿಮಗೆ ಇಲ್ಲಿ ಹಾಟ್ ಆಗಿರುವ ಕ್ರಿಸ್ಪಿ ಡಕ್, ಡಕ್ ಫ್ಯಾಟ್ ಚಿಪ್ಸ್ ಸೇರಿದಂತೆ ಹಲವು ಆಹಾರಗಳು ಸಿಗುತ್ತವೆ. ಅತ್ತ ಕಡೆ ಮೈದಾನದಲ್ಲೂ ಡಕ್ (ಶೂನ್ಯ), ಇತ್ತ ಕಡೆ ಮೈದಾನದ ಹೊರಗೂ ಡಕ್…ಎಷ್ಟು ಚೆನ್ನಾಗಿದೆ. ಆದರೆ ಇಂಗ್ಲೆಂಡ್ ತಂಡದ ಕೆಲ ಬ್ಯಾಟ್ಸ್​ಮನ್​ಗಳು ಇತ್ತ ತಲೆ ಹಾಕುವುದಿಲ್ಲ ಎಂದು ಸಂಜನಾ ಗಣೇಶನ್ ಲೈವ್​ನಲ್ಲೇ ಟ್ರೋಲ್ ಮಾಡಿದ್ದರು.

ಈ ಪಂದ್ಯದಲ್ಲಿ ಜೇಸನ್ ರಾಯ್, ಜೋ ರೂಟ್, ಬೆನ್​ ಸ್ಟೋಕ್ಸ್ ಹಾಗೂ ಲಿಯಾಮ್ ಲಿವಿಂಗ್​ಸ್ಟೋನ್ ಡಕ್​ ಔಟ್ ಆಗಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಸಂಜನಾ, ಇಂಗ್ಲೆಂಡ್​ನ ಕೆಲ ಆಟಗಾರರು ಈ ಕಡೆ ಬರಲು ಇಷ್ಟಪಡುವುದಿಲ್ಲ ಎಂದು ಕಿಚಾಯಿಸಿದ್ದರು. ಇದೀಗ ಈ ವಿಡಿಯೋವನ್ನು ಸೋನಿ ನೆಟ್​ವರ್ಕ್​ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅತ್ತ ಕಡೆ ಪತಿ ಜಸ್​ಪ್ರೀತ್ ಬುಮ್ರಾ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳನ್ನು ಶೂನ್ಯಕ್ಕೆ ಪೆವಿಲಿಯನ್​ಗೆ ಕಳುಹಿಸಿದರೆ, ಇತ್ತ ಕಡೆಯಿಂದ ಪತ್ನಿ ಸಂಜನಾ ಗಣೇಶನ್ ಡಕ್ ಬೌನ್ಸರ್ ಎಸೆದಿದ್ದಾರೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 110 ರನ್​ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ವಿಕೆಟ್ ನಷ್ಟವಿಲ್ಲದೆ ಚೇಸ್ ಮಾಡುವ ಮೂಲಕ 10 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು. ಹಾಗೆಯೇ ಟೀಮ್ ಇಂಡಿಯಾ ಪರ 7.2 ಓವರ್​ಗಳಲ್ಲಿ 19 ರನ್ ನೀಡಿ 6 ವಿಕೆಟ್ ಪಡೆದ ಜಸ್​ಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.