Sanju Samson: ಜೈಸ್ವಾಲ್ ಶತಕ ತಪ್ಪಿಸಲು ಕ್ರೀಡಾ ಸ್ಫೂರ್ತಿ ಮರೆತ ಕೆಕೆಆರ್ ಬೌಲರ್​ಗೆ ಸಂಜು ಸ್ಯಾಮ್ಸನ್ ಮಾಡಿದ್ದೇನು ನೋಡಿ

Yashasvi Jaiswal, KKR vs RR: ಯಶಸ್ವಿ ಜೈಸ್ವಾಲ್ ಶತಕವನ್ನು ತಪ್ಪಿಸಲು ಕೋಲ್ಕತ್ತಾ ಬೌಲರ್ ಸುಯೇಶ್ ಶರ್ಮಾ ಹರಸಾಹಸ ಪಟ್ಟರೆ ಅತ್ತ ನಾಯಕ ಸಂಜು ಸ್ಯಾಮ್ಸನ್ ಸೆಂಚುರಿ ಗಳಿಸಲೆಂದು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರು.

Sanju Samson: ಜೈಸ್ವಾಲ್ ಶತಕ ತಪ್ಪಿಸಲು ಕ್ರೀಡಾ ಸ್ಫೂರ್ತಿ ಮರೆತ ಕೆಕೆಆರ್ ಬೌಲರ್​ಗೆ ಸಂಜು ಸ್ಯಾಮ್ಸನ್ ಮಾಡಿದ್ದೇನು ನೋಡಿ
Suyash Sharma and Sanju Samson
Follow us
Vinay Bhat
|

Updated on:May 12, 2023 | 9:46 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2023) ನಡೆಯುತ್ತಿರುವ ಪ್ರತಿಯೊಂದು ಪಂದ್ಯ ಕೂಡ ರೋಚಕತೆ ಸೃಷ್ಟಿಸುತ್ತಿದೆ. ಹೊಸ ಹೊಸ ದಾಖಲೆಗಳು ನಿರ್ಮಾಣವಾಗುತ್ತಿದೆ. ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (KKR vs RR) ನಡುವಣ ಪಂದ್ಯ ಕೂಡ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಕೆಕೆಆರ್ ಬೌಲರ್​ಗಳ ಬೆಂಡೆತ್ತಿದ ರಾಜಸ್ಥಾನ್ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಕೇವಲ 47 ಎಸೆತಗಳಲ್ಲಿ 13 ಫೋರ್, 5 ಸಿಕ್ಸರ್ ಸಿಡಿಸಿ ಅಜೇಯ 98 ರನ್ ಚಚ್ಚಿದರು. ಈ ಮೂಲಕ 2 ರನ್​ಗಳಿಂದ ಶತಕ ವಂಚಿತರಾದರು.

ಜೈಸ್ವಾಲ್ ಶತಕವನ್ನು ತಪ್ಪಿಸಲು ಕೋಲ್ಕತ್ತಾ ಬೌಲರ್ ಹರಸಾಹಸ ಪಟ್ಟರೆ ಅತ್ತ ನಾಯಕ ಸಂಜು ಸ್ಯಾಮ್ಸನ್ ಅವರು ಯಶಸ್ವಿ ಸೆಂಚುರಿ ಗಳಿಸಲೆಂದು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರು. ಅದರಲ್ಲೂ 12.5 ಓವರ್ ಆಗುವಾಗ ನಡೆದ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
MI vs GT, IPL 2023: ಐಪಿಎಲ್​ನಲ್ಲಿಂದು ಮುಂಬೈ-ಗುಜರಾತ್ ನಡುವೆ ಹೈವೋಲ್ಟೇಜ್ ಪಂದ್ಯ: ಜಿಟಿ ಗೆದ್ದರೆ ಪ್ಲೇ ಆಫ್​ಗೆ ಲಗ್ಗೆ
Image
ISSF World Cup: ISSF ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಕನ್ನಡತಿ ದಿವ್ಯಾ
Image
Yashasvi Jaiswal: ರಾಹುಲ್ ದಾಖಲೆ ಉಡೀಸ್: ಯಶಸ್ವಿ ಜೈಸ್ವಾಲ್ ಸ್ಪೋಟಕ ಅರ್ಧಶತಕ
Image
IPL 2023: 7 ಪಂದ್ಯಗಳು 19 ರನ್​: ಇದು RCB ಬ್ಯಾಟ್ಸ್​ಮನ್​ಗಳ ವೈಫಲ್ಯದ ಕಥೆ..!

Yuzvendra Chahal: ಹಳೆಯ ದಾಖಲೆಗಳೆಲ್ಲಾ ಉಡೀಸ್: ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದ ಚಹಾಲ್

13ನೇ ಓವರ್ ಅನ್ನು ಸುಯಾಶ್ ಶರ್ಮಾ ಬೌಲಿಂಗ್ ಮಾಡುತ್ತಿದ್ದರು. ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್ ಇದ್ದರು. ಅತ್ತ ನಾನ್​ಸ್ಟ್ರೈಕರ್​ನಲ್ಲಿ ಯಶಸ್ವಿ ಜೈಸ್ವಾಲ್ 94 ರನ್ ಗಳಿಸಿ ನಿಂತಿದ್ದರು. ಜೈಸ್ವಾಲ್ ಶತಕಕ್ಕೆ ಒಂದು ಸಿಕ್ಸರ್ ಬೇಕಿತ್ತಷ್ಟೆ. ಆದರೆ, ಆರ್​ಆರ್​ ಗೆಲುವಿಗೆ ಕೇವಲ 3 ರನ್​ಗಳ ಅವಶ್ಯಕತೆಯಿತ್ತು. ಈ ಸಂದರ್ಭ ಕೊನೆಯ ಎಸೆತವನ್ನು ಸುಯಾಶ್ ಅವರು ಸ್ಯಾಮ್ಸನ್​ಗೆ ಲೆಗ್​ ಸೈಡ್ ಎಸೆದು ವಿಕೆಟ್ ಹಿಂಭಾಗದಿಂದ ಚೆಂಡು ವೈಡ್ ಫೋರ್ ಹೋಗಲಿ ಎಂದು ಎಸೆದರು.

ಕೆಕೆಆರ್ ಬೌಲರ್​ನ ಕಳ್ಳಾಟವನ್ನು ಅರಿತ ಸ್ಯಾಮ್ಸನ್ ತಾನುಕೂಡ ವಿಕೆಟ್ ಮುಂದೆಬಂದು ಅದನ್ನು ಡಾಟ್ ಬಾಲ್ ಆಗುವಂತೆ ಮಾಡಿದರು. ಬಳಿಕ ಜೈಸ್ವಾಲ್​ಗೆ ನೀವು ಸಿಕ್ಸ್ ಸಿಡಿಸು ಎಂಬ ಸೂಚನೆ ನೀಡಿದರು. ಸ್ಯಾಮ್ಸನ್ ಅವರ ಈ ಕಾರ್ಯಕ್ಕೆ ಪ್ರಶಂಸೆಯ ಮಾತುಗಳು ಕೇಳಿಬಂದರೆ ಸುಯಾಶ್ ಕ್ರೀಡಾ ಸ್ಫೂರ್ತಿ ಮರೆತರು ಎಂದು ಹೇಳುತ್ತಿದ್ದಾರೆ. ಆದರೆ, ಮುಂದಿನ ಓವರ್​ನಲ್ಲಿ ಜೈಸ್ವಾಲ್​ಗೆ ಸಿಕ್ಸ್ ಸಿಡಿಸಲು ಸಾಧ್ಯವಾಗಿಲ್ಲ. ಬದಲಾಗಿ ಚೆಂಡನ್ನು ಫೋರ್​ಗೆ ಅಟ್ಟಿ ವಿನ್ನಿಂಗ್ ಶಾಟ್ ಹೊಡೆದರು.

ಇತಿಹಾಸ ನಿರ್ಮಿಸಿದ ಜೈಸ್ವಾಲ್:

ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ ಐಪಿಎಲ್​ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಜೈಸ್ವಾಲ್ ಹೊಸ ಇತಿಹಾಸ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ಕೆಎಲ್ ರಾಹುಲ್ ಮತ್ತು ಪ್ಯಾಟ್ ಕಮಿನ್ಸ್ ಹೆಸರಿನಲ್ಲಿತ್ತು. 2018 ರಲ್ಲಿ ರಾಹುಲ್ ಡೆಲ್ಲಿ ವಿರುದ್ಧ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಬಳಿಕ ಕಳೆದ ವರ್ಷ ಕೆಕೆಆರ್ ಪರ ಪ್ಯಾಟ್ ಕಮಿನ್ಸ್ ಮುಂಬೈ ವಿರುದ್ಧ 14 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ರಾಹುಲ್ ದಾಖಲೆ ಸರಿಗಟ್ಟಿದ್ದರು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಜೈಸ್ವಾಲ್, ”ಮೈದಾನಕ್ಕೆ ಹೋಗಿ ಅತ್ಯುತ್ತಮ ಆಟ ಆಡಬೇಕು ಎಂಬುದನ್ನು ನಾನು ಯಾವತ್ತೂ ಯೋಚಿಸುತ್ತಿರುತ್ತೇನೆ. ಇಂದಿನ ಆಟ ಖುಷಿ ತಂದಿದೆ. ನಾನು ಈ ಪಂದ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದೆ. ವಿನ್ನಿಂಗ್ ಶಾಟ್ ಹೊಡೆದಿದ್ದು ವಿಶೇಷ ಅನುಭವ. ಸೆಂಚುರಿ ಕೈತಪ್ಪಿದ ಬಗ್ಗೆ ಯಾವುದೇ ಬೇಸರವಿಲ್ಲ. ನಮಗೆ ನೆಟ್​ ರನ್​ರೇಟ್ ಮಾತ್ರ ಮುಖ್ಯವಾಗಿತ್ತು. ನಾನು ಮತ್ತು ಸ್ಯಾಮ್ಸನ್ ಆದಷ್ಟು ಬೇಗ ಪಂದ್ಯವನ್ನು ಮುಗಿಸುವ ಬಗ್ಗೆ ಮಾತ್ರ ಮಾತನಾಡುತ್ತಿದ್ದೆವು,” ಎಂದು ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:24 am, Fri, 12 May 23

ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ