Sanju Samson: ಭರ್ಜರಿ ಶತಕ ಸಿಡಿಸಿದ ಸಂಜು ಸ್ಯಾಮ್ಸನ್
Vijay Hazare Trophy 2023: ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸಾಹಬ್ ಯುವರಾಜ್ 136 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 13 ಫೋರ್ಗಳೊಂದಿಗೆ ಅಜೇಯ 121 ರನ್ ಸಿಡಿಸಿದರು. ಈ ಶತಕದ ನೆರವಿನಿಂದ ರೈಲ್ವೇಸ್ ತಂಡವು 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ ಪೇರಿಸಿತು.
ಬೆಂಗಳೂರಿನ ಕಿನಿ ಸ್ಪೋರ್ಟ್ಸ್ ಅರೇನಾ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ರೌಂಡ್ 7 ಪಂದ್ಯದಲ್ಲಿ ಕೇರಳ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ರೈಲ್ವೇಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ರೈಲ್ವೇಸ್ ಪ್ರಥಮ್ ಸಿಂಗ್ 77 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 61 ರನ್ ಬಾರಿಸಿದರು. ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸಾಹಬ್ ಯುವರಾಜ್ 136 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 13 ಫೋರ್ಗಳೊಂದಿಗೆ ಅಜೇಯ 121 ರನ್ ಸಿಡಿಸಿದರು. ಈ ಶತಕದ ನೆರವಿನಿಂದ ರೈಲ್ವೇಸ್ ತಂಡವು 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ ಪೇರಿಸಿತು.
256 ರನ್ಗಳ ಗುರಿಯನ್ನು ಬೆನ್ನತ್ತಿದ ಕೇರಳ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 26 ರನ್ಗಳಿಗೆ ರೋಹನ್ ಕುನ್ನುಮ್ಮಲ್ (0), ಸಚಿನ್ ಬೇಬಿ (9) ಹಾಗೂ ಸಲ್ಮಾನ್ ನಝೀರ್ (2) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ಸಂಜು ಸ್ಯಾಮ್ಸನ್ ಹಾಗೂ ಶ್ರೇಯಸ್ ಗೋಪಾಲ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಅಲ್ಲದೆ 63 ಎಸೆತಗಳಲ್ಲಿ 53 ರನ್ಗಳ ಕೊಡುಗೆ ನೀಡಿ ಶ್ರೇಯಸ್ ಕೂಡ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ಸಂಜು ಸ್ಯಾಮ್ಸನ್ 139 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 128 ರನ್ ಬಾರಿಸಿದರು. ಅಲ್ಲದೆ 50ನೇ ಓವರ್ನ 5ನೇ ಎಸೆತದಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಇತ್ತ ಸಂಜು ಸ್ಯಾಮ್ಸನ್ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಈ ಪಂದ್ಯದಲ್ಲಿ ಕೇರಳ ತಂಡಕ್ಕೆ ಗೆಲುವು ದಕ್ಕಲಿಲ್ಲ. ಅಂತಿಮವಾಗಿ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 237 ರನ್ಗಳಿಸಿ ಕೇರಳ ತಂಡವು 18 ರನ್ಗಳಿಂದ ಸೋಲೊಪ್ಪಿಕೊಂಡಿತು.
ಕೇರಳ ಪ್ಲೇಯಿಂಗ್ ಇಲೆವೆನ್: ರೋಹನ್ ಕುನ್ನುಮ್ಮಲ್ , ಸಚಿನ್ ಬೇಬಿ , ಸಂಜು ಸ್ಯಾಮ್ಸನ್ (ನಾಯಕ) , ಶ್ರೇಯಸ್ ಗೋಪಾಲ್ , ಸಲ್ಮಾನ್ ನಿಜಾರ್ , ಕೃಷ್ಣ ಪ್ರಸಾದ್ , ಅಬ್ದುಲ್ ಬಸಿತ್ , ಬಾಸಿಲ್ ತಂಪಿ , ಅಖಿನ್ ಸತಾರ್ , ವೈಶಾಖ್ ಚಂದ್ರನ್ , ಅಖಿಲ್ ಸ್ಕಾರಿಯಾ.
ಇದನ್ನೂ ಓದಿ: IPL 2024: ವರ್ಷದ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ಪಡೆದ RCB
ರೈಲ್ವೇಸ್ ಪ್ಲೇಯಿಂಗ್ ಇಲೆವೆನ್: ಶಿವಂ ಚೌಧರಿ , ವಿವೇಕ್ ಸಿಂಗ್ , ಪ್ರಥಮ್ ಸಿಂಗ್ , ಭಾರ್ಗವ್ ಮೆರಾಯ್ , ಉಪೇಂದ್ರ ಯಾದವ್ (ನಾಯಕ) , ಸಾಹಬ್ ಯುವರಾಜ್ , ರಾಹುಲ್ ಶರ್ಮಾ , ಕರ್ಣ್ ಶರ್ಮಾ , ಅಶುತೋಷ್ ಶರ್ಮಾ , ರಾಜ್ ಚೌಧರಿ , ಹಿಮಾಂಶು ಸಂಗ್ವಾನ್.