Sanju Samson: ಬಡ ಫುಟ್ಬಾಲ್​ ಆಟಗಾರನ ನೆರವಿಗೆ ನಿಂತ ಸಂಜು ಸ್ಯಾಮ್ಸನ್​

ಆದರ್ಶ್ ಪೋರ್ಚುಗಲ್‌ನ ಸ್ಟಾರ್ ಸ್ಟ್ರೈಕರ್ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಅಭಿಮಾನಿಯಾಗಿದ್ದು, ಮುಂದೊಂದು ದಿನ ಅವರು ಭಾರತದ ಸ್ಟಾರ್ ಫುಟ್‌ಬಾಲ್ ಆಟಗಾರರಾಗುತ್ತಾರೆ.

Sanju Samson: ಬಡ ಫುಟ್ಬಾಲ್​ ಆಟಗಾರನ ನೆರವಿಗೆ ನಿಂತ ಸಂಜು ಸ್ಯಾಮ್ಸನ್​
Sanju Samson
Follow us
TV9 Web
| Updated By: ಝಾಹಿರ್ ಯೂಸುಫ್

Updated on: Nov 13, 2021 | 8:29 PM

ಕೇರಳದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಬಡ ಆಟಗಾರರೊಬ್ಬರ ಕನಸು ಈಡೇರಿಸಲು ಸಹಾಯ ಹಸ್ತ ಚಾಚುವ ಮೂಲಕ ಸುದ್ದಿಯಾಗಿದ್ದಾರೆ. ಸ್ಯಾಮ್ಸನ್ ತನ್ನ ರಾಜ್ಯದ ಫುಟ್ಬಾಲ್ ಆಟಗಾರ ಆದರ್ಶ್ ಅವರ ಆಕಾಂಕ್ಷೆಗಳನ್ನು ಈಡೇರಿಸಲು ನೆರವಾಗಿದ್ದು, ಅದರಂತೆ ಯುವ ಫುಟ್ಬಾಲ್ ಆಟಗಾರನಿಗೆ ಸ್ಪೇನ್​ಗೆ ತೆರಳಲು ವಿಮಾನ ಟಿಕೆಟ್‌ಗಾಗಿ ವ್ಯವಸ್ಥೆ ಮಾಡಿದ್ದಾರೆ. ಆದರ್ಶ್​ ಕೇರಳದ ಉದಯೋನ್ಮುಖ ಫುಟ್ಬಾಲ್ ಆಟಗಾರ. ಈತನ ಪ್ರತಿಭೆ ಗುರುತಿಸಿದ ಸ್ಪೇನ್‌ನ ಫುಟ್‌ಬಾಲ್ ಕ್ಲಬ್‌ ಒಂದು ತಿಂಗಳ ತರಬೇತಿಗಾಗಿ ಆಯ್ಕೆ ಮಾಡಿತ್ತು. ಆದರೆ ಸ್ಪೇನ್​ಗೆ ಕಳುಹಿಸಿ ಕೊಡುವ ಆರ್ಥಿಕ ಪರಿಸ್ಥಿತಿಯಲ್ಲಿ ಆದರ್ಶ್ ಕುಟುಂಬವಿರಲಿಲ್ಲ. ಈ ಬಗ್ಗೆ ಆದರ್ಶ್ ಚೆಂಗನ್ನೂರು ಶಾಸಕ ಮತ್ತು ಕೇರಳ ಸಂಸ್ಕೃತಿ ಮತ್ತು ಯುವ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರ ಸಹಾಯವನ್ನು ಕೋರಿದ್ದರು.

ಈ ಫುಟ್ಬಾಲ್ ಆಟಗಾರನ ಕಥೆಯನ್ನು ಸಚಿವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಇದಾದ ಬಳಿಕ ಕಾರಕ್ಕೋಡ್‌ನ ಲಿಯೋ ಕ್ಲಬ್ ಆದರ್ಶ್‌ಗೆ 50 ಸಾವಿರ ರೂ. ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಉಳಿದ ಮೊತ್ತವನ್ನು ಕೇರಳ ಸಚಿವರು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್​ ಕೂಡ ಯುವ ಫುಟ್ಬಾಲ್​ ಆಟಗಾರನ ನೆರವಿಗೆ ಧಾವಿಸಿದ್ದಾರೆ. ಅದರಂತೆ ಸ್ಪೇನ್​ಗೆ ತೆರಳಲು ವಿಮಾನದ ಟಿಕೆಟ್ ಕೊಡಿಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಕೇರಳ ಸಚಿವ ಸಾಜಿ ಚೆರಿಯನ್, “ಒಂದು ವಾರದ ಹಿಂದೆ ಆದರ್ಶ್ ಎಂಬ ಯುವಕ ನನ್ನನ್ನು ಭೇಟಿಯಾಗಲು ಬಂದಿದ್ದ. ಅವರು ಅದ್ಭುತ ಫುಟ್ಬಾಲ್ ಆಟಗಾರ. ಸ್ಪೇನ್‌ನ ಮೂರನೇ ಡಿವಿಷನ್ ಲೀಗ್‌ಗೆ ಸಂಯೋಜಿತವಾದ ಕ್ಲಬ್‌ನೊಂದಿಗೆ ಒಂದು ತಿಂಗಳ ಕಾಲ ತರಬೇತಿ ಪಡೆಯುವ ಅವಕಾಶವ ಪಡೆದಿದ್ದನು. ಆದರೆ ಆದರ್ಶ್ ಅವರ ಆರ್ಥಿಕ ಸ್ಥಿತಿಯು ಸ್ಪೇನ್‌ಗೆ ತೆರಳುವಂತಿರಲಿಲ್ಲ. ಹೀಗಾಗಿ ಅವರು ನನ್ನ ಬಳಿ ಸಹಾಯ ಕೇಳಿದರು. ಆದರ್ಶ್ ಅವರ ತರಬೇತಿಯ ಸಮಯದಲ್ಲಿ ಐದು ಪಂದ್ಯಗಳನ್ನು ಆಡುವ ಅವಕಾಶ ಸಿಗಲಿದೆ. ಒಂದು ವೇಳೆ ಆತನ ಪ್ರದರ್ಶನ ಉತ್ತಮವಾಗಿದ್ದರೆ ಈ ಫುಟ್ಬಾಲ್ ಕ್ಲಬ್​ ಒಪ್ಪಂದವನ್ನು ಮಾಡಿಕೊಳ್ಳಲಿದೆ.

ಈ ಕಷ್ಟಕರ ಪರಿಸ್ಥಿತಿಯಲ್ಲಿ, ನಮ್ಮ ರಾಜ್ಯದ ಸ್ಟಾರ್ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಆದರ್ಶ್ ಅವರ ವಿಮಾನ ಟಿಕೆಟ್‌ಗೆ ವ್ಯವಸ್ಥೆ ಮಾಡಿದ್ದಾರೆ. ಅದೇ ವೇಳೆ ಉಳಿದ ಮೊತ್ತಕ್ಕೆ ರಾಜ್ಯ ಕ್ರೀಡಾ ಇಲಾಖೆಗೂ ನೆರವು ಕೇಳಿದ್ದೇವೆ. ಅದರಂತೆ ಶೀಘ್ರದಲ್ಲೇ ಆದರ್ಶ್ ಅವರನ್ನು ನಾವು ಸ್ಪೇನ್‌ಗೆ ಕಳುಹಿಸಿ ಕೊಡಲಿದ್ದೇವೆ. ಆದರ್ಶ್ ಪೋರ್ಚುಗಲ್‌ನ ಸ್ಟಾರ್ ಸ್ಟ್ರೈಕರ್ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಅಭಿಮಾನಿಯಾಗಿದ್ದು, ಮುಂದೊಂದು ದಿನ ಅವರು ಭಾರತದ ಸ್ಟಾರ್ ಫುಟ್‌ಬಾಲ್ ಆಟಗಾರರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕೇರಳ ಸಚಿವ ಸಾಜಿ ಚೆರಿಯನ್ ಬರೆದುಕೊಂಡಿದ್ದಾರೆ.

ಇದರೊಂದಿಗೆ ಸಂಜು ಸ್ಯಾಮ್ಸನ್ ಬಡ ಫುಟ್ಬಾಲ್ ಆಟಗಾರನಿಗೆ ನೀಡಿರುವ ಸಹಾಯ ಹಸ್ತದ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ಸ್ಯಾಮ್ಸನ್​ ಅವರ ದೊಡ್ಡ ಮನಸ್ಸಿಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Explained: ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮತ್ತೊಂದು ಭಾರತ-ಪಾಕಿಸ್ತಾನ್…ಆದರೆ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

(Sanju Samson Sponsors Flight Ticket For Budding Footballer From Kerala)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ