
ಈ ವರ್ಷದ ಏಷ್ಯಾಕಪ್ಗಾಗಿ (Asia Cup 2022) ಟೀಂ ಇಂಡಿಯಾವನ್ನು (Indian cricket team) ಆಗಸ್ಟ್ 8 ರಂದು ಬಿಸಿಸಿಐ ಪ್ರಕಟಿಸಿತ್ತು. ಆದರೆ ಪ್ರಕಟವಾದ ತಂಡವನ್ನು ನೋಡಿದ ಅಭಿಮಾನಿಗಳಿಗೆ ಬಿಗ್ ಶಾಕ್ ಕಾದಿತ್ತು. ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಗಾಯದ ಕಾರಣ ಏಷ್ಯಾಕಪ್‌ನಿಂದ ಹೊರಗುಳಿದಿದ್ದ ಸುದ್ದಿ ಭಾರತೀಯರಿಗೆ ಆಘಾತ ನೀಡಿತ್ತು. ಆದರೆ ಈ ಸುದ್ದಿ ನೋಡಿದ ಪಾಕಿಸ್ತಾನದ ಅಭಿಮಾನಿಗಳು ಮಾತ್ರ ಹಾಲು ಕುಡಿದು ತೃಪ್ತಿಪಟ್ಟಿದ್ದರು. ಇದೀಗ ಪಾಕಿಸ್ತಾನಕ್ಕೂ ಇದೇ ಸ್ಥಿತಿ ಎದುರಾಗಿದ್ದು, ತಂಡದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ (Shaheen Shah Afridi) ಗಾಯದಿಂದಾಗಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಈಗ ಈ ಸುದ್ದಿ ಪಾಕ್ ತಂಡಕ್ಕೆ ಹಾಗೂ ಅದರ ಅಭಿಮಾನಿಗಳಿಗೆ ನುಂಗಲಾರದ ಬಿಸಿ ತುಪ್ಪದಂತ್ತಾಗಿದೆ.
ಏಷ್ಯಾಕಪ್ 2022 ಪ್ರಾರಂಭವಾಗುವ ಒಂದು ವಾರದ ಮೊದಲು ಅಂದರೆ,ಆಗಸ್ಟ್ 20 ರಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಷ್ಯಾಕಪ್ಗೆ ತನ್ನ ತಂಡವನ್ನು ಪ್ರಕಟಿಸಿತ್ತು. ಆದರೆ ಆ ತಂಡದಲ್ಲಿರಬೇಕಿದ್ದ ಪ್ರಮುಖ ಹೆಸರೊಂದು ಕಾಣೆಯಾಗಿತ್ತು. ತಂಡದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಈ ತಂಡದಲ್ಲಿಲ್ಲ ಎಂಬ ಸುದ್ದಿ ಪಾಕ್ ಅಭಿಮಾನಿಗಳಿಗೆ ಸಖತ್ ಶಾಕ್ ನೀಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಪಾಕ್ ಮಂಡಳಿ, ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಶಾಹೀನ್ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದಿತ್ತು. ಇಂಜುರಿಗೊಳಗಾಗಿರುವ ಆಫ್ರಿದಿಗೆ ಸುಮಾರು 6 ವಾರಗಳ ಕಾಲ ವಿಶ್ರಾಂತಿಯನ್ನು ಸೂಚಿಸಲಾಗಿದ್ದು, ಅವರು ಏಷ್ಯಾಕಪ್‌ನಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿಯನ್ನು ನೀಡಿತ್ತು. ಆದ್ದರಿಂದ ಈಗ ಆಗಸ್ಟ್ 28 ರಂದು ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಶಾಹೀನ್ ಇಲ್ಲದೆ ಕಣಕ್ಕಿಳಿಯಬೇಕಾಗಿದೆ.
ಬೇಸರ ವ್ಯಕ್ತಪಡಿಸಿದ ವಕಾರ್ ಯೂನಸ್
ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸುವಲ್ಲಿ ಶಾಹೀನ್ ಅಫ್ರಿದಿ ಪಾಕಿಸ್ತಾನ ಪರ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆರಂಭದಿಂದಲ್ಲೇ ಅಬ್ಬರಿಸಿದ್ದ ಅಫ್ರಿದಿ ಮೊದಲ ಓವರ್‌ನಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದಿದ್ದರು. ಬಳಿಕ ಕೆಲವೇ ಎಸೆತಗಳಲ್ಲಿ ಕೆಎಲ್ ರಾಹುಲ್ ಕೂಡ ಬಲಿಯಾಗಿದ್ದರು. ಆನಂತರ ಬಂದ ಕೊಹ್ಲಿಯೂ ಕೂಡ ಸೈಲೆಂಟ್ ಆಗಿ ಆಫ್ರಿದಿ ಬಲೆಗೆ ಬಿದ್ದಿದ್ದರು. ಹೀಗಿರುವಾಗ ಪಾಕಿಸ್ತಾನದ ಅಭಿಮಾನಿಗಳಿಗೆ ಈ ಸುದ್ದಿಯಿಂದ ನಿರಾಸೆಯಾಗುವುದು ಸಹಜ. ಪಾಕಿಸ್ತಾನದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾದ ವಕಾರ್ ಯೂನಿಸ್ ತಮ್ಮ ಹತಾಶೆಯನ್ನು ಟ್ವೀಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
ಶಾಹೀನ್ ಗಾಯಗೊಂಡಿರುವುದು ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ರಿಲೀಫ್ ಸಿಕ್ಕಂತ್ತಾಗಿದೆ. 2022 ರ ಏಷ್ಯಾಕಪ್‌ನಲ್ಲಿ ನಾವು ಆಫ್ರಿದಿ ಅವರನ್ನು ನೋಡಲಾಗುತ್ತಿಲ್ಲ ಎಂಬ ಬೇಸರವಿದೆ. ಶಾಹೀನ್ ಅಫ್ರಿದಿ ಶೀಘ್ರದಲ್ಲೇ ಫಿಟ್ ಆಗಲಿ ಎಂದು ಟ್ವೀಟ್‌ನಲ್ಲಿ ಯೂನಿಸ್ ಬರೆದುಕೊಂಡಿದ್ದಾರೆ.
Shaheen’s injury Big relief for the Indian top order batsmen. Sad we won’t be seeing him in #AsiaCup2022 Get fit soon Champ @iShaheenAfridi pic.twitter.com/Fosph7yVHs
— Waqar Younis (@waqyounis99) August 20, 2022
ಪಾಕಿಸ್ತಾನಿ ಅಭಿಮಾನಿಗಳು ಕೂಡ ತಮ್ಮ ನಿರಾಶೆ ಮತ್ತು ದುಃಖವನ್ನು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
Waking up to the news of Shaheen Afridi not playing in the Asia Cup 2022: pic.twitter.com/6l8OssqwzY
— Maznah (@MaznahShz) August 20, 2022
Shaheen Afridi is ruled out of the Asia Cup 2022. Yes, you read that right ? pic.twitter.com/LJuldwDKlD
— Shaheens Brigade (@ShaheensBrigade) August 20, 2022