IND vs BAN: ನೋ ಬಾಲ್ ನೀಡಿದಕ್ಕೆ ಅಂಪೈರ್‌ ಜೊತೆ ಜಗಳಕ್ಕಿಳಿದ ಶಕೀಬ್! ಬುದ್ಧಿ ಹೇಳಿದ ಕೊಹ್ಲಿ; ವಿಡಿಯೋ

T20 World cup 2022: ಕೊಹ್ಲಿ ಅಂಪೈರ್ ಕಡೆಗೆ ನೋಡಿ ಮನವಿ ಮಾಡಿದ ತಕ್ಷಣ, ಫೀಲ್ಡಿಂಗ್ ಮಾಡುತ್ತಿದ್ದ ಬಾಂಗ್ಲಾ ನಾಯಕ ಶಕೀಬ್ ಅಂಪೈರ್ ಬಳಿಗೆ ಓಡಿ ಬಂದು ಮಾತಿಗಿಳಿದರು. ವಾಸ್ತವವಾಗಿ ಕೊಹ್ಲಿ ಮನವಿ ಮಾಡಿದಕ್ಕೆ ಅಂಪೈರ್ ನೋಬಾಲ್ ನೀಡಿದ್ದಾರೆ ಎಂಬುದು ಶಕೀಬ್ ಅವರ ಕೋಪಕ್ಕೆ ಕಾರಣವಾಗಿತ್ತು.

IND vs BAN: ನೋ ಬಾಲ್ ನೀಡಿದಕ್ಕೆ ಅಂಪೈರ್‌ ಜೊತೆ ಜಗಳಕ್ಕಿಳಿದ ಶಕೀಬ್! ಬುದ್ಧಿ ಹೇಳಿದ ಕೊಹ್ಲಿ; ವಿಡಿಯೋ
ಅಂಪೈರ್ ಜೊತೆ ಜಗಳಕ್ಕಿಳಿದ ಶಕೀಬ್
Follow us
TV9 Web
| Updated By: ಪೃಥ್ವಿಶಂಕರ

Updated on:Nov 03, 2022 | 12:08 PM

ಬುಧವಾರ ನಡೆದ ಐಸಿಸಿ ಟಿ20 ವಿಶ್ವಕಪ್ 2022 ರ (ICC T20 World Cup 2022) ಸೂಪರ್ 12 ಸುತ್ತಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ವಿರಾಟ್ ಕೊಹ್ಲಿ (Virat Kohli) ಮತ್ತೊಮ್ಮೆ ಅಬ್ಬರಿಸಿ, ಅದ್ಭುತ ಅರ್ಧಶತಕ ಬಾರಿಸಿದರು. ಇದು ಈ ವಿಶ್ವಕಪ್‌ನಲ್ಲಿ ಕೊಹ್ಲಿ ಅವರ ಮೂರನೇ ಅರ್ಧಶತಕವಾಗಿದೆ. ಈ ಪಂದ್ಯದಲ್ಲಿ ಔಟಾಗದೆ 64 ರನ್ ಗಳಿಸಿದ ಕೊಹ್ಲಿ ತನ್ನ ಅಜೇಯ ಆಟವನ್ನು ಈ ವಿಶ್ವಕಪ್​ನಲ್ಲಿ 3 ಬಾರಿ ಪ್ರದರ್ಶನ ಮಾಡಿದ್ದಾರೆ. ಕೊಹ್ಲಿಯ ಈ ಅರ್ಧಶತಕದ ನೆರವಿನಿಂದಾಗಿ ಟೀಂ ಇಂಡಿಯಾ ಬಾಂಗ್ಲಾ ತಂಡಕ್ಕೆ 185 ರನ್ ಟಾರ್ಗೆಟ್ ನೀಡಿತು. ಆದರೆ ಮಳೆ ಪೀಡಿತ ಈ ಪಂದ್ಯದಲ್ಲಿ ಗೆಲ್ಲುವ ಹಂತದಲ್ಲಿದ್ದ ಶಕೀಬ್ (Shakib Al Hasan) ಪಡೆ ಕೊನೆ ಹಂತದಲ್ಲಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಟೀಂ ಇಂಡಿಯಾದ ಸೇಮಿಸ್ ಹಾದಿಯೂ ಸಗಮವಾಯಿತು. ಇದೇಲ್ಲದರ ನಡುವೆ ಈ ಪಂದ್ಯದಲ್ಲಿ ನಡೆದ ಅದೊಂದು ಘಟನೆ ಮತ್ತೊಮ್ಮೆ ಬಾಂಗ್ಲಾ ನಾಯಕನನ್ನು ಅಪರಾಧಿ ಸ್ಥಾನದಲ್ಲಿ ತಂದು ನಿಲ್ಲಿಸಿದೆ.

ಬೇಗನೆ ತಾಳ್ಮೆ ಕಳೆದುಕೊಳ್ಳುವುದಕ್ಕೆ ಹೆಸರುವಾಸಿಯಾಗಿರುವ ಬಾಂಗ್ಲಾ ತಂಡದ ನಾಯಕ ಶಕೀಬ್, ಈ ಪಂದ್ಯದಲ್ಲಿ ನೋಬಾಲ್ ನೀಡಿದ ಅಂಪೈರ್ ಎದುರು ಗರಂ ಆದರು. ಇದನ್ನು ತಡೆಯಲು ಬಂದ ಕೊಹ್ಲಿ ಜೊತೆಗೂ ಅವರು ಸ್ವಲ್ಪ ಸಮಯ ವಾಗ್ವಾದ ನಡೆಸಿದರು. ಈ ಮಾತುಕತೆ ಅತಿರೇಕಕ್ಕೆ ಹೋಗದಿದ್ದರೂ ಬಾಂಗ್ಲಾ ನಾಯಕನ ಮುಂಗೋಪವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿತು. ಈ ಹಿಂದೆಯೂ ಸಾಕಷ್ಟು ಬಾರಿ ಶಕೀಬ್ ಅಂಪೈರ್ ನೀಡಿದ ತೀರ್ಪಿಗೆ ಗರಂ ಆಗಿ ಅವರೊಂದಿಗೆ ಜಗಳಕ್ಕಿಳಿದಿರುವ ನಿದರ್ಶನಗಳಿವೆ.

ನೋ ಬಾಲ್‌ ನೀಡಿದಕ್ಕೆ ಗರಂ

ವಾಸ್ತವವಾಗಿ, ಬಾಂಗ್ಲಾ ಬೌಲರ್ ಹಸನ್ ಮಹಮೂದ್ ಅವರು ಟೀಂ ಇಂಡಿಯಾ ಇನ್ನಿಂಗ್ಸ್​ನ 16 ನೇ ಓವರ್ ಬೌಲ್ ಮಾಡಿದರು. ಈ ಓವರ್‌ನ ಕೊನೆಯ ಎಸೆತವನ್ನು ಮಹಮೂದ್ ಬೌನ್ಸರ್ ಎಸೆದರು. ಅದಕ್ಕೆ ಕೊಹ್ಲಿ ಬ್ರಿಡ್ಜ್ ಶಾಟ್ ಆಡಿ, ಡೀಪ್ ಸ್ಕ್ವೇರ್ ಲೆಗ್‌ ಕಡೆಗೆ ಬಾರಿಸಿದರು. ಬ್ರಿಡ್ಜ್ ಆಡಿದ ತಕ್ಷಣ ಕೊಹ್ಲಿ ಲೆಗ್ ಅಂಪೈರ್ ಕಡೆ ನೋಡಿ ನೋ ಬಾಲ್​ಗಾಗಿ ಮನವಿ ಸಲ್ಲಿಸಿದರು. ವಾಸ್ತವವಾಗಿ ಈ ಎಸೆತ ನೋ ಬಾಲ್ ಆಗಿತ್ತು. ಏಕೆಂದರೆ ಇದು ಈ ಓವರ್‌ನ ಎರಡನೇ ಬೌನ್ಸರ್ ಆಗಿದ್ದು, ನಿಯಮಗಳ ಪ್ರಕಾರ ಒಂದು ಓವರ್​ನಲ್ಲಿ ಒಂದೇ ಬೌನ್ಸರ್ ಎಸೆಯಲು ಅವಕಾಶವಿದ್ದು ಎರಡನೇ ಬೌನ್ಸರನ್ನು ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಅಂಪೈರ್ ಎರಾಸ್ಮಸ್ ಇದನ್ನು ನೋ ಬಾಲ್ ಎಂದು ತೀರ್ಪು ನೀಡಿದರು.

ಇದನ್ನೂ ಓದಿ: ಮತ್ತೆ ನಾಯಕತ್ವ ಬದಲಾವಣೆ; ಪಂಜಾಬ್ ನಾಯಕತ್ವದಿಂದ ಕನ್ನಡಿಗ ಮಯಾಂಕ್ ಔಟ್..! ಧವನ್​ಗೆ ಕಿಂಗ್ಸ್ ಕಮಾಂಡ್

ಈ ವೇಳೆ ಕೊಹ್ಲಿ ಅಂಪೈರ್ ಕಡೆಗೆ ನೋಡಿ ಮನವಿ ಮಾಡಿದ ತಕ್ಷಣ, ಫೀಲ್ಡಿಂಗ್ ಮಾಡುತ್ತಿದ್ದ ಬಾಂಗ್ಲಾ ನಾಯಕ ಶಕೀಬ್ ಅಂಪೈರ್ ಬಳಿಗೆ ಓಡಿ ಬಂದು ಮಾತಿಗಿಳಿದರು. ವಾಸ್ತವವಾಗಿ ಕೊಹ್ಲಿ ಮನವಿ ಮಾಡಿದಕ್ಕೆ ಅಂಪೈರ್ ನೋಬಾಲ್ ನೀಡಿದ್ದಾರೆ ಎಂಬುದು ಶಕೀಬ್ ಅವರ ಕೋಪಕ್ಕೆ ಕಾರಣವಾಗಿತ್ತು. ಆದರೆ ಅಷ್ಟರಲ್ಲಿ ಅಲ್ಲಿಗೆ ಬಂದ ಕೊಹ್ಲಿ ಅವರನ್ನು ತಡೆದರು ಮತ್ತು ಇಬ್ಬರೂ ಪರಸ್ಪರರ ಹೆಗಲ ಮೇಲೆ ಕೈಯಿಟ್ಟು ಮಾತನಾಡಲು ಪ್ರಾರಂಭಿಸಿದರು. ಅಷ್ಟರಲ್ಲಿ ಶಕೀಬ್ ಅಂಪೈರ್​ಗೆ ನಗುತ್ತಾ ಏನನ್ನೋ ಹೇಳಿದರು. ಇದಾದ ನಂತರ ಈ ಇಬ್ಬರು ಆಟಗಾರರು ಪರಸ್ಪರ ಭುಜದ ಮೇಲೆ ಕೈಯಿಟ್ಟು ಮಾತನಾಡಿ ನಗುತ್ತಲೇ ಅಲ್ಲಿಂದ ಬೇರ್ಪಟ್ಟರು. ಬಾಲ್ ನೋ ಬಾಲ್ ಆಗಿದ್ದರಿಂದ ಮುಂದಿನ ಬಾಲ್ ಫ್ರೀ ಹಿಟ್ ಆಗಿದ್ದು, ಆ ಎಸೆತದಲ್ಲಿ ದಿನೇಶ್ ಕಾರ್ತಿಕ್ ಕೇವಲ ಒಂದು ರನ್ ಮಾತ್ರ ಗಳಿಸಿದರು.

View this post on Instagram

A post shared by ICC (@icc)

ಕೊಹ್ಲಿ ಮೂರನೇ ಅರ್ಧಶತಕ

ಕಳೆದ ಮೂರು ವರ್ಷಗಳಿಂದ ರನ್‌ಗಳ ಬರ ಎದುರಿಸುತ್ತಿದ್ದ ಕೊಹ್ಲಿ, ಏಷ್ಯಾಕಪ್​ನಿಂದ ತಮ್ಮ ಹಳೆಯ ಪಾರ್ಮ್​ಗೆ ಮರಳಿದ್ದಾರೆ. ಈ ಪಂದ್ಯದಲ್ಲಿ ಸಿಡಿಸಿದ ಅರ್ಧಶತಕದೊಂದಿಗೆ ಈ ವಿಶ್ವಕಪ್‌ನಲ್ಲಿ ಕೊಹ್ಲಿ, ಇದುವರೆಗೆ ಮೂರು ಅರ್ಧಶತಕಗಳನ್ನು ಸಿಡಿಸಿದಂತ್ತಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ವಿರುದ್ಧ ವಿರಾಟ್ ಅರ್ಧಶತಕ ಬಾರಿಸಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದು, ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:04 pm, Thu, 3 November 22

ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ