PBKS vs RR, IPL 2025: ಸ್ಟೇಡಿಯಂನ ಹೊರಬಿದ್ದ ಶಶಾಂಕ್ ಸಿಂಗ್ ಸಿಡಿಸಿದ ಸಿಕ್ಸ್: ಮೂಕವಿಸ್ಮಿತರಾದ ಪ್ರೀತಿ ಝಿಂಟಾ

Shashank Singh six outside the stadium: ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್‌ನ ಶಶಾಂಕ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಅವರು ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮಯಾಂಕ್ ಯಾದವ್ ಎಸೆದ ಚೆಂಡನ್ನು ಕ್ರೀಡಾಂಗಣದಿಂದ ಹೊರಗೆ ಅಟ್ಟಿದರು. ಪಂಜಾಬ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನ 17ನೇ ಓವರ್ನಲ್ಲಿ ಇದು ನಡೆಯಿತು.

PBKS vs RR, IPL 2025: ಸ್ಟೇಡಿಯಂನ ಹೊರಬಿದ್ದ ಶಶಾಂಕ್ ಸಿಂಗ್ ಸಿಡಿಸಿದ ಸಿಕ್ಸ್: ಮೂಕವಿಸ್ಮಿತರಾದ ಪ್ರೀತಿ ಝಿಂಟಾ
Shashank Singh Six And Preity Zinta

Updated on: May 05, 2025 | 8:31 AM

ಬೆಂಗಳೂರು (ಮೇ. 05): ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದ ಮೈದಾನವು ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ. ಇಲ್ಲಿ ಟಿ20 ಪಂದ್ಯ ನಡೆಯಿತು ಎಂದರೆ ಅದರಲ್ಲಿ ಅನೇಕ ಸಿಕ್ಸರ್‌ಗಳು ಮತ್ತು ಬೌಂಡರಿಗಳು ಬರುತ್ತವೆ. 2025 ರ ಐಪಿಎಲ್‌ನಲ್ಲೂ ಇದೇ ರೀತಿ ನಾವು ಕಂಡಿದ್ದೇವೆ. ಇದು ಪಂಜಾಬ್ ಕಿಂಗ್ಸ್ ತಂಡದ ತವರು ಮೈದಾನವಾಗಿದೆ. ಭಾನುವಾರ ಧರ್ಮಶಾಲಾದಲ್ಲಿ ಪಂಜಾಬ್ ತಂಡದ ಮೊದಲ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ (Punjab Kings vs Lucknow Super Giants) ವಿರುದ್ಧ ನಡೆದಿತ್ತು. ಇದರಲ್ಲಿ ಪಂಜಾಬ್ ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ ಬಾರಿಸಿದ ಸಿಕ್ಸರ್ ಎಲ್ಲರನ್ನೂ ಅಚ್ಚರಿಗೊಳಿಸಿದವು.

ಕ್ರೀಡಾಂಗಣದಿಂದ ಹೊರಗೆ ಹೋಯಿತು ಶಶಾಂಕ್ ಸಿಕ್ಸ್:

ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್‌ನ ಶಶಾಂಕ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಅವರು ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮಯಾಂಕ್ ಯಾದವ್ ಎಸೆದ ಚೆಂಡನ್ನು ಕ್ರೀಡಾಂಗಣದಿಂದ ಹೊರಗೆ ಅಟ್ಟಿದರು. ಪಂಜಾಬ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನ 17ನೇ ಓವರ್ ಅನ್ನು ಮಯಾಂಕ್ ಬೌಲ್ ಮಾಡಿದರು. ಇವರು ನಾಲ್ಕನೇ ಎಸೆತವನ್ನು ಜೋರಾಗಿ ಬೌಲ್ ಮಾಡಿದರು. ಈ ಚೆಂಡು ಲೆಗ್ ಸ್ಟಂಪ್‌ನ ಹೊರಗಿತ್ತು. ಅದು ಶಶಾಂಕ್ ಸಿಂಗ್ ಗೆ ಫ್ರೀ ಹಿಟ್ ನಂತಿತ್ತು. ಶಶಾಂಕ್ ಬ್ಯಾಟ್​ಗೆ ಈ ಬಾಲ್ ಭರ್ಜರಿ ಟಚ್ ಕೊಟ್ಟಿತು. ಪರಿಣಾಮ ಬಾಲ್ ಕ್ರೀಡಾಂಗಣದಿಂದ ಹೊರಗೆ ಹೋಯಿತು.

ಇದನ್ನೂ ಓದಿ
ರಿಷಬ್ ಪಂತ್ ಪಡೆಗೆ 6ನೇ ಸೋಲು; ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ
ವೈಭವ್ ಸೂರ್ಯವಂಶಿ ಆಟವನ್ನು ಹೊಗಳಿದ ಪ್ರಧಾನಿ ಮೋದಿ
ಹೇಳಿದ್ದನ್ನು ಮಾಡಿ ತೋರಿಸಿದ ರಿಯಾನ್ ಪರಾಗ್
ರೋಚಕ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ

ಪ್ರೀತಿ ಜಿಂಟಾ ಅವರ ಪ್ರತಿಕ್ರಿಯೆ ವೈರಲ್:

ಪಂಜಾಬ್ ಕಿಂಗ್ಸ್ ತಂಡವನ್ನು ಬೆಂಬಲಿಸಲು ತಂಡದ ಸಹ-ಮಾಲೀಕಿ ಪ್ರೀತಿ ಝಿಂಟಾ ಕೂಡ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಶಶಾಂಕ್ ಸಿಂಗ್ ಅವರ ಸಿಕ್ಸ್ ನೋಡಿ ಇವರು ಕೂಡ ಆಶ್ಚರ್ಯಚಕಿತಳಾದರು. ಬಾಯು ತೆರೆದು ಶಶಾಂಕ್ ಸಿಕ್ಸ್ ಅನ್ನೇ ನೋಡುತ್ತಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ಶಶಾಂಕ್ ಪಂಜಾಬ್ ಪರ ಬ್ಯಾಟ್‌ನಿಂದ 15 ಎಸೆತಗಳಲ್ಲಿ 33 ರನ್‌ಗಳನ್ನು ಸಿಡಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 4 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಪಂಜಾಬ್ ಕಿಂಗ್ಸ್ ತಂಡವನ್ನು 236 ರನ್‌ಗಳಿಗೆ ಕೊಂಡೊಯ್ದಿದ್ದು ಇವರೇ.

 

ಮಾಯಾಂಕ್ ಯಾದವ್ ತುಂಬಾ ದುಬಾರಿ:

ಈ ದಿನ ಮಾಯಾಂಕ್ ಯಾದವ್‌ಗೆ ಉತ್ತಮ ಆಗಿರಲಿಲ್ಲ. ಅವರು ಒಟ್ಟು ಓವರ್​ನಲ್ಲಿ ಬರೋಬ್ಬರಿ 60 ರನ್‌ಗಳನ್ನು ಬಿಟ್ಟುಕೊಟ್ಟರು ಮತ್ತು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಜೋಶ್ ಇಂಗ್ಲಿಸ್ ತಮ್ಮ ಮೊದಲ ಓವರ್‌ನಲ್ಲಿಯೇ ಅವರ ವಿರುದ್ಧ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಇದಾದ ನಂತರ, ಪ್ರಭ್ಸಿಮ್ರಾನ್ ಸಿಂಗ್ ಎರಡನೇ ಓವರ್‌ನಲ್ಲಿ ಎರಡು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು.

IPL 2025: ಲಕ್ನೋ ಮಣಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಪಂಜಾಬ್

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 4 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು. ಪ್ರಭ್ಸಿಮ್ರನ್ ಸಿಂಗ್ 91 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರು 48 ಎಸೆತಗಳಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು. ಅತ್ತ ಟಾರ್ಗೆಟ್ ಬೆನ್ನಟ್ಟಿದ ಲಕ್ನೋ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಸೋಲು ಕಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ