AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಟಿಂಗ್ ಮಾತ್ರ ‘ರಕನಾಕ’ ಆಗಿತ್ತು: ಶ್ರೇಯಸ್ ಅಯ್ಯರ್

Zimbabwe vs India, 2nd T20I: ಝಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಹರಾರೆಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್​ಗಳಲ್ಲಿ 219 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಝಿಂಬಾಬ್ವೆ 17.5 ಓವರ್​ಗಳಲ್ಲಿ 129 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 90 ರನ್​ಗಳ ಅಮೋಘ ವಿಜಯ ಸಾಧಿಸಿದೆ.

ಬ್ಯಾಟಿಂಗ್ ಮಾತ್ರ 'ರಕನಾಕ' ಆಗಿತ್ತು: ಶ್ರೇಯಸ್ ಅಯ್ಯರ್
Shreyas IyerImage Credit source: Fancode
ಝಾಹಿರ್ ಯೂಸುಫ್
|

Updated on: Jul 26, 2026 | 7:30 AM

Share

ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಸರಣಿ ಗೆಲುವಿನ ಖಾತೆ ತೆರೆದಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಪರಾಜಯ ಅನುಭವಿಸಿದ್ದ ಅಯ್ಯರ್, ಝಿಂಬಾಬ್ವೆ ವಿರುದ್ಧ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವುಗಳೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದ್ದಾರೆ.

ಹರಾರೆಯಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 219 ರನ್​ಗಳು. ಈ ಕಠಿಣ ಗುರಿ ಬೆನ್ನತ್ತಿದ ಝಿಂಬಾಬ್ವೆ ತಂಡವು 17.5 ಓವರ್​ಗಳಲ್ಲಿ 129 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 90 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್,  ಇಂದಿನ ಪಂದ್ಯವನ್ನು ನಾವು ಗೆದ್ದ ರೀತಿಯಿಂದ ನನಗೆ ತುಂಬಾನೇ ಸಂತೋಷವಾಗಿದೆ. ಇದು ಅತ್ಯಂತ ಸುಸಜ್ಜಿತ ಮತ್ತು ಪರಿಪೂರ್ಣ ಗೆಲುವು. ತಂಡದ ಪ್ರತಿಯೊಬ್ಬ ಆಟಗಾರನೂ ಕೂಡ ಈ ಗೆಲುವಿಗೆ ಅದ್ಭುತ ಕೊಡುಗೆ ನೀಡಿದ್ದಾರೆ.

ನಮ್ಮ ಬ್ಯಾಟಿಂಗ್ ಪ್ರದರ್ಶನದಿಂದಲೇ ಆರಂಭಿಸುವುದಾದರೆ, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಆಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ಅವರು ಹೊಡೆದ ಕೆಲವು ಶಾಟ್‌ಗಳು ‘ರಕನಾಕ’ (ಝಿಂಬಾಬ್ವೆಯ ಸ್ಥಳೀಯ ಶೋನಾ ಭಾಷೆಯಲ್ಲಿ ‘ಅದ್ಭುತ’ ಎಂದರ್ಥ) ಆಗಿದ್ದವು. ಕಣ್ಣಿಗೆ ಅvರ ಆಟವು ಹಬ್ಬ ನೀಡಿದವು.

ಆರಂಭದಲ್ಲಿ ಈ ಪಿಚ್‌ನಲ್ಲಿ 180 ರಿಂದ 200 ರನ್ ಗಳಿಸಿದರೆ ಅದು ಉತ್ತಮ ಮೊತ್ತ ಅಂದುಕೊಂಡಿದ್ದೆ. ಆದರೆ ನಾವು 220 ರನ್ ಗಳಿಸಿದೆವು, ಇದು ನಮಗೆ ಸಿಕ್ಕ ಹೆಚ್ಚುವರಿ ಲಾಭ. ಅವರಿಬ್ಬರ ಕೊಡುಗೆ ಅಮೋಘವಾಗಿತ್ತು ಎಂದು ಶ್ರೇಯಸ್ ಅಯ್ಯರ್ ಇಬ್ಬರ ಎಡಗೈ ದಾಂಡಿಗರ ಆಟವನ್ನು ಕೊಂಡಾಡಿದ್ದಾರೆ.

ಬೌಲರ್‌ಗಳ ನಿಖರ ದಾಳಿ:

ನಮ್ಮ ಬೌಲರ್‌ಗಳು ಎಂದಿನಂತೆ ನಿಖರವಾದ ಲೈನ್ ಮತ್ತು ಲೆಂತ್‌ಗಳಲ್ಲಿ ಬೌಲಿಂಗ್ ಮಾಡಿದರು. ಅವರ ಯೋಜನೆಯನ್ನು ಸರಿಯಾಗಿ ಕಾರ್ಯಗತಗೊಳಿಸಿ ಝಿಂಬಾಬ್ವೆ ತಂಡವನ್ನು 130 ರನ್‌ಗಳ ಆಸುಪಾಸಿಗೆ ಆಲ್-ಔಟ್ ಮಾಡಿದರು. ಇಡೀ ಪಂದ್ಯದ ಕಥೆಯನ್ನು ಈ ಪ್ರದರ್ಶನವೇ ಹೇಳುತ್ತದೆ ಎಂದು ಶ್ರೇಯಸ್ ಅಯ್ಯರ್ ಬೌಲರ್​ಗಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುವ ತಂಡದ ನಿರ್ಭೀತ ಆಟ:

ಟಿ20 ಕ್ರಿಕೆಟ್ ಅನ್ನು ಇದೇ ರೀತಿಯ ಧನಾತ್ಮಕ ಮನೋಭಾವದಿಂದ ಆಡಬೇಕು. ಹಿಂದಿನ ಪಂದ್ಯಗಳ ಪ್ರದರ್ಶನಗಳ ಬಗ್ಗೆ ಅತಿಯಾಗಿ ಯೋಚಿಸದೆ, ಸದಾ ಮುನ್ನಡೆಯುವುದು ಮತ್ತು ಪ್ರಸ್ತುತ ಕ್ಷಣದಲ್ಲಿ ಬದುಕುವುದು ಮುಖ್ಯ. ಸಿಗುವ ಪ್ರತಿಯೊಂದು ಅವಕಾಶವನ್ನೂ ಗರಿಷ್ಠವಾಗಿ ಬಳಸಿಕೊಳ್ಳಬೇಕು. ನಾಳೆ ನಮಗೆ ಮತ್ತೊಂದು ಹೊಸ ಅವಕಾಶ ಸಿಗಲಿದ್ದು, ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಇದೇ ಅಯ್ಯರ್ ತಿಳಿಸಿದರು.

ಇನ್ನು ಅಂತಿಮ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್, ನಾವು ಇನ್ನೂ ಕೋಚ್ ಜೊತೆ ಚರ್ಚಿಸಿಲ್ಲ. ಆದರೆ, ದುರದೃಷ್ಟವಶಾತ್ ನಮ್ಮ ಆಟಗಾರ ಪ್ರಿನ್ಸ್ ಯಾದವ್ ಗಾಯಗೊಂಡಿದ್ದಾರೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ತಂಡದಲ್ಲಿ ಒಂದೆರಡು ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್​​ಗೆ ಟೀಮ್ ಇಂಡಿಯಾ ಹೀಗಿದೆ

ಒಟ್ಟಾರೆಯಾಗಿ ಹೇಳುವುದಾದರೆ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಮುಖಭಂಗ ಅನುಭವಿಸಿದ್ದ ಭಾರತ ತಂಡ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಈ ಝಿಂಬಾಬ್ವೆ ಸರಣಿಯ ಗೆಲುವು ಅತ್ಯಂತ ಸ್ಮರಣೀಯ ಹಾಗೂ ಮಹತ್ವದ್ದಾಗಿದೆ. ಯುವ ಆಟಗಾರರ ಸಾಂಘಿಕ ಪ್ರದರ್ಶನ, ಇಶಾನ್ ಮತ್ತು ತಿಲಕ್ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲರ್‌ಗಳ ನಿಖರ ದಾಳಿಯ ಬಲದಿಂದ ಭಾರತ ತಂಡ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ತಮ್ಮ ಟಿ20 ನಾಯಕತ್ವದ ವೃತ್ತಿಜೀವನದಲ್ಲಿ ಮೊದಲ ಸರಣಿ ಗೆಲುವಿನ ಸಿಹಿ ಸವಿದಿದ್ದಾರೆ.

Follow Us
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ
ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ