
ಬೆಂಗಳೂರು (ಜು. 03): ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ (Shubman Gill) ಇಂಗ್ಲೆಂಡ್ ವಿರುದ್ಧದ ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ದ್ವಿಶತಕ ಗಳಿಸಿದ್ದಾರೆ. ಅವರು 300 ಕ್ಕೂ ಹೆಚ್ಚು ಎಸೆತಗಳನ್ನು ಆಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು, ಗಿಲ್ ಹೆಡಿಂಗ್ಲಿಯಲ್ಲಿಯೂ ಅದ್ಭುತ ಶತಕ ಗಳಿಸಿದ್ದರು. ಆದರೆ ಈ ಬಾರಿ ಗಿಲ್ ತಮ್ಮ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದರು. ಇದಲ್ಲದೆ, ಈ ದ್ವಿಶತಕದ ಬಲದಿಂದ ಗಿಲ್ ಅನೇಕ ದಾಖಲೆಗಳನ್ನು ಮುರಿದಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು, ಶುಭ್ಮನ್ ಗಿಲ್ 114 ರನ್ ಗಳಿಸಿ ಅಜೇಯರಾಗಿ ಮರಳಿದರು. ಇದಾದ ನಂತರ, ಎರಡನೇ ದಿನವೂ ಅವರು ಉತ್ತಮವಾಗಿ ಬ್ಯಾಟಿಂಗ್ ಮುಂದುವರಿಸಿ ದ್ವಿಶತಕ ಚಚ್ಚಿದರು. ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಟೆಸ್ಟ್ ನಾಯಕನೊಬ್ಬ ಇಂಗ್ಲೆಂಡ್ ನೆಲದಲ್ಲಿ ದ್ವಿಶತಕ ಗಳಿಸಿದ್ದು ಇದೇ ಮೊದಲು. ಗಿಲ್ ಗಿಂತ ಮೊದಲು, ಯಾವುದೇ ಭಾರತೀಯ ಟೆಸ್ಟ್ ನಾಯಕ ಇಂಗ್ಲೆಂಡ್‌ನಲ್ಲಿ ದ್ವಿಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಅವರಿಗಿಂತ ಮೊದಲು, ಮೊಹಮ್ಮದ್ ಅಜರುದ್ದೀನ್ 1990 ರಲ್ಲಿ ಇಂಗ್ಲೆಂಡ್‌ನಲ್ಲಿ 179 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಈಗ ಗಿಲ್ ತಮ್ಮ ದಾಖಲೆಯನ್ನು ಮುರಿದು ಮುಂದೆ ಸಾಗಿದ್ದಾರೆ.
ಕೊಹ್ಲಿಯ ದಾಖಲೆ ಕೂಡ ಉಡೀಸ್
ಶುಭ್ಮನ್ ಗಿಲ್ ವಿದೇಶಿ ನೆಲದಲ್ಲಿ ಅತಿ ದೊಡ್ಡ ಟೆಸ್ಟ್ ಇನ್ನಿಂಗ್ಸ್ ಆಡಿದ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಿಲ್ ಗಿಂತ ಮೊದಲು, ಭಾರತೀಯ ನಾಯಕನಾಗಿ ವಿದೇಶದಲ್ಲಿ ಅತಿ ದೊಡ್ಡ ಟೆಸ್ಟ್ ಇನ್ನಿಂಗ್ಸ್ ಆಡಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 2016 ರಲ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದಾಗ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 200 ರನ್ ಗಳ ಇನ್ನಿಂಗ್ಸ್ ಆಡಿದ್ದರು.
IND vs ENG: ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ಶುಭ್ಮನ್ ಗಿಲ್
1979 ರಲ್ಲಿ ಓವಲ್‌ನಲ್ಲಿ ಸುನಿಲ್ ಗವಾಸ್ಕರ್ ಅವರ 221 ರನ್‌ಗಳನ್ನು ಹಿಂದಿಕ್ಕಿ ಶುಭ್ಮನ್ ಗಿಲ್ ಈಗ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ಈ ಸಾಧನೆ ಮಾಡಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗಿಂತ ಮೊದಲು ಸುನಿಲ್ ಗವಾಸ್ಕರ್ ಮತ್ತು ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು. ಅಲ್ಲದೆ, ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಏಷ್ಯನ್ ನಾಯಕ ಎಂಬ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದಾರೆ.
ದೊಡ್ಡ ಸ್ಕೋರ್ ಮೇಲೆ ಟೀಮ್ ಇಂಡಿಯಾ ಕಣ್ಣು
ಶುಭ್ಮನ್ ಗಿಲ್ ತ್ರಿಶಕ ಸಿಡಿಸುತ್ತಾರ ಎಂಬುದು ನೋಡಬೇಕಿದೆ. ರವೀಂದ್ರ ಜಡೇಜಾ ತಂಡಕ್ಕಾಗಿ 89 ರನ್ ಗಳಿಸಿದ್ದಾರೆ. ಯಶಸ್ವಿ ಜೈಸ್ವಾಲ್ 87 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ವಾಷಿಂಗ್ಟನ್ ಸುಂದರ್ 42 ರನ್ ಗಳಿಸಿದ್ದಾರೆ. ಈ ಆಟಗಾರರಿಂದಾಗಿ ಭಾರತ ತಂಡದ ಮೊತ್ತ 500ರ ಗಡಿ ದಾಟಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Thu, 3 July 25