Shubman Gill: ಕೊಹ್ಲಿ ಅದ್ಭುತ ದಾಖಲೆ ಪುಡಿಗಟ್ಟಿದ ಗಿಲ್: ಈ ಸಾಧನೆ ಮಾಡಿದ ಮೊದಲ ಭಾರತೀಯ
England vs India Second Test: ಶುಭ್ಮನ್ ಗಿಲ್ ಎರಡನೇ ದಿನದಾಟದಲ್ಲಿ 150 ರನ್ ಗಳಿಸಿದ್ದಾರೆ. ಇದರೊಂದಿಗೆ, ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಅತಿ ದೊಡ್ಡ ಟೆಸ್ಟ್ ಇನ್ನಿಂಗ್ಸ್ ಆಡಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮೊದಲು, ಕೊಹ್ಲಿ 2018 ರಲ್ಲಿ ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ 149 ರನ್ ಗಳಿಸಿದ್ದರು.

ಬೆಂಗಳೂರು (ಜು. 03): ಇಂಗ್ಲೆಂಡ್ ಪ್ರವಾಸದಲ್ಲಿ, ಭಾರತೀಯ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ (Shubman Gill) ಅದ್ಭುತ ಫಾರ್ಮ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಬ್ಯಾಟ್‌ನಿಂದ ಸಾಕಷ್ಟು ರನ್‌ಗಳು ಬರುತ್ತಿವೆ. ಇದೀಗ ಎರಡನೇ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದು ಇಂಗ್ಲೆಂಡ್ ಬೌಲರ್‌ಗಳ ಬೆಂಡೆತ್ತಿದ್ದಾರೆ. ಇವರ ಕಾರಣದಿಂದಾಗಿಯೇ ಭಾರತ ತಂಡವು ಮೊದಲ ದಿನದಂದು 300 ರನ್‌ಗಳ ಸ್ಕೋರ್ ಅನ್ನು ದಾಟಲು ಸಾಧ್ಯವಾಯಿತು. ಎರಡನೇ ದಿನವೂ ಗಿಲ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು, 150 ರನ್ ಗಳಿಸಿದ ನಂತರವೂ ಅವರು ಕ್ರೀಸ್‌ನಲ್ಲಿದ್ದಾರೆ. ಸದ್ಯ ದ್ವಿಶತಕದತ್ತ ದಾಪುಗಾಲಿಡುತ್ತಿದ್ದಾರೆ.
ವಿರಾಟ್ ಕೊಹ್ಲಿ ದಾಖಲೆ ಮುರಿದ ಗಿಲ್
ಶುಭ್ಮನ್ ಗಿಲ್ ಎರಡನೇ ದಿನದಾಟದಲ್ಲಿ 150 ರನ್ ಗಳಿಸಿದ್ದಾರೆ. ಇದರೊಂದಿಗೆ, ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಅತಿ ದೊಡ್ಡ ಟೆಸ್ಟ್ ಇನ್ನಿಂಗ್ಸ್ ಆಡಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮೊದಲು, ಕೊಹ್ಲಿ 2018 ರಲ್ಲಿ ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ 149 ರನ್ ಗಳಿಸಿದ್ದರು. ಗಿಲ್ ಈಗ ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ 150 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗಿಂತ ಮೊದಲು ಯಾವುದೇ ಭಾರತೀಯ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.
ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಸ್ಥಾನ
ಗಿಲ್ 2020 ರಲ್ಲಿ ಭಾರತೀಯ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು ಭಾರತೀಯ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಕೊಂಡಿಯಾಗಿದ್ದಾರೆ. ಅವರು ಟೀಮ್ ಇಂಡಿಯಾ ಪರ ಆರಂಭಿಕ ಮತ್ತು 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಪ್ರಸ್ತುತ, ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ಅವರು 4 ನೇ ಸ್ಥಾನದಲ್ಲಿ ಆಡುತ್ತಿದ್ದು, ಈ ಸ್ಥಾನದಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ್ದಾರೆ. ಇಲ್ಲಿಯವರೆಗೆ ಟೀಮ್ ಇಂಡಿಯಾ ಪರ 34 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 2163 ರನ್ ಗಳಿಸಿದ್ದಾರೆ, ಇದರಲ್ಲಿ 7 ಶತಕಗಳು ಮತ್ತು 7 ಅರ್ಧಶತಕಗಳು ಅವರ ಬ್ಯಾಟ್‌ನಿಂದ ಬಂದಿವೆ.
IND vs ENG: ಇನ್ನೊಂದು ಗೆಲುವು; ಆಂಗ್ಲರ ನೆಲದಲ್ಲಿ ಇತಿಹಾಸ ಸೃಷ್ಟಿಸಲಿದೆ ಟೀಂ ಇಂಡಿಯಾ
ಸತತ ಎರಡು ಟೆಸ್ಟ್ ಶತಕ
ಶುಭ್ಮನ್ ಗಿಲ್ ಹಿಂದಿನ ಪಂದ್ಯದಲ್ಲೂ 147 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಈಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಅವರು ಆಂಗ್ಲರಿಗೆ ಸವಾಲಾಗಿ ಪರಿಣಮಿಸಿದ್ದಾರೆ. ಟೆಸ್ಟ್ ನಾಯಕರಾದ ತಕ್ಷಣ, ಗಿಲ್ ಬ್ಯಾಟಿಂಗ್‌ಗೆ ಹೊಸ ಜೀವ ಬಂದಂತಾಗಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದಾದ ನಂತರ, ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಕೆಎಲ್ ರಾಹುಲ್ ಇಲ್ಲಿ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗದೆ ಕೇವಲ 2 ರನ್ ಗಳಿಸಿ ಔಟಾದಾಗ ಟೀಮ್ ಇಂಡಿಯಾ ಕೆಟ್ಟ ಆರಂಭ ಕಂಡಿತು. ಇದಾದ ನಂತರ, ಕರುಣ್ ನಾಯರ್ 31 ರನ್ ಗಳಿಸಿದರು. ನಂತರ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ರನ್ ಗಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಜೈಸ್ವಾಲ್ 87 ರನ್ ಗಳಿಸಿ ಔಟಾದರು ಮತ್ತು ಕೇವಲ 13 ರನ್ ಗಳಿಂದ ಶತಕ ವಂಚಿತರಾದರು. ಮತ್ತೊಂದೆಡೆ, ಗಿಲ್ ಆಕರ್ಷಕ ಶತಕ ಗಳಿಸಿ ತಂಡದ ಸ್ಕೋರ್ ಅನ್ನು 300 ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Thu, 3 July 25




