IND vs ZIM: ಶತಕದ ಏಕಾಂಗಿ ಹೋರಾಟ; ಸೋಲಿನಲ್ಲೂ ಅಭಿಮಾನಿಗಳ ಹೃದಯ ಗೆದ್ದ ಸಿಕಂದರ್ ರಾಜಾ

IND vs ZIM: ಅಬ್ಬರದ ಬ್ಯಾಟಿಂಗ್ ಮಾಡಿದ ಸಿಕಂದರ್ ರಾಜಾ ಒಟ್ಟು 115 ರನ್ ಗಳಿಸಿದರು. ಆದರೆ ರಾಜಾ ಔಟಾದ ಸ್ವಲ್ಪ ಸಮಯದ ನಂತರ ಇಡೀ ತಂಡ ಪೆವಿಲಿಯನ್ ಸೇರಿತು.

IND vs ZIM: ಶತಕದ ಏಕಾಂಗಿ ಹೋರಾಟ; ಸೋಲಿನಲ್ಲೂ ಅಭಿಮಾನಿಗಳ ಹೃದಯ ಗೆದ್ದ ಸಿಕಂದರ್ ರಾಜಾ
Updated By: ಪೃಥ್ವಿಶಂಕರ

Updated on: Aug 22, 2022 | 10:37 PM

ಭಾರತ ಮತ್ತು ಜಿಂಬಾಬ್ವೆ (India and Zimbabwe) ನಡುವಿನ ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಜಿಂಬಾಬ್ವೆಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದರೂ ಅಂತಿಮವಾಗಿ ಭಾರತ 13 ರನ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿತು. ಭಾರತ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ವೇಳೆ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದ್ದು, ಇದಕ್ಕೆ ಉತ್ತರವಾಗಿ ಜಿಂಬಾಬ್ವೆ ತಂಡ 276 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರವಾಗಿ ಶುಭ್​ಮನ್ ಗಿಲ್ (Shubman Gill) 130 ರನ್ ಗಳಿಸಿದರೆ, ಸಿಕಂದರ್ ರಾಜಾ ಕೂಡ ಶತಕ ಬಾರಿಸಿ ಕೊನೆಯವರೆಗೂ ಜಿಂಬಾಬ್ವೆ ತಂಡಕ್ಕೆ ಗೆಲುವು ನೀಡಲು ಹೋರಾಡಿದರು.

ಅಬ್ಬರದ ಬ್ಯಾಟಿಂಗ್ ಮಾಡಿದ ಸಿಕಂದರ್ ರಾಜಾ ಒಟ್ಟು 115 ರನ್ ಗಳಿಸಿದರು. ಆದರೆ ರಾಜಾ ಔಟಾದ ಸ್ವಲ್ಪ ಸಮಯದ ನಂತರ ಇಡೀ ತಂಡ ಪೆವಿಲಿಯನ್ ಸೇರಿತು. ಸಿಕಂದರ್ ರಾಜಾ ತಮ್ಮ ತಂಡಕ್ಕೆ ಗೆಲುವು ನೀಡಲು ಸಾಧ್ಯವಾಗದಿದ್ದರೂ, ಅವರ ಸ್ಫೋಟಕ ಇನ್ನಿಂಗ್ಸ್ ಖಂಡಿತವಾಗಿಯೂ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಗೆದ್ದಿತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ರಾಜಾ ಅವರ ಏಕಾಂಗಿ ಹೋರಾಟದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಸಿಕಂದರ್ ರಾಜಾ ಅವರ ಅದ್ಭುತ ಶತಕದ ಹೊರತಾಗಿಯೂ ಅವರ ತಂಡ ಸೋತಿದೆ ಎಂದು ಕೆಲವರು ಭಾವುಕರಾಗುತ್ತಿದ್ದರೆ, ಇನ್ನೂ ಕೆಲವರು ಜಿಂಬಾಬ್ವೆ ಈ ಬಾರಿ ಗೆಲ್ಲಬೇಕಾಗಿತ್ತು, ಈ ತಂಡ ಅದಕ್ಕೆ ಅರ್ಹವಾಗಿದೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ
IND vs ZIM: ಸಿಕಂದರ್ ರಾಜಾ ಶತಕದ ಹೋರಾಟ ವ್ಯರ್ಥ; ಸರಣಿ ಕ್ಲೀನ್​ ಸ್ವೀಪ್ ಮಾಡಿದ ಭಾರತ
IND vs ZIM: ಗಿಲ್ ವಿಕೆಟ್​ಗಾಗಿ ಡಿಆರ್​ಎಸ್ ತೆಗೆದುಕೊಂಡ ಬಿಂಬಾಬ್ವೆ; ಆದರೆ ಔಟಾಗಿದ್ದು ಮಾತ್ರ ಇಶಾನ್ ಕಿಶನ್!
IND vs ZIM: 20ನೇ ಪಂದ್ಯದಲ್ಲಿ ಶತಕದ ಖಾತೆ ತೆರೆದು ಸಚಿನ್ ದಾಖಲೆ ಮುರಿದ ಶುಭ್​ಮನ್ ಗಿಲ್..!