ICC Team: ಐಸಿಸಿ ಟಿ20 ತಂಡ ಪ್ರಕಟ: 6 ಭಾರತೀಯರಿಗೆ ಸ್ಥಾನ

ICC Team Of The Tournament: ಐಸಿಸಿಯು ಪ್ರತಿ ಟೂರ್ನಿಯ ಮುಕ್ತಾಯದ ಬೆನ್ನಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡ 12 ಸದಸ್ಯರ ತಂಡವನ್ನು ಪ್ರಕಟಿಸುತ್ತದೆ. ಈ ತಂಡ ಯಾವುದೇ ಪಂದ್ಯಗಳನ್ನಾಡುವುದಿಲ್ಲ. ಬದಲಾಗಿ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಗೌರವಯುತವಾಗಿ ಈ ಆಯ್ಕೆ ಮಾಡಲಾಗುತ್ತದೆ.

ICC Team: ಐಸಿಸಿ ಟಿ20 ತಂಡ ಪ್ರಕಟ: 6 ಭಾರತೀಯರಿಗೆ ಸ್ಥಾನ
ICC Team
Follow us
|

Updated on: Jul 01, 2024 | 7:27 AM

T20 World Cup 2024: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಐಸಿಸಿ ಟೂರ್ನಮೆಂಟ್‌ನ ತಂಡವನ್ನು ಪ್ರಕಟಿಸಿದೆ. ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡಿರುವ ಈ ತಂಡದಲ್ಲಿ 6 ಭಾರತೀಯರು ಕಾಣಿಸಿಕೊಂಡಿರುವುದು ವಿಶೇಷ. ಈ ತಂಡದ ಆರಂಭಿಕರಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಅಫ್ಘಾನಿಸ್ತಾನ್ ಓಪನರ್ ರಹಮಾನುಲ್ಲಾ ಗುರ್ಬಾಝ್ ಆಯ್ಕೆಯಾಗಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ಗುರ್ಬಾಝ್ 281 ರನ್ ಕಲೆಹಾಕಿದರೆ, ರೋಹಿತ್ ಶರ್ಮಾ 257 ರನ್​​ ಗಳಿಸಿದ್ದಾರೆ. ಹೀಗಾಗಿ ಅತ್ಯಧಿಕ ರನ್ ಕಲೆಹಾಕಿದ ಇಬ್ಬರನ್ನು ಆರಂಭಿಕರಾಗಿ ಆಯ್ಕೆ ಮಾಡಲಾಗಿದೆ. ಇನ್ನು ಮೂರನೇ ಕ್ರಮಾಂಕಕ್ಕೆ ಆಯ್ಕೆಯಾಗಿರುವುದು ವೆಸ್ಟ್ ಇಂಡೀಸ್​ನ ನಿಕೋಲಸ್ ಪೂರನ್. ವಿಂಡೀಸ್​ ಪರ ಈ ಬಾರಿ ಭರ್ಜರಿ ಪ್ರದರ್ಶನ ನೀಡಿದ್ದ ಪೂರನ್ ಒಟ್ಟು 228 ರನ್ ಬಾರಿಸಿದ್ದಾರೆ. ಹಾಗೆಯೇ 199 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದಾರೆ.

5ನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಆಲ್​ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಆಯ್ಕೆಯಾಗಿದ್ದಾರೆ. ಸ್ಟೋಯಿನಿಸ್ ಈ ಬಾರಿ 10 ವಿಕೆಟ್​ಗಳೊಂದಿಗೆ ಒಟ್ಟು 169 ರನ್ ಬಾರಿಸಿ ಮಿಂಚಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ಪರ 144 ರನ್​ ಹಾಗೂ 11 ವಿಕೆಟ್​ಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಸ್ಥಾನ ನೀಡಲಾಗಿದೆ. ಅದೇ ರೀತಿ ಸ್ಪಿನ್ ಆಲ್​ರೌಂಡರ್ ಆಗಿ ಟೀಮ್ ಇಂಡಿಯಾದ ಅಕ್ಷರ್ ಪಟೇಲ್​ಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Virat Kohli-Rohit Sharma: ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲು ಇದುವೇ ಕಾರಣ

ಇನ್ನು ಟಿ20 ವಿಶ್ವಕಪ್ 2024 ರಲ್ಲಿ 14 ವಿಕೆಟ್ ಕಿತ್ತು ಮಿಂಚಿರುವ ರಶೀದ್ ಖಾನ್ ಸ್ಪಿನ್ನರ್ ಆಗಿ ಆಯ್ಕೆಯಾದರೆ, 15 ವಿಕೆಟ್ ಕಬಳಿಸಿರುವ ಜಸ್​ಪ್ರೀತ್ ಬುಮ್ರಾ ಪ್ರಮುಖ ವೇಗಿಯಾಗಿ ತಂಡದಲ್ಲಿದ್ದಾರೆ. ಹಾಗೆಯೇ ತಲಾ 17 ವಿಕೆಟ್ ಉರುಳಿಸಿದ ಅರ್ಷದೀಪ್ ಸಿಂಗ್ ಮತ್ತು ಫಝಲ್​ಹಕ್ ಫಾರೂಖಿ ವೇಗಿಗಳಾಗಿ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ 12ನೇ ಆಟಗಾರರಾಗಿ ಸೌತ್ ಆಫ್ರಿಕಾ ವೇಗಿ ಅನ್ರಿಕ್ ನೋಕಿಯಾ ಕಾಣಿಸಿಕೊಂಡಿದ್ದಾರೆ.

ಐಸಿಸಿ ಪ್ರಕಟಿಸಿರುವ ಟಿ20 ವಿಶ್ವಕಪ್ ತಂಡ ಹೀಗಿದೆ:

  1. ರೋಹಿತ್ ಶರ್ಮಾ (ಭಾರತ)
  2. ರಹಮಾನುಲ್ಲಾ ಗುರ್ಬಾಝ್ (ಅಫ್ಘಾನಿಸ್ತಾನ್)
  3. ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್)
  4. ಸೂರ್ಯಕುಮಾರ್ ಯಾದವ್ (ಭಾರತ)
  5. ಮಾರ್ಕಸ್ ಸ್ಟೋಯಿನಿಸ್ (ಆಸ್ಟ್ರೇಲಿಯಾ)
  6. ಹಾರ್ದಿಕ್ ಪಾಂಡ್ಯ (ಭಾರತ)
  7. ಅಕ್ಷರ್ ಪಟೇಲ್ (ಭಾರತ)
  8. ರಶೀದ್ ಖಾನ್ (ಅಫ್ಘಾನಿಸ್ತಾನ್)
  9. ಜಸ್​ಪ್ರೀತ್ ಬುಮ್ರಾ (ಭಾರತ)
  10. ಅರ್ಷದೀಪ್ ಸಿಂಗ್ (ಭಾರತ)
  11. ಫಝಲ್​ಹಕ್ ಫಾರೂಖಿ (ಅಫ್ಘಾನಿಸ್ತಾನ್)
  12. ಅನ್ರಿಕ್ ನೋಕಿಯಾ (ಸೌತ್ ಆಫ್ರಿಕಾ)
ತಾಜಾ ಸುದ್ದಿ
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು