SL vs IND: 10 ಓವರ್, 28 ರನ್​ಗಳಿಗೆ 4 ವಿಕೆಟ್.. ಇಬ್ಬರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ..!

| Updated By: ಪೃಥ್ವಿಶಂಕರ

Updated on: Jul 04, 2022 | 3:53 PM

SL vs IND: ಶ್ರೀಲಂಕಾ ವಿರುದ್ಧ ರೇಣುಕಾ ಸಿಂಗ್ 10 ಓವರ್​ಗಳಲ್ಲಿ 28 ರನ್ ನೀಡಿ 4 ವಿಕೆಟ್ ಪಡೆದರು. ಇದು ಅವರ ODI ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಅವರು ಪಡೆದ 4 ವಿಕೆಟ್‌ಗಳಲ್ಲಿ 3 ವಿಕೆಟ್‌ಗಳು ಶ್ರೀಲಂಕಾದ ಅಗ್ರ ಕ್ರಮಾಂಕದವದ್ದಾಗಿವೆ.

SL vs IND: 10 ಓವರ್, 28 ರನ್​ಗಳಿಗೆ 4 ವಿಕೆಟ್.. ಇಬ್ಬರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ..!
ರೇಣುಕಾ ಸಿಂಗ್
Follow us on

ಶ್ರೀಲಂಕಾ ಪ್ರವಾಸದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಏಕದಿನ ಸರಣಿ ಗೆಲ್ಲುವತ್ತ ದಾಪುಗಾಲಿಡುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಭಾರತದ ಬಲಗೈ ವೇಗದ ಬೌಲರ್ ರೇಣುಕಾ ಸಿಂಗ್. ಮಾರಕ ದಾಳಿ ನಡೆಸಿದ ರೇಣುಕಾ ಮೊದಲು ಶ್ರೀಲಂಕಾ ಅಗ್ರ ಕ್ರಮಾಂಕವನ್ನು ಬೇಗನೇ ಪೆವಿಲಿಯನ್​ಗೆ ಸೇರಿಸಿದರು. ಇದರಿಂದ ಲಂಕಾ ತಂಡಕ್ಕೆ 200 ರನ್‌ಗಳಿಸಲು ಸಹ ಸಾಧ್ಯವಾಗಲಿಲ್ಲ. ಭಾರತದ ಮಾರಕ ದಾಳಿಗೆ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡ ಕೇವಲ 173 ರನ್‌ಗಳಿಗೆ ಕುಸಿದಿದೆ. ರೇಣುಕಾ ಸಿಂಗ್ ಸೇರಿದಂತೆ ಇತರ ಭಾರತೀಯ ಬೌಲರ್‌ಗಳು ಶ್ರೀಲಂಕಾ ಬ್ಯಾಟರ್​ಗಳಿಗೆ ವಿಕೆಟ್‌ನಲ್ಲಿ ನೆಲೆಗೊಳ್ಳಲು ಅವಕಾಶವನ್ನು ನೀಡಲಿಲ್ಲ. ಭಾರತದ ಅಬ್ಬರದ ಬೌಲಿಂಗ್ ಮುಂದೆ ಶ್ರೀಲಂಕಾ ಮಹಿಳಾ ತಂಡದ ಬ್ಯಾಟರ್​ಗಳು ಯಾರೂ ಕೂಡ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ.

ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ಭಾರತ ತಂಡ ಸದ್ಯ 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಏಕದಿನ ಪಂದ್ಯವನ್ನು ಗೆದ್ದ ನಂತರ, ಅವರು ಇದೀಗ ಎರಡನೇ ಏಕದಿನ ಪಂದ್ಯದಲ್ಲೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಗೆಲುವಿನ ಶ್ರೇಯ ಪ್ರಮುಖವಾಗಿ ತಂಡದ ಬೌಲರ್‌ಗಳಿಗೆ ಸಲ್ಲಬೇಕಾಗುತ್ತದೆ. ಟೀಂ ಇಂಡಿಯಾದ ಬೌಲರ್‌ಗಳಲ್ಲಿ ರೇಣುಕಾ ಸಿಂಗ್ ಅತ್ಯುತ್ತಮ ಬೌಲಿಂಗ್ ಮಾಡಿ, ತಮ್ಮ ODI ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು.

ರೇಣುಕಾ ಸಿಂಗ್ ಮ್ಯಾಜಿಕ್

ಇದನ್ನೂ ಓದಿ
MS Dhoni Wedding Anniversary: ಲಂಡನ್​ನಲ್ಲಿ ತಮ್ಮ 12ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಧೋನಿ- ಸಾಕ್ಷಿ
IND VS ENG: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ದ್ರಾವಿಡ್ ಬದಲಿಗೆ ಲಕ್ಷ್ಮಣ್​ಗೆ ಕೋಚ್ ಜವಾಬ್ದಾರಿ; ಕಾರಣವೇನು?

ಶ್ರೀಲಂಕಾ ವಿರುದ್ಧ ರೇಣುಕಾ ಸಿಂಗ್ 10 ಓವರ್​ಗಳಲ್ಲಿ 28 ರನ್ ನೀಡಿ 4 ವಿಕೆಟ್ ಪಡೆದರು. ಇದು ಅವರ ODI ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಅವರು ಪಡೆದ 4 ವಿಕೆಟ್‌ಗಳಲ್ಲಿ 3 ವಿಕೆಟ್‌ಗಳು ಶ್ರೀಲಂಕಾದ ಅಗ್ರ ಕ್ರಮಾಂಕದವದ್ದಾಗಿವೆ. ಶ್ರೀಲಂಕಾದ ಅಗ್ರ ಕ್ರಮಾಂಕದ 3 ಬ್ಯಾಟರ್​ಗಳ ವಿಕೆಟ್‌ಗಳನ್ನು ಕಿತ್ತುಹಾಕಿದವರ ಪೈಕಿ 2 ಮಂದಿ ಖಾತೆಯನ್ನು ತೆರೆಯಲಿಲ್ಲ, ಆದರೆ ಒಬ್ಬರು ಕೇವಲ 3 ರನ್ ಗಳಿಸಿದರು. ಆರಂಭದಲ್ಲಿ ರೇಣುಕಾ ಬೌಲಿಂಗ್ ಮಾಡಿದ ಪರಿಣಾಮ ಶ್ರೀಲಂಕಾದ 3 ವಿಕೆಟ್​ಗಳು ಕೇವಲ 11 ರನ್​ಗಳಿಗೆ ಪತನಗೊಂಡವು.

ಭಾರತದ ಪರ ರೇಣುಕಾ ಹೊರತಾಗಿ ಮೇಘನಾ ಸಿಂಗ್ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಕೂಡ 2 ವಿಕೆಟ್ ಪಡೆದರು. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ ಗೆಲ್ಲುವಲ್ಲಿ ದೀಪ್ತಿ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು.

ಭಾರತಕ್ಕೆ 174 ರನ್‌ಗಳ ಗುರಿ

ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಮಹಿಳಾ ತಂಡ 174 ರನ್‌ಗಳ ಗುರಿ ಪಡೆದಿದೆ. ಈ ಗುರಿ ಬೆನ್ನತ್ತಿದ ಭಾರತ ತಂಡ ಉತ್ತಮ ಆರಂಭ ಪಡೆದಿದ್ದು, ಈ ಮೂಲಕ ಗೆಲುವಿನತ್ತ ಸಾಗುತ್ತಿದೆ. ಇಂದಿನ ಪಂದ್ಯ ಗೆದ್ದರೆ ಭಾರತ ತಂಡ ಸರಣಿಯನ್ನೂ ವಶಪಡಿಸಿಕೊಳ್ಳಲಿದೆ. ನಂತರ ಮೂರನೇ ಏಕದಿನ ಪಂದ್ಯದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಲಭಿಸಲಿದೆ.

Published On - 3:53 pm, Mon, 4 July 22