
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಸಮಗ್ರತೆ ಮತ್ತು ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಬಿಸಿಸಿಐ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದಂತೆ ಇನ್ಮುಂದೆ ಐಪಿಎಲ್ ಆಟಗಾರರು ಹಾಗೂ ಸಿಬ್ಬಂದಿಗಳು ಕ್ರೀಡಾಂಗಣದ ಪ್ರದೇಶಗಳಲ್ಲಿ ಯಾವುದೇ ರೀತಿಯ ಸ್ಮಾರ್ಟ್ ಗ್ಲಾಸ್ ಬಳಸುವಂತಿಲ್ಲ. ಪ್ರಸ್ತುತ ಟೂರ್ನಿಯಿಂದಲೇ ಸ್ಮಾರ್ಟ್ ಗ್ಲಾಸ್ ಅಥವಾ ಹೈ-ಟೆಕ್ ಗ್ಲಾಸ್ ಧರಿಸದಂತೆ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಇನ್ಮುಂದೆ ಐಪಿಎಲ್ ವೇಳೆ ಸ್ಮಾರ್ಟ್ ಗ್ಲಾಸ್ ಧರಿಸಲು ಅವಕಾಶ ಇರುವುದಿಲ್ಲ.
ಈ ಎಲ್ಲಾ ಕಾರಣಗಳಿಂದಾಗಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಸ್ಮಾರ್ಟ್ ಗ್ಲಾಸ್ ಬಳಕೆಯನ್ನು ನಿಷೇಧಿಸಿದೆ.
ಈ ನಿಯಮವನ್ನು ಉಲ್ಲಂಘಿಸುವ ಆಟಗಾರರು ಅಥವಾ ಸಿಬ್ಬಂದಿಗೆ ಭಾರಿ ಮೊತ್ತದ ದಂಡ ಮತ್ತು ತಕ್ಷಣದ ಅಮಾನತು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. ಅಲ್ಲದೆ ಪ್ರಸ್ತುತ ನಡೆಯುತ್ತಿರುವ ಕ್ವಾಲಿಫೈಯರ್-2 ಹಾಗೂ ಫೈನಲ್ ಪಂದ್ಯಗಳ ವೇಳೆ ಸ್ಮಾರ್ಟ್ ಗ್ಲಾಸ್ ಹಾಗೂ ಹೈ-ಟೆಕ್ ಗ್ಲಾಸ್ಗಳನ್ನು ಬಳಸದಂತೆ ಸೂಚಿಸಲಾಗಿದೆ.
ಆರ್ಸಿಬಿ ಮತ್ತು ಆರ್ಆರ್ ನಡುವಣ ಪಂದ್ಯದ ವೇಳೆ ಡಗೌಟ್ನಲ್ಲಿ ಮೊಬೈಲ್ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪಂದ್ಯದ ವೇಳೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ.
ಹಾಗೆಯೇ ಪಂದ್ಯದ ವೇಳೆ ಫ್ರಾಂಚೈಸಿ ಮಾಲೀಕರು ಡಗೌಟ್ಗೆ ಪ್ರವೇಶಿಸುವುದನ್ನು, ಮ್ಯಾಚ್ ನಡುವೆ ಮೈದಾನಕ್ಕೆ ಎಂಟ್ರಿ ಕೊಡುವುದನ್ನು ಹಾಗೂ ಆಟಗಾರರನ್ನು ಮಾತನಾಡಿಸುವುದನ್ನು ಬಿಸಿಸಿಐ ನಿಷೇಧಿಸಿದೆ.
ಇದನ್ನೂ ಓದಿ: ವಿಶ್ವ ದಾಖಲೆ… ಪೊಲಾರ್ಡ್ಗೆ 652 ಇನಿಂಗ್ಸ್, ವೈಭವ್ಗೆ ಜಸ್ಟ್ 33 ಇನಿಂಗ್ಸ್!
ಇದರ ಜೊತೆಗೆ ಇದೀಗ ಭದ್ರತೆಯನ್ನು ಕಾಪಾಡಿಕೊಳ್ಳಲು ಹಾಗೂ ಐಪಿಎಲ್ನ ಪಾರದರ್ಶಕತೆಯನ್ನು ಹೆಚ್ಚಿಸಲು ಇಂಡಿಯನ್ ಪ್ರೀಮಿಯರ್ ಲೀಗ್ ಮಂಡಳಿ ಸ್ಮಾರ್ಟ್ ಗ್ಲಾಸ್ ಬಳಕೆಯನ್ನು ನಿಷೇಧಿಸಿದೆ.
Published On - 11:06 am, Fri, 29 May 26