
ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಹೊಸ ಯುಗ ಆರಂಭವಾಗಿದೆ. ಕಳೆದ 10 ವರ್ಷಗಳಿಂದ ಭಾರತ ವನಿತಾ ಪಡೆಯನ್ನು ಮುನ್ನಡೆಸಿಕೊಂಡು ಬಂದಿದ್ದ ಹರ್ಮನ್‌ಪ್ರೀತ್ ಕೌರ್ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಉಪನಾಯಕಿಯಾಗಿದ್ದ ಸ್ಮೃತಿ ಮಂಧಾನ ಆಯ್ಕೆಯಾಗಿದ್ದಾರೆ. ಈ ಬದಲಾವಣೆಯಾಗಿ ಕೆಲವೇ ಗಂಟೆಗಳು ಕಳೆದಿವೆ. ಅದಾಗಲೇ ಇವರಿಬ್ಬರ ನಡುವೆ ಏನೂ ಸರಿ ಇಲ್ಲ. ಇಬ್ಬರ ನಡುವೆ ಮನಸ್ತಾಪವಿದೆ. ಒಬ್ಬರಿಗೊಬ್ಬರು ಮುಖ ಕೂಡ ನೋಡುತ್ತಿಲ್ಲ ಎಂಬ ವಂದಿಗಳು ಹಬ್ಬಿದ್ದವು. ಆದರೀಗ ಈ ವದಂತಿಗಳಿಗೆ ತಿರುಗೇಟು ನೀಡುವ ಕೆಲಸವನ್ನು ನೂತನ ನಾಯಕಿ ಸ್ಮೃತಿ ಮಂಧಾನ ಮಾಡಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಅವರ ದಶಕದ ನಾಯಕತ್ವ ಅತ್ಯುತ್ತಮವಾಗಿಯತ್ತು ಎಂದು ಸ್ಮೃತಿ ಬಣ್ಣಿಸಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಸ್ಮೃತಿ, ‘ಇಷ್ಟು ವರ್ಷಗಳಿಂದ ನಿಮ್ಮೊಂದಿಗೆ ಆಡುವುದು ಸಂತೋಷವಾಗಿದೆ. ನಿಮ್ಮ 10 ವರ್ಷಗಳ ನಾಯಕತ್ವ ಅದ್ಭುತವಾಗಿದೆ. ಒಟ್ಟಾಗಿ, ನಮ್ಮ ದೇಶಕ್ಕಾಗಿ ಇನ್ನೂ ಅನೇಕ ಸಾಧನೆಗಳನ್ನು ಸಾಧಿಸಲು ನಾವು ಶ್ರಮಿಸುತ್ತೇವೆ’ ಎಂದಿದ್ದಾರೆ.

Smriti
ಮೇಲೆ ಹೇಳಿದಂತೆ ಹರ್ಮನ್‌ಪ್ರೀತ್ ಸುಮಾರು 10 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದರು. ಅವರ ನಾಯಕತ್ವದಲ್ಲಿ, ಭಾರತ ನವೆಂಬರ್ 2025 ರಲ್ಲಿ ತನ್ನ ಮೊದಲ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹಾಗೆಯೇ 2023 ಮತ್ತು 2026 ರಲ್ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದಿತು. ನಾಯಕತ್ವದಿಂದ ಬಿಡುಗಡೆಗೊಂಡರೂ ಹರ್ಮನ್‌ಪ್ರೀತ್ ಅವರನ್ನು ಭಾರತೀಯ ತಂಡದ ಭಾಗವಾಗಿಯೇ ಉಳಿದುಕೊಂಡಿದ್ದು, ಮುಂಬರುವ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಹಳೆಯ ಫಾರ್ಮ್ ಮರಳಿ ಪಡೆಯುವ ಇರಾದೆಯಲ್ಲಿದ್ದಾರೆ.
ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಚಾ ಘೋಷ್, ಹರ್ಮನ್‌ಪ್ರೀತ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದು, ‘ನಾಯಕತ್ವದ ಅಧ್ಯಾಯ ಕೊನೆಗೊಳ್ಳುತ್ತಿದ್ದರೂ, ನಾಯಕಿಯ ಪ್ರಭಾವ ಎಂದಿಗೂ ಕೊನೆಗೊಳ್ಳುವುದಿಲ್ಲ. ಹರ್ಮನ್‌ಪ್ರೀತ್ ಭಾರತೀಯ ಕ್ರಿಕೆಟ್ ಮತ್ತು ತಂಡದ ಆಟಗಾರ್ತಿಯರಿಗಾಗಿ ಬಹಳಷ್ಟು ಮಾಡಿದ್ದಾರೆ. ಹರ್ಮನ್‌ಪ್ರೀತ್ ಅವರ ನಂಬಿಕೆ, ಮಾರ್ಗದರ್ಶನ, ಹೋರಾಟಗಳು ಮತ್ತು ಅವರು ಒಟ್ಟಿಗೆ ಕಳೆದ ಕ್ಷಣಗಳಿಗೆ ನಾನು ಕೃತಜ್ಞತೆ ವ್ಯಕ್ತಪಡಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನಾಯಕಿಯಾಗಿ ಹರ್ಮನ್‌ಪ್ರೀತ್ ಯುಗಾಂತ್ಯ; ಸ್ಮೃತಿ ಮಂಧಾನಗೆ ನಾಯಕತ್ವ?
ಭಾರತದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಕೂಡ ಹರ್ಮನ್‌ಪ್ರೀತ್ ಅವರ ನಾಯಕತ್ವದ ಅವಧಿಯನ್ನು ಶ್ಲಾಘಿಸಿದ್ದು, ‘ಇದು ಧೈರ್ಯ, ವ್ಯಕ್ತಿತ್ವ ಮತ್ತು ಲೆಕ್ಕವಿಲ್ಲದಷ್ಟು ಸ್ಮರಣೀಯ ಕ್ಷಣಗಳಿಂದ ತುಂಬಿದ ಅದ್ಭುತ ಪ್ರಯಾಣವಾಗಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Published On - 10:05 pm, Wed, 7 October 26