AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇವರಲ್ಲಿ ಪ್ರಾರ್ಥಿಸುತ್ತಿದ್ದೆ’.. ಮದುವೆ ಮುಂದೂಡಿದ ಬಳಿಕ ಮೊದಲ ಬಾರಿಗೆ ಸ್ಮೃತಿ ಮಂಧಾನ ಮಾತು; ವಿಡಿಯೋ ವೈರಲ್

Smriti Mandhana: ಸ್ಮೃತಿ ಮಂಧಾನ ಅವರ ಮದುವೆ ತಂದೆಯ ಅನಾರೋಗ್ಯದಿಂದ ಮುಂದೂಡಲ್ಪಟ್ಟ ನಂತರ ಹಲವು ವದಂತಿಗಳು ಹರಡಿವೆ. ಇದರ ಮಧ್ಯೆ, 12 ದಿನಗಳ ನಂತರ ಸ್ಮೃತಿ ಇನ್‌ಸ್ಟಾಗ್ರಾಮ್‌ನಲ್ಲಿ ಬ್ರ್ಯಾಂಡ್ ಪ್ರಚಾರದ ವೀಡಿಯೊ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಸಮಾಧಾನ ತಂದರೂ, ಮದುವೆ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ವಿಶ್ವಕಪ್ ಅನುಭವಗಳ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ್ದಾರೆ. ಮದುವೆ ಕುರಿತು ಕುಟುಂಬದಿಂದ ಯಾವುದೇ ಮಾಹಿತಿ ಇಲ್ಲ.

‘ದೇವರಲ್ಲಿ ಪ್ರಾರ್ಥಿಸುತ್ತಿದ್ದೆ’.. ಮದುವೆ ಮುಂದೂಡಿದ ಬಳಿಕ ಮೊದಲ ಬಾರಿಗೆ ಸ್ಮೃತಿ ಮಂಧಾನ ಮಾತು; ವಿಡಿಯೋ ವೈರಲ್
Smriti Mandhana
ಪೃಥ್ವಿಶಂಕರ
|

Updated on:Dec 05, 2025 | 7:45 PM

Share

ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರ ಮದುವೆ ಮುಂದೂಡಲ್ಪಟ್ಟಾಗಿನಿಂದ ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ತಂದೆಯ ಅನಾರೋಗ್ಯದ ಕಾರಣದಿಂದಾಗಿ ಅವರ ಮದುವೆ ತಾತ್ಕಾಲಿಕವಾಗಿ ರದ್ದಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯದ್ದೇ ಕಥೆ ಹೇಳಲಾಗುತ್ತಿದೆ. ಆದಾಗ್ಯೂ ಆ ವದಂತಿಗಳಿಗೆ ಇಬ್ಬರ ಕಡೆಯಿಂದಲೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದನ್ನೇ ಲಾಭ ಮಾಡಿಕೊಂಡಿರುವ ಕೆಲವರು ದಿನಕ್ಕೊಂದು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇದೆಲ್ಲದರ ನಡುವೆ ಸುಮಾರು 12 ದಿನಗಳ ನಂತರ ಸ್ಮೃತಿ ಮಂಧಾನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ. ಆದಾಗ್ಯೂ ಈ ಪೋಸ್ಟ್‌ನಲ್ಲಿ ಮಂಧಾನ ತಮ್ಮ ಮದುವೆಯ ಬಗ್ಗೆ ಯಾವುದೇ ನವೀಕರಣಗಳನ್ನು ನೀಡಿಲ್ಲ. ಆದರೆ ಈ ವೀಡಿಯೊದಲ್ಲಿ, ಅವರು ವಿಶ್ವಕಪ್ ಫೈನಲ್ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಸ್ಮೃತಿ ಮಂಧಾನ ಮೊದಲ ಪೋಸ್ಟ್

ಸ್ಮೃತಿ ಮಂಧಾನ ಡಿಸೆಂಬರ್ 5 ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಲ್ಲ. ಬದಲಿಗೆ ಇದು ಬ್ರ್ಯಾಂಡ್ ಅನುಮೋದನೆಗಳಿಗಾಗಿ ಪ್ರಾಯೋಜಿತ ವೀಡಿಯೊವಾಗಿದೆ. ಅದರಲ್ಲಿ, ಅವರು 2025 ರ ವಿಶ್ವಕಪ್ ಗೆದ್ದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸಿಕೊಂಡಿರುವ ಮಂಧಾನ, ‘ತಂಡದ ಅಗತ್ಯಗಳಿಗೆ ಅನುಗುಣವಾಗಿ ಆಡುತ್ತಿದ್ದರಿಂದ ಬ್ಯಾಟಿಂಗ್ ಮಾಡುವಾಗ ಹೆಚ್ಚು ಯೋಚಿಸುತ್ತಿರಲಿಲ್ಲ. ಆದರೆ, ಫೀಲ್ಡಿಂಗ್ ಮಾಡುವಾಗ, ನಾನು ಎಲ್ಲಾ ದೇವರುಗಳನ್ನು ನೆನಪಿಸಿಕೊಳ್ಳುತ್ತಿದೆ. ಪ್ರತಿ ಎಸೆಗಳಲ್ಲೂ ವಿಕೆಟ್ ಬೀಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ’ ಎಂದಿದ್ದಾರೆ.

ವಿವಾಹದ ಬಗ್ಗೆ ಯಾವುದೇ ಸುದ್ದಿ ಇಲ್ಲ

ಸ್ಮೃತಿ ಮತ್ತು ಪಲಾಶ್ ಮುಚ್ಚಲ್ ಕಳೆದ ತಿಂಗಳು ನವೆಂಬರ್ 23 ರಂದು ವಿವಾಹವಾಗಬೇಕಿತ್ತು. ಸಾಂಗ್ಲಿಯಲ್ಲಿರುವ ಮಂಧಾನ ಅವರ ಮನೆಯಲ್ಲಿ ವಿವಾಹ ನಡೆಯಬೇಕಿತ್ತು, ಆದರೆ ಆ ದಿನ ಇದ್ದಕ್ಕಿದ್ದಂತೆ ಮದುವೆಯನ್ನು ಮುಂದೂಡಲಾಯಿತು. ಮಂಧಾನ ಕುಟುಂಬ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಮೃತಿ ಅವರ ತಂದೆಯ ಆರೋಗ್ಯ ಹದಗೆಟ್ಟಿದೆ ಎಂದು ಉಲ್ಲೇಖಿಸಲಾಗಿತ್ತು. ನಂತರ ಅವರನ್ನು ಮೂರು ದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ಪಲಾಶ್ ಮುಚ್ಚಲ್ ಅವರ ಆರೋಗ್ಯ ಹದಗೆಟ್ಟ ಕಾರಣ ಕೆಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದಾಗ್ಯೂ, ಅಂದಿನಿಂದ ವಿವಾಹದ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:40 pm, Fri, 5 December 25