ದೇಸಿ ಕ್ರಿಕೆಟ್‌ನಲ್ಲಿ ಮತ್ತೆ ತಲೆ ಎತ್ತಿದ ಫಿಕ್ಸಿಂಗ್ ಭೂತ: ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳಲು ಆಟಗಾರ ಸತೀಶ್ ರಾಜಗೋಪಾಲ್‌ಗೆ 40 ಲಕ್ಷ ರೂಪಾಯಿ ಆಫರ್

| Updated By: ಆಯೇಷಾ ಬಾನು

Updated on: Jan 16, 2022 | 12:10 PM

IPLನಲ್ಲಿ ಮುಂಬೈ, ಪಂಜಾಬ್, ಕೋಲ್ಕತ್ತಾ ಪರ ಆಡಿದ್ದ ತಮಿಳುನಾಡು ರಣಜಿ ತಂಡದ ಸದಸ್ಯನಾಗಿರುವ ಸತೀಶ್, ಮುಂಬರುವ TNPLನಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ ಬನ್ನಿ ಆನಂದ್ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಆಫರ್ ನೀಡಿದ್ದಾನೆ.

ದೇಸಿ ಕ್ರಿಕೆಟ್‌ನಲ್ಲಿ ಮತ್ತೆ ತಲೆ ಎತ್ತಿದ ಫಿಕ್ಸಿಂಗ್ ಭೂತ: ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳಲು ಆಟಗಾರ ಸತೀಶ್ ರಾಜಗೋಪಾಲ್‌ಗೆ 40 ಲಕ್ಷ ರೂಪಾಯಿ ಆಫರ್
ಆಟಗಾರ ಸತೀಶ್ ರಾಜಗೋಪಾಲ್‌
Follow us on

ಬೆಂಗಳೂರು: ದೇಸಿ ಕ್ರಿಕೆಟ್‌ನಲ್ಲಿ ಮತ್ತೆ ಫಿಕ್ಸಿಂಗ್ ಭೂತ ತಲೆ ಎತ್ತಿದೆ. ದೇಶೀಯ ಕ್ರಿಕೆಟ್ ಋತು ಆರಂಭಕ್ಕೂ ಮುನ್ನ ಆಟಗಾರರ ಮೇಲೆ ಬುಕ್ಕಿಗಳ ಕಣ್ಣು ಬಿದ್ದಿದೆ. ಬನ್ನಿ ಆನಂದ್ ಎಂಬಾತ ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳಲು ತಮಿಳುನಾಡಿನ ಆಲ್‌ರೌಂಡರ್‌ ಆಟಗಾರನಿಗೆ 40 ಲಕ್ಷ ರೂಪಾಯಿ ಆಫರ್ ನೀಡಿರುವ ಮಾಹಿತಿ ಸಿಕ್ಕಿದೆ. ಬೆಂಗಳೂರಿನಲ್ಲಿ‌ ಕುಳಿತು ತಮಿಳುನಾಡು ಆಟಗಾರನಿಗೆ ಗಾಳ ಹಾಕುವ ಯತ್ನ ನಡೆದಿದೆ.

ಬನ್ನಿ ಆನಂದ್ ಎಂಬಾತ ತಮಿಳುನಾಡಿನ ಆಲ್‌ರೌಂಡರ್‌ ಆಟಗಾರ ಸತೀಶ್ ರಾಜಗೋಪಾಲ್‌ಗೆ ಫಿಕ್ಸಿಂಗ್ ಮಾಡಿಕೊಳ್ಳಲು ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದ್ದಾನೆ. IPLನಲ್ಲಿ ಮುಂಬೈ, ಪಂಜಾಬ್, ಕೋಲ್ಕತ್ತಾ ಪರ ಆಡಿದ್ದ ತಮಿಳುನಾಡು ರಣಜಿ ತಂಡದ ಸದಸ್ಯನಾಗಿರುವ ಸತೀಶ್, ಮುಂಬರುವ TNPLನಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ ಬನ್ನಿ ಆನಂದ್ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಆಫರ್ ನೀಡಿದ್ದಾನೆ.

ಮುಂಬರುವ TNPL ನಲ್ಲಿ ಫಿಕ್ಸಿಂಗ್ ನಲ್ಲಿ‌ ಭಾಗಿಯಾಗಬೇಕು. ಈಗಾಗಲೇ ಇಬ್ಬರು ಆಟಗಾರರು ಫಿಕ್ಸಿಂಗ್‌ಗೆ ಒಪ್ಪಿದ್ದಾರೆ. ನೀವು ಭಾಗಿಯಾದ್ರೆ ಪ್ರತಿ ಪಂದ್ಯಕ್ಕೆ ₹40 ಲಕ್ಷ ಆಫರ್ ಕೊಡ್ತೀವಿ ಎಂದು ಮೆಸೇಜ್ ಮಾಡಿದ್ದಾರೆ. ಆಟಗಾರ ಸತೀಶ್ ಆಫರ್ ತಿರಸ್ಕರಿಸಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಸತೀಶ್ ಮಾಹಿತಿ ಆಧರಿಸಿ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ಇದನ್ನೂ ಓದಿ: Udupi Paryaya 2022: ಉಡುಪಿ ಪರ್ಯಾಯ ಎಂದರೇನು? ಪರ್ಯಾಯ ಉತ್ಸವದ ಇತಿಹಾಸ, ಮಹತ್ವ ಏನು?