SRH vs KKR Highlights IPL 2023: ಮತ್ತೆ ಎಡವಿದ ಹೈದರಾಬಾದ್; ಕೆಕೆಆರ್​ಗೆ 5 ರನ್ ಜಯ

|

Updated on: May 04, 2023 | 11:28 PM

Sunrisers Hyderabad vs Kolkata Knight Riders IPL 2023 Live Score in Kannada: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ರನ್​ಗಳಿಂದ ಸೋತ ಸನ್ ರೈಸರ್ಸ್ ಹೈದರಾಬಾದ್ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

SRH vs KKR Highlights IPL 2023: ಮತ್ತೆ ಎಡವಿದ ಹೈದರಾಬಾದ್; ಕೆಕೆಆರ್​ಗೆ 5 ರನ್ ಜಯ
ಹೈದರಾಬದ್- ಕೋಲ್ಕತ್ತಾ ಮುಖಾಮುಖಿ

ಐಪಿಎಲ್ 2023ರ 47ನೇ ಪಂದ್ಯದಲ್ಲಿ ಹೈದರಾಬಾದ್‌ ತಂಡ ಮತ್ತೊಮ್ಮೆ ಎಡವಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ರನ್​ಗಳಿಂದ ಸೋತ ಸನ್ ರೈಸರ್ಸ್ ಹೈದರಾಬಾದ್ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಕೋಲ್ಕತ್ತಾ ತಂಡದ ನಾಯಕ ನಿತೀಶ್ ರಾಣಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಕೋಲ್ಕತ್ತಾ ನಿಗದಿತ ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಹೈದರಾಬಾದ್​ನ ಆರಂಭ ವಿಶೇಷವೇನಲ್ಲ. ಆದಾಗ್ಯೂ, ಕ್ಲಾಸೆನ್ ಮತ್ತು ಮಾರ್ಕ್ರಾಮ್ ಉತ್ತಮ ಜೊತೆಯಾಟ ಆಡಿದರು. ಆದರೆ ಈ ಇಬ್ಬರ ನಂತರ ಮತ್ತ್ಯಾರು ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಹೀಗಾಗಿ ತಂಡ 5 ರನ್​ಗಳ ಸೋಲು ಕಂಡಿತು.

LIVE NEWS & UPDATES

The liveblog has ended.
  • 04 May 2023 11:24 PM (IST)

    5 ರನ್ ಜಯ

    ಅಂತಿಮ ಓವರ್​ನಲ್ಲಿ 9 ರನ್ ಟಾರ್ಗೆಟ್ ಪಡೆದಿದ್ದ ಹೈದರಾಬಾದ್ ಕೇವಲ 4 ರನ್ ಮಾತ್ರ ಗಳಿಸಿತು. ಇದರೊಂದಿಗೆ 5 ರನ್​​ಗಳ ಹೀನಾಯ ಸೋಲು ಕಂಡಿತು.

  • 04 May 2023 11:23 PM (IST)

    ಅಬ್ದುಲ್ ಸಮದ್ ಔಟ್

    20ನೇ ಓವರ್‌ನ ಮೂರನೇ ಎಸೆತದಲ್ಲಿ ಅಬ್ದುಲ್ ಸಮದ್ ಔಟಾದರು. ವರುಣ್ ಚಕ್ರವರ್ತಿ ಎಸೆತದಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ಅನುಕುಲ್ ರಾಯ್ಗೆ ಕ್ಯಾಚ್ ನೀಡಿದರು.


  • 04 May 2023 11:12 PM (IST)

    6 ಎಸೆತದಲ್ಲಿ 9 ರನ್ ಬೇಕು

    19ನೇ ಓವರ್​​ನಲ್ಲಿ 11 ರನ್ ಬಂತು. ಈ ಓವರ್​​ನಲ್ಲಿ ಭುವಿ 1 ಬೌಂಡರಿ ಹೊಡೆದರೆ ಸಮದ್ ಕೂಡ ಬೌಂಡರಿ ಬಾರಿಸಿದರು. ಕೊನೆಯ ಓವರ್​ನಲ್ಲಿ 9 ರನ್ ಬೇಕು

  • 04 May 2023 11:06 PM (IST)

    ಯಾನ್ಸೆನ್ ಔಟ್

    19ನೇ ಓವರ್​​ನ ಮೊದಲ ಎಸೆತದಲ್ಲಿ ಯಾನ್ಸೆನ್ ಕೀಪರ್​ ಕೈಗೆ ಕ್ಯಾಚಿತ್ತು ಔಟಾದರು.

  • 04 May 2023 11:03 PM (IST)

    150 ರನ್ ಪೂರ್ಣ

    ವರುಣ್ ಬೌಲ್ ಮಾಡಿದ 18ನೇ ಓವರ್​​ನಲ್ಲಿ ಡಬಲ್ ತೆಗೆದ ಸಮದ್ ಹೈದರಾಬಾದ್ ಮೊತ್ತವನ್ನು 150ರ ಗಡಿ ದಾಟಿಸಿದರು.

  • 04 May 2023 10:56 PM (IST)

    ಅರೋರಾಗೆ ವಿಕೆಟ್

    16ನೇ ಓವರ್​​ನ ಮೊದಲ ಎಸೆತದಲ್ಲಿ ಬೌಂಡರಿ ತಿಂದ ಅರೋರಾ, ಅದೇ ಓವರ್​​ನ 5ನೇ ಎಸೆತದಲ್ಲಿ ಎದುರಾಳಿ ನಾಯಕ ಮಾರ್ಕ್ರಾಮ್ ವಿಕೆಟ್ ಉರುಳಿಸಿದರು.

  • 04 May 2023 10:48 PM (IST)

    ಸಮದ್ ಬೌಂಡರಿ

    ಶಾರ್ದೂಲ್ ಬೌಲ್ ಮಾಡಿದ 15ನೇ ಓವರ್​​ನಲ್ಲಿ 2 ಬೌಂಡರಿ ಬಂದವು. ಮೊದಲ ಬೌಂಡರಿಯನ್ನು ಮಕ್ರಾಮ್ ಹೊಡೆದರೆ, 2ನೇ ಬೌಂಡರಿಯನ್ನು ಸಮದ್ ಬಾರಿಸಿದರು.

  • 04 May 2023 10:47 PM (IST)

    ಹೆನ್ರಿಕ್ ಕ್ಲಾಸೆನ್ ಔಟ್

    ಹೆನ್ರಿಕ್ ಕ್ಲಾಸೆನ್ ಔಟಾಗಿದ್ದಾರೆ. ಅವರು 15ನೇ ಓವರ್‌ನ ಮೊದಲ ಎಸೆತದಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ರಸೆಲ್ ಅವರ ಕೈಗೆ ಕ್ಯಾಚ್ ನೀಡಿದರು.

    ಹೆನ್ರಿಕ್ 36 ರನ್, 20 ಎಸೆತಗಳಲ್ಲಿ 1×4 3×6

  • 04 May 2023 10:32 PM (IST)

    ಹೈದರಾಬಾದ್ ಶತಕ ಪೂರ್ಣ

    12ನೇ ಓವರ್​​ನಲ್ಲಿ 2 ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಮಾರ್ಕ್ರಾಮ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ್ದಾರೆ.

  • 04 May 2023 10:28 PM (IST)

    ಕ್ಲಾಸೆನ್ ಸಿಕ್ಸ್

    ಹೈದರಾಬಾದ್ ಇನ್ನಿಂಗ್ಸ್​ಗೆ ಕ್ಲಾಸೆನ್ ಜೀವ ತುಂಬುತ್ತಿದ್ದಾರೆ. ಅನ್ಕುಲ್ ಬೌಲ್ ಮಾಡಿದ 11ನೇ ಓವರ್​​ನಲ್ಲಿ ಕ್ಲಾಸೆನ್ 2 ಸಿಕ್ಸರ್ ಹೊಡೆದರು.

  • 04 May 2023 10:24 PM (IST)

    10 ಓವರ್ ಅಂತ್ಯ

    ಹೈದರಾಬಾದ್ ಇನ್ನಿಂಗ್ಸ್​​ನ 10 ಓವರ್ ಮುಗಿದಿದ್ದು, ತಂಡ 4 ವಿಕೆಟ್ ಕಳೆದುಕೊಂಡು 75 ರನ್ ಬಾರಿಸಿದೆ.

  • 04 May 2023 10:13 PM (IST)

    8ನೇ ಓವರ್ ಅಂತ್ಯ

    ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಿರುವ ಹೈದರಾಬಾದ್ ಇನ್ನಿಂಗ್ಸ್ ತತ್ತರಿಸಿದೆ. ಇನ್ನಿಂಗ್ಸ್​​ನ 8ನೇ ಓವರ್​ ಮುಗಿದಿದ್ದು, ತಂಡ 66 ರನ್​ಗಳಿಗೆ 4 ವಿಕಟ್ ಕಳೆದುಕೊಂಡಿದೆ.

  • 04 May 2023 10:12 PM (IST)

    ಶೂನ್ಯಕ್ಕೆ ಬ್ರೂಕ್ ಔಟ್

    ಸತತ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಹ್ಯಾರಿ ಬ್ರೂಕ್ ಮತ್ತೊಮ್ಮೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

  • 04 May 2023 10:04 PM (IST)

    ತ್ರಿಪಾಠಿ ಔಟ್

    ಹೈದರಾಬಾದ್ 3ನೇ ವಿಕೆಟ್ ಕಳೆದುಕೊಂಡಿದೆ. 5ನೇ ಓವರ್​​ನ ಮೊದಲ 3 ಎಸೆತದಲ್ಲಿ ಬೌಂಡರಿ ಬಾರಿಸಿದ ತ್ರಿಪಾಠಿ 3ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 04 May 2023 10:03 PM (IST)

    ತ್ರಿಪಾಠಿ ಸಿಕ್ಸರ್

    ರಸೆಲ್ ಬೌಲ್ ಮಾಡಿದ 5ನೇ ಓವರ್​ನ ಮೊದಲ ಎಸೆತ ನೋಬಾಲ್ ಆಗಿತ್ತು. ಅದನ್ನು ಬೌಂಡರಿಗಟ್ಟಿದ ತ್ರಿಪಾಠಿ ಫ್ರೀ ಹಿಟ್ ಬಾಲ್​​ನಲ್ಲಿ ಸಿಕ್ಸರ್​​ಗಟ್ಟಿದರು. ಮುಂದಿನ ಎಸೆತದಲ್ಲಿ ಬೌಂಡರಿ ಹೊಡೆದರು.

  • 04 May 2023 09:59 PM (IST)

    5ನೇ ಓವರ್​ನಲ್ಲಿ 1 ರನ್

    2 ವಿಕೆಟ್ ಉರುಳಿದ ಬಳಿಕ ಹೈದರಾಬಾದ್ ಇನ್ನಿಂಗ್ಸ್​ ನಿಧಾನವಾಗಿದೆ. 5ನೇ ಓವರ್​​ನಲ್ಲಿ ಕೇವಲ 1 ರನ್ ಮಾತ್ರ ಬಂತು.

  • 04 May 2023 09:55 PM (IST)

    ಅಭಿಷೇಕ್ ಔಟ್

    ಶಾರ್ದೂಲ್ ಬೌಲ್ ಮಾಡಿದ 3ನೇ ಓವರ್​ನ 5ನೇ ಎಸೆತದಲ್ಲಿ ಆರಂಭಿಕ ಅಭಿಷೇಕ್ ಕ್ಯಾಚಿತ್ತು ಔಟಾದರು.

  • 04 May 2023 09:54 PM (IST)

    ತ್ರಿಪಾಠಿ ಬೌಂಡರಿ

    ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ರಾಹುಲ್ ತ್ರಿಪಾಠಿ ಸ್ಕೂಪ್ ಮಾಡಿ ಬೌಂಡರಿ ಬಾರಿಸಿದರು.

  • 04 May 2023 09:43 PM (IST)

    ಮಯಾಂಕ್ ಸಿಕ್ಸ್, ಔಟ್

    ರಾಣಾ ಬೌಲ್ ಮಾಡಿದ 3ನೇ ಓವರ್​​ನ 3ನೇ ಎಸೆತದಲ್ಲಿ ಡೀಪ್ ಪಾಯಿಂಟ್ ಮೇಲೆ ಸಿಕ್ಸರ್ ಬಾರಿಸಿದ ಮಯಾಂಕ್, ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್​​ಗೆ ಕ್ಯಾಚಿತ್ತು ಔಟಾದರು.

  • 04 May 2023 09:42 PM (IST)

    ಮಯಾಂಕ್ ಬೌಂಡರಿ

    ವೈಭವ್ ಬೌಲ್ ಮಾಡಿದ 2ನೇ ಓವರ್​ನಲ್ಲಿ 13 ರನ್ ಬಂದವು. ಈ ಓವರ್​ನ ಕೊನೆಯ ಎಸೆತದಲ್ಲಿ ಮಯಾಂಕ್ ಥರ್ಡ್​ ಮ್ಯಾನ್​ನಲ್ಲಿ ಬೌಂಡರಿ ಹೊಡೆದರು.

  • 04 May 2023 09:34 PM (IST)

    ಹೈದರಾಬಾದ್ ಇನ್ನಿಂಗ್ಸ್ ಆರಂಭ

    ಹೈದರಾಬಾದ್ ಇನ್ನಿಂಗ್ಸ್ ಆರಂಭವಾಗಿದೆ. ಅಭಿಷೇಕ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಲು ಬಂದಿದ್ದಾರೆ.ಇವರ ಮುಂದೆ ಹರ್ಷಿತ್ ರಾಣಾ ಬೌಲಿಂಗ್ ಆರಂಭಿಸುತ್ತಿದ್ದಾರೆ. ಅಭಿಷೇಕ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು.

  • 04 May 2023 09:11 PM (IST)

    171 ರನ್ ಟಾರ್ಗೆಟ್

    20ನೇ ಓವರ್​​ನಲ್ಲಿ 2 ವಿಕೆಟ್ ಉರುಳಿಸಿದ ನಟರಾಜನ್ ಕೇವಲ 3 ರನ್ ನೀಡಿದರು. ಇದರೊಂದಿಗೆ ಕೆಕೆಆರ್ 9 ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿದೆ.

  • 04 May 2023 09:07 PM (IST)

    ರಾಯ್ ಬೌಂಡರಿ

    ಭುವಿ ಬೌಲ್ ಮಾಡಿದ 19ನೇ ಓವರ್​​ನಲ್ಲಿ ಅನ್ಕುಲ್ ರಾಯ್ 2 ಬೌಂಡರಿ ಹೊಡೆದರು. ಈ ಒವರ್​​ನಲ್ಲಿ 13 ರನ್ ಬಂದವು.

  • 04 May 2023 08:59 PM (IST)

    ಶಾರ್ದೂಲ್ ಔಟ್

    6 ಬಾಲ್​​ಗಳಲ್ಲಿ 8 ರನ್ ಬಾರಿಸಿದ್ದ ಶಾರ್ದೂಲ್ ನಟರಾಜನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

  • 04 May 2023 08:58 PM (IST)

    150 ರನ್ ಪೂರ್ಣ

    18ನೇ ಓವರ್​ನ ಮೊದಲ ಎಸೆತದಲ್ಲಿ ಡಬಲ್ ತೆಗೆದುಕೊಂಡ ರಿಂಕು ಕೆಕೆಆರ್ ಮೊತ್ತವನ್ನು 150ರ ಗಡಿ ದಾಟಿಸಿದರು.

  • 04 May 2023 08:57 PM (IST)

    ರಿಂಕು ಸಿಕ್ಸ್, 17 ಓವರ್ ಅಂತ್ಯಕ್ಕೆ 148/6

    ಮಯಾಂಕ್ ಬೌಲ್ ಮಾಡಿದ 17ನೇ ಓವರ್​​ನ 5ನೇ ಎಸೆತದಲ್ಲಿ ರಿಂಕು ಲಾಂಗ್​​ ಆನ್​​ನಲ್ಲಿ ಸಿಕ್ಸರ್ ಹೊಡೆದರು.

  • 04 May 2023 08:48 PM (IST)

    ನರೈನ್ ಔಟ್

    ರಸೆಲ್ ವಿಕೆಟ್ ಬಳಿಕ ಬಂದ ನರೈನ್ ಕೂಡ ಕೇವಲ 2 ರನ್​​ಗಳಿಗೆ ವಿಕೆಟ್ ಒಪ್ಪಿಸಿದರು.

  • 04 May 2023 08:41 PM (IST)

    ರಸೆಲ್ ಔಟ್

    15ನೇ ಓವರ್​ನ 2ನೇ ಎಸೆತದಲ್ಲೇ ರಸೆಲ್ ವಿಕೆಟ್ ಒಪ್ಪಿಸಿದ್ದಾರೆ.

  • 04 May 2023 08:40 PM (IST)

    14 ಓವರ್ ಅಂತ್ಯ, ಕೆಕೆಆರ್ 127/4

    ನಟರಾಜನ್ ಬೌಲ್ ಮಾಡಿದ 14ನೇ ಓವರ್​​ನ 4ನೇ ಎಸೆತದಲ್ಲಿ ರಸೆಲ್ ಡೀಪ್ ಮಿಡ್ ವಿಕೆಟ್​​ ಕಡೆ ಬೌಂಡರಿ ಹೊಡೆದರು.

  • 04 May 2023 08:39 PM (IST)

    ರಸೆಲ್ ಸಿಕ್ಸ್

    ಮಯಾಂಕ್ ಬೌಲ್ ಮಾಡಿದ 13ನೇ ಓವರ್​​ನ 2ನೇ ಎಸೆತವನ್ನು ರಸೆಲ್ ಲಾಂಗ್​​ ಆನ್​​ನಲ್ಲಿ ಸಿಕ್ಸರ್​ಗಟ್ಟಿದರೆ, ಕೊನೆಯ ಎಸೆತವನ್ನು ರಿಂಕು ಬೌಂಡರಿಗಟ್ಟಿದರು.

  • 04 May 2023 08:31 PM (IST)

    ಕೋಲ್ಕತ್ತಾದ ಶತಕ ಪೂರ್ಣ

    ನಾಯಕ ರಾಣಾ ವಿಕೆಟ್ ಬಳಿಕ ಬಂದ ರಸೆಲ್ 11ನೇ ಓವರ್​ನ 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ, ತಂಡವನ್ನು 100ರ ಗಡಿ ದಾಟಿಸಿದ್ದಾರೆ.

  • 04 May 2023 08:29 PM (IST)

    ರಾಣಾ ಔಟ್

    31 ಬಾಲ್​​ಗಳಲ್ಲಿ 42 ರನ್ ಬಾರಿಸಿದ್ದ ಕೆಕೆಆರ್ ನಾಯಕ ನಿತೀಶ್ ರಾಣಾ ಎದುರಾಳಿ ನಾಯಕನ ಬೌಲಿಂಗ್​​ನಲ್ಲಿ ಅವರಿಗೆ ಕ್ಯಾಚಿತ್ತು ಔಟಾಗಿದ್ದಾರೆ. ಇದರೊಂದಿಗೆ ಕೆಕೆಆರ್​​ 4ನೇ ವಿಕೆಟ್ ಕಳೆದುಕೊಂಡಿದೆ.

  • 04 May 2023 08:24 PM (IST)

    ತ್ಯಾಗಿ ದುಬಾರಿ

    ರಾಯ್ ವಿಕೆಟ್ ಉರುಳಿಸಿದ್ದ ತ್ಯಾಗಿ 10ನೇ ಓವರ್​​ನಲ್ಲಿ ತುಂಬಾ ದುಬಾರಿಯಾಗಿದ್ದಾರೆ. ಈ ಓವರ್​​ನಲ್ಲಿ ಒಟ್ಟು 3 ಬೌಂಡರಿ ಬಂದವು. ಅದರಲ್ಲಿ 2 ಸಿಕ್ಸರ್ ಆದರೆ, 1 ಭರ್ಜರಿ ಫೋರ್ ಆಗಿತ್ತು.

  • 04 May 2023 08:18 PM (IST)

    ರಿಂಕು ಬೌಂಡರಿ

    9ನೇ ಓವರ್​​ನಲ್ಲಿ ರಿಂಕು 2 ಬ್ಯಾಕ್ ಟು ಬ್ಯಾಕ್ ಬೌಂಡರಿ ಹೊಡೆದರು. ಮೊದಲ ಬೌಂಡರಿ ಡೀಪ್ ಕವರ್ಸ್​ನಲ್ಲಿ ಬಂದರೆ, 2ನೇ ಬೌಂಡರಿ ಡೀಪ್ ಕವರ್ಸ್​ ಪಾಯಿಂಟ್​​ನಲ್ಲಿ ಬಂತು.

  • 04 May 2023 08:11 PM (IST)

    ರಾಣಾ ಸಿಕ್ಸ್

    ನಟರಾಜ್ ಬೌಲ್ ಮಾಡಿದ 8ನೇ ಓವರ್​​ನ 2ನೇ ಎಸೆತವನ್ನು ಡೀಪ್ ಸ್ಕ್ವೇರ್​​ ಲೆಗ್​​ನಲ್ಲಿ ರಾಣಾ ಸಿಕ್ಸರ್​ಗಟ್ಟಿದರು.

    8 ಓವರ್ ಅಂತ್ಯಕ್ಕೆ 61/3

  • 04 May 2023 07:57 PM (IST)

    ರಾಯ್ ಔಟ್, 5 ಓವರ್ ಅಂತ್ಯಕ್ಕೆ 40/3

    5ನೇ ಓವರ್​ ಬೌಲ್ ಮಾಡಿದ ತ್ಯಾಗಿ 3ನೇ ಎಸೆತದಲ್ಲಿ ಬೌಂಡರಿ ನೀಡಿದರೆ, ಆ ನಂತರದ ಎಸೆತದಲ್ಲಿ ಡೇಂಜರಸ್ ರಾಯ್ ವಿಕೆಟ್ ಉರುಳಿಸಿದ್ದಾರೆ.

  • 04 May 2023 07:56 PM (IST)

    ಯಾನ್ಸೆನ್ ನೋ ಬಾಲ್

    4ನೇ ಓವರ್ ಬೌಲ್ ಮಾಡಿದ ಯಾನ್ಸೆನ್ ಓವೆರ್​​ನ ಮೊದಲ ಎಸೆತವನ್ನೇ ನೋ ಬಾಲ್ ಹಾಕಿದರು. ಈ ಬಾಲ್​​ನಲ್ಲಿ ಬೌಂಡರಿ ಕೂಡ ಸಿಕ್ಕಿತ್ತು. ಆದರೆ ಫ್ರೀ ಹಿಟ್​​ ಬಾಲ್​​ನಲ್ಲಿ ಯಾವುದೇ ರನ್ ಬರಲಿಲ್ಲ.

  • 04 May 2023 07:45 PM (IST)

    ರಾಯ್ ಬೌಂಡರಿ

    ಭುವಿ ಬೌಲ್ ಮಾಡಿದ 3ನೇ ಓವರ್​​ನ 3ನೇ ಎಸೆತದಲ್ಲಿ ರಾಯ್ ಪಾಯಿಂಟ್ ದಿಕ್ಕಿನಲ್ಲಿ ಬೌಂಡರಿ ಹೊಡೆದರು.

  • 04 May 2023 07:43 PM (IST)

    ಅಯ್ಯರ್ ಔಟ್

    2ನೇ ಓವರ್​​ನಲ್ಲಿ 2 ವಿಕೆಟ್ ಉರುಳಿದವು. ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಬಿದ್ದರೆ, ಕೊನೆಯ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ವಿಕೆಟ್ ಕೀಪರ್​​ಗೆ ಕ್ಯಾಚಿತ್ತು ಔಟಾದರು.

  • 04 May 2023 07:41 PM (IST)

    ಮೊದಲ ವಿಕೆಟ್ ಪತನ

    ಕೆಕೆಆರ್ ತಂಡದ ಮೊದಲ ವಿಕೆಟ್ ಪತನವಾಗಿದೆ. 2ನೇ ಓವರ್​​ನ ಮೊದಲ ಎಸೆತದಲ್ಲಿ ಆರಂಭಿಕ ಗುರ್ಭಾಜ್ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು.

  • 04 May 2023 07:36 PM (IST)

    ಕೋಲ್ಕತ್ತಾದ ಬ್ಯಾಟಿಂಗ್ ಆರಂಭ

    ಕೋಲ್ಕತ್ತಾ ಬ್ಯಾಟಿಂಗ್ ಆರಂಭಿಸಿದೆ. ಸ್ಫೋಟಕ ಆರಂಭಿಕ ಜೋಡಿ ಜೇಸನ್ ರಾಯ್ ಮತ್ತು ರಹಮಾನುಲ್ಲಾ ಗುರ್ಬಾಜ್ ಕ್ರೀಸ್‌ನಲ್ಲಿದ್ದಾರೆ. ಭುವನೇಶ್ವರ್ ಅವರ ಓವರ್‌ನಲ್ಲಿ ರಾಯ್ ಬೌಂಡರಿ ಬಾರಿಸಿದರು.

  • 04 May 2023 07:15 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ

    ನಿತೀಶ್ ರಾಣಾ (ನಾಯಕ), ಜೇಸನ್ ರಾಯ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಿಂಕು ಸಿಂಗ್, ವೈಭವ್ ಅರೋರಾ, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

  • 04 May 2023 07:13 PM (IST)

    ಸನ್ ರೈಸರ್ಸ್ ಹೈದರಾಬಾದ್

    ಏಡನ್ ಮಾರ್ಕ್ರಾಮ್ (ನಾಯಕ), ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಹ್ಯಾರಿ ಬ್ರೂಕ್, ಅಬ್ದುಲ್ ಸಮದ್, ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಕಾರ್ತಿಕ್ ತ್ಯಾಗಿ ಮತ್ತು ಟಿ ನಟರಾಜನ್.

  • 04 May 2023 07:03 PM (IST)

    ಟಾಸ್ ಗೆದ್ದ ಕೋಲ್ಕತ್ತಾ

    ಟಾಸ್ ಗೆದ್ದ ಕೋಲ್ಕತ್ತಾ ನಾಯಕ ನಿತಿಶ್ ರಾಣಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - 7:02 pm, Thu, 4 May 23

Follow us on