Viral Video: ಔಟ್ ಆಗುವುದನ್ನು ತಡೆಯಲು ಹೋಗಿ ಔಟ್ ಆದ ಶ್ರೀಲಂಕಾ ಬ್ಯಾಟರ್

ಈ ಪಂದ್ಯದಲ್ಲಿ ನಾಯಕ ದಿಮುತ್ ಕರುಣಾರತ್ನೆ 132 ಮತ್ತು ಧನಂಜಯ್ ಡಿಸಿಲ್ವಾ 56 ರನ್ ಗಳಿಸಿ ಶ್ರೀಲಂಕಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಹಾಗೆಯೇ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಚಂಡಿಮಲ್ 83 ಎಸೆತಗಳಲ್ಲಿ 45 ರನ್‌ಗಳ ಇನ್ನಿಂಗ್ಸ್‌ ಆಡಿದ್ದಾರೆ.

Viral Video: ಔಟ್ ಆಗುವುದನ್ನು ತಡೆಯಲು ಹೋಗಿ ಔಟ್ ಆದ ಶ್ರೀಲಂಕಾ ಬ್ಯಾಟರ್
Dhananjaya de Silva

ಕ್ರಿಕೆಟ್ ಮೈದಾನದಲ್ಲಿ ಆಗಾಗ ವಿಚಿತ್ರ ಘಟನೆಗಳು ಕಾಣ ಸಿಗುತ್ತವೆ. ಗಾಲೆ ಟೆಸ್ಟ್‌ನ ಎರಡನೇ ದಿನವೂ ಅಂತಹ ಒಂದು ದೃಶ್ಯಕ್ಕೆ ಸಾಕ್ಷಿಯಾಯಿತು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್ ಧನಂಜಯ ಡಿ ಸಿಲ್ವಾ ಔಟಾದ ರೀತಿ ನೋಡಿ ಎಲ್ಲರೂ ನಗುತ್ತಿದ್ದಾರೆ. ಇದಕ್ಕೆ ಕಾರಣ ಧನಂಜಯ್ ಡಿ ಸಿಲ್ವಾ ಹಿಟ್ ವಿಕೇಟ್ ಆಗಿರುವುದು. ಆದರೆ ಈ ರೀತಿ ಔಟ್ ಆಗಲು ಕಾರಣ ಔಟ್ ಆಗದಿರಲು ಪ್ರಯತ್ನಿಸಿರುವುದು.

95ನೇ ಓವರ್​ನ ಶಾನನ್ ಗೇಬ್ರಿಯಲ್ ಅವರ ಶಾರ್ಟ್ ಬಾಲ್ ಅನ್ನು ಧನಂಜಯ ಡಿ ಸಿಲ್ವಾ ಬ್ಯಾಕ್ ಫೂಟ್ ನಲ್ಲಿ ನಿಲ್ಲಿಸಿದರು. ಆದರೆ ಆ ಚೆಂಡು ಸ್ಟಂಪ್ ಕಡೆಗೆ ಸಾಗಿತ್ತು. ತಕ್ಷಣವೇ ಧನಂಜಯ ಚೆಂಡನ್ನು ಬ್ಯಾಟ್‌ನಿಂದ ತಡೆಯಲು ಪ್ರಯತ್ನಿಸಿದರು. ಆದರೆ ಬಾಲ್​ ಬ್ಯಾಟ್​ಗೆ ತಾಗಿ ಸ್ಟಂಪ್‌ನತ್ತ ಚಿಮ್ಮಿತು. ಕೂಡಲೇ ಧನಂಜಯ ಮೂರನೇ ಬಾರಿಗೆ ಚೆಂಡನ್ನು ತಡೆಯಲು ಯತ್ನಿಸಿದರು. ಅದರಂತೆ ಚೆಂಡು ಸ್ಟಂಪ್​ಗೆ ತಾಗುವುದು ತಪ್ಪಿತು. ಆದರೆ ಧನಂಜಯ ಅವರ ಬ್ಯಾಟ್​ ಸ್ಟಂಪ್​ಗೆ ತಾಗಿ ಹಿಟ್​ ವಿಕೆಟ್ ಆದರು. ಇದೀಗ ಧನಂಜಯ ಡಿಸಿಲ್ವಾ ಹಿಟ್​ ವಿಕೆಟ್​ನ ಫನ್ನಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ನಾಯಕ ದಿಮುತ್ ಕರುಣಾರತ್ನೆ 132 ಮತ್ತು ಧನಂಜಯ್ ಡಿಸಿಲ್ವಾ 56 ರನ್ ಗಳಿಸಿ ಶ್ರೀಲಂಕಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಹಾಗೆಯೇ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಚಂಡಿಮಲ್ 83 ಎಸೆತಗಳಲ್ಲಿ 45 ರನ್‌ಗಳ ಇನ್ನಿಂಗ್ಸ್‌ ಆಡಿದ್ದಾರೆ. ಈ ಮೂವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 386 ರನ್ ಗಳಿಸಿದೆ.

ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Martin Guptill: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್

ಇದನ್ನೂ ಓದಿ: Rahul Dravid: ರಾಹುಲ್ ದ್ರಾವಿಡ್ ಹಾಗೂ ರವಿ ಶಾಸ್ತ್ರಿ ನಡುವಣ ವ್ಯತ್ಯಾಸ ತಿಳಿಸಿದ ಗೌತಮ್ ಗಂಭೀರ್

Click on your DTH Provider to Add TV9 Kannada