AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾ ಕ್ರಿಕೆಟಿಗನಿಗೆ 5 ವರ್ಷಗಳ ನಿಷೇಧ

Saliya Saman: ಸಲಿಯಾ ಸಮನ್ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸುವ ಅವಕಾಶ ಹೊಂದಿದ್ದರು. ಏಕೆಂದರೆ ಲಂಕಾ ದೇಶೀಯ ಅಂಗಳದಲ್ಲಿ ಸಮನ್  101 ಪ್ರಥಮ ದರ್ಜೆ, 77 ಲಿಸ್ಟ್ ಎ ಮತ್ತು 47 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಪ್ರಥಮ ದರ್ಜೆ ಕ್ರಿಕೆಟ್​ ಒಟ್ಟು 3,662 ರನ್ ಗಳಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟ್​ನಿಂದ 2 ಶತಕಗಳು ಮತ್ತು 22 ಅರ್ಧಶತಕಗಳು ಮೂಡಿಬಂದಿದೆ. ಇನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 898 ರನ್ ಗಳಿಸಿದರೆ, ಟಿ20 ಸ್ವರೂಪದಲ್ಲಿ 673 ರನ್ ಕಲೆಹಾಕಿದ್ದಾರೆ.

ಶ್ರೀಲಂಕಾ ಕ್ರಿಕೆಟಿಗನಿಗೆ 5 ವರ್ಷಗಳ ನಿಷೇಧ
Saliya Saman
ಝಾಹಿರ್ ಯೂಸುಫ್
|

Updated on: Aug 16, 2025 | 10:59 AM

Share

ಶ್ರೀಲಂಕಾ ಕ್ರಿಕೆಟಿಗ ಸಲಿಯಾ ಸಮನ್ ಅವರನ್ನು ಐಸಿಸಿ 5 ವರ್ಷಗಳ ಕಾಲ ಬ್ಯಾನ್ ಮಾಡಿದೆ. ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ತಪ್ಪಿತಸ್ಥ ಎಂಬುದು ಕಂಡುಕೊಂಡ ಬೆನ್ನಲ್ಲೇ ಈ ನಿಷೇಧ ಹೇರಲಾಗಿದೆ. 2021 ರಲ್ಲಿ ಯುಎಇನಲ್ಲಿ ನಡೆದ ಅಬುಧಾಬಿ ಟಿ10 ಲೀಗ್​ ಪಂದ್ಯದ ವೇಳೆ ಸಲಿಯಾ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಐಸಿಸಿ ಭ್ರಷ್ಟಾಚಾರ ವಿರೋಧಿ ನ್ಯಾಯ ಮಂಡಳಿಯು ಸಮನ್ ಸೇರಿದಂತೆ ಒಟ್ಟು 8 ಮಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೆ ಈ ಪ್ರಕರಣದಲ್ಲಿ 8 ಮಂದಿ ಐಸಿಸಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಹೀಗಾಗಿ ಇದೀಗ ಸಲಿಯಾ ಸುಮನ್ ಅವರ ಮೇಲೆ 5 ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

ಸಮನ್ ಮೇಲಿನ 5 ವರ್ಷಗಳ ನಿಷೇಧವು ಸೆಪ್ಟೆಂಬರ್ 13, 2023 ರಿಂದ ಜಾರಿಗೆ ಬರುತ್ತದೆ. ಅದರಂತೆ ಇದೀಗ ಸಮನ್ ಅವರ 2 ವರ್ಷಗಳ ನಿಷೇಧವು ಈಗಾಗಲೇ ಪೂರ್ಣಗೊಂಡಿದ್ದು, ಇನ್ನುಳಿದ ಮೂರು ವರ್ಷಗಳ ಬ್ಯಾನ್ ಮುಂದುವರೆಯಲಿದೆ.

ಸಮನ್ 2.1.1, 2.1.3 ಮತ್ತು 2.1.4 ನೇ ವಿಧಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾಲಿಯಾ ತಪ್ಪಿತಸ್ಥರಾಗಿದ್ದಾರೆ. ಅಬುಧಾಬಿ T10 2021 ಟೂರ್ನಮೆಂಟ್ ಸಮಯದಲ್ಲಿ ಯಾವುದೇ ಪಂದ್ಯದಲ್ಲಿ ಅಥವಾ ಯಾವುದೇ ಹಂತದಲ್ಲಿ ಯಾವುದೇ ವ್ಯಕ್ತಿ ಫಿಕ್ಸಿಂಗ್, ಯೋಜನೆ ಅಥವಾ ಪಂದ್ಯದ ಮೇಲೆ ಪ್ರಭಾವ ಬೀರುವುದು ಕಂಡುಬಂದರೆ ಕ್ರಮ ಕೈಗೊಳ್ಳಲು ಆರ್ಟಿಕಲ್ 2.1.1 ಅವಕಾಶ ನೀಡುತ್ತದೆ.

ಹಾಗೆಯೇ ಐಸಿಸಿ ನಿಯಮ ಉಲ್ಲಂಘಿಸಲು ಮತ್ತೊಬ್ಬ ಆಟಗಾರನನ್ನು ಪ್ರಚೋದಿಸಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಲು 2.1.3 ನೇ ವಿಧಿ ಅವಕಾಶ ನೀಡುತ್ತದೆ.

ಆಟಗಾರರು ನೇರವಾಗಿ ಅಥವಾ ಪರೋಕ್ಷವಾಗಿ ವಿಧಿ 2.1 ಅನ್ನು ಉಲ್ಲಂಘಿಸಲು ಪ್ರೋತ್ಸಾಹಿಸಿದ್ದಾರೆ, ಮನವೊಲಿಸಿದ್ದಾರೆ ಅಥವಾ ಪ್ರೇರೇಪಿಸಿದ್ದಾರೆ ಎಂದು ಸಾಬೀತಾದರೆ ವಿಧಿ 2.1.4 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಇದೀಗ ಈ ಮೂರು ನಿಯಮಗಳ ಅಡಿಯಲ್ಲಿ ಸಲಿಯಾ ಸುಮನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಸಲಿಯಾ ಸಮನ್ ವೃತ್ತಿಜೀವನ:

ಸಲಿಯಾ ಸಮನ್ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸುವ ಅವಕಾಶ ಹೊಂದಿದ್ದರು. ಏಕೆಂದರೆ ಲಂಕಾ ದೇಶೀಯ ಅಂಗಳದಲ್ಲಿ ಸಮನ್  101 ಪ್ರಥಮ ದರ್ಜೆ, 77 ಲಿಸ್ಟ್ ಎ ಮತ್ತು 47 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ: IPL 2026: ಐಪಿಎಲ್ ಟ್ರೇಡ್ ವಿಂಡೋ ಎಂದರೇನು?

ಈ ವೇಳೆ ಪ್ರಥಮ ದರ್ಜೆ ಕ್ರಿಕೆಟ್​ ಒಟ್ಟು 3,662 ರನ್ ಗಳಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟ್​ನಿಂದ 2 ಶತಕಗಳು ಮತ್ತು 22 ಅರ್ಧಶತಕಗಳು ಮೂಡಿಬಂದಿದೆ. ಇನ್ನು ಲಿಸ್ಟ್ಕ್ರಿಕೆಟ್‌ನಲ್ಲಿ 898 ರನ್ ಗಳಿಸಿದರೆ, ಟಿ20 ಸ್ವರೂಪದಲ್ಲಿ 673 ರನ್ ಕಲೆಹಾಕಿದ್ದಾರೆ. ಹಾಗೆಯೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 231 ವಿಕೆಟ್‌ಗಳನ್ನು ಪಡೆದರೆ, ಲಿಸ್ಟ್ಕ್ರಿಕೆಟ್‌ನಲ್ಲಿ 84 ಮತ್ತು 58 ಟಿ20 ವಿಕೆಟ್‌ಗಳನ್ನು ಸಹ ಕಬಳಿಸಿದ್ದಾರೆ.

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್