David Warner: ಗೆದ್ದೆತ್ತಿನ ಬಾಲ ಹಿಡಿ! ಆಶಸ್ ಸರಣಿ ಗೆದ್ದ ಡೇವಿಡ್ ವಾರ್ನರ್ ನೆನೆದ ಸನ್‌ರೈಸರ್ಸ್ ಹೈದರಾಬಾದ್
David Warner: ಟ್ವೀಟ್ ಮಾಡಿದ ಹೈದರಾಬಾದ್ ಫ್ರಾಂಚೈಸ್, ಆಶಸ್ ಸರಣಿ ಗೆಲುವಿಗಾಗಿ ವಾರ್ನರ್ ಅವರನ್ನು ಅಭಿನಂದಿಸಿತು ಮತ್ತು ಟ್ವೀಟ್ನಲ್ಲಿ ಹರಾಜಿನ ಬಗ್ಗೆಯೂ ಪ್ರಸ್ತಾಪಿಸಿದೆ.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಐಪಿಎಲ್ ತಂಡದ ಸನ್‌ರೈಸರ್ಸ್ ಹೈದರಾಬಾದ್‌ನ ಪ್ರಮುಖ ಭಾಗವಾಗಿದ್ದ ಸಮಯವಿತ್ತು. ಅವರ ನಾಯಕತ್ವದಲ್ಲಿ ತಂಡವು 2016 ರಲ್ಲಿ IPL ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಂಡವು ವಾರ್ನರ್ ನಾಯಕತ್ವದಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿತು, ಆದರೆ ಕಳೆದ IPL ನಲ್ಲಿ, ಈ ತಂಡವು ವಾರ್ನರ್ ಅವರನ್ನು ಪಂದ್ಯಾವಳಿಯ ಮಧ್ಯದಲ್ಲಿಯೇ ನಾಯಕತ್ವದಿಂದ ತೆಗೆದುಹಾಕಿತು. ಇದಾದ ಬಳಿಕ ಫ್ರಾಂಚೈಸಿ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲೂ ಉಳಿಸಿಕೊಳ್ಳಲಿಲ್ಲ. ನಂತರ ಮೆಗಾ ಹರಾಜಿಗೂ ಮುನ್ನ ವಾರ್ನರ್ ಅವರನ್ನು ತಂಡದಿಂದ ಕೈಬಿಟ್ಟಿತು. ಹೀಗಾಗಿ ವಾರ್ನರ್ ಈ ಬಾರಿ ಮೆಗಾ ಹರಾಜಿನಲ್ಲಿರಲಿದ್ದಾರೆ. ವಾರ್ನರ್ ಫಾರ್ಮ್ನಲ್ಲಿಲ್ಲದ ಕಾರಣ ತಂಡ ಅವರನ್ನು ಕೈ ಬಿಟ್ಟಿತ್ತು. ಇದೀಗ ಈ ಬ್ಯಾಟ್ಸ್‌ಮನ್ ಫಾರ್ಮ್‌ಗೆ ಮರಳಿದ್ದಾರೆ.
ಈಗ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ವಾರ್ನರ್ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ 3-0 ಮುನ್ನಡೆ ಸಾಧಿಸಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಸರಣಿಯನ್ನು ವಶಪಡಿಸಿಕೊಂಡಿದೆ. ಇದಾದ ಬಳಿಕ ಸನ್ ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ಕೋಚ್ ಟಾಮ್ ಮೂಡಿ ಆಸ್ಟ್ರೇಲಿಯ ತಂಡವನ್ನು ಅಭಿನಂದಿಸಿದ್ದಾರೆ.
ಟ್ವೀಟ್ ಮಾಡಿದ ಫ್ರಾಂಚೈಸ್ ಟ್ವೀಟ್ ಮಾಡಿದ ಹೈದರಾಬಾದ್ ಫ್ರಾಂಚೈಸ್, ಆಶಸ್ ಸರಣಿ ಗೆಲುವಿಗಾಗಿ ವಾರ್ನರ್ ಅವರನ್ನು ಅಭಿನಂದಿಸಿತು ಮತ್ತು ಟ್ವೀಟ್ನಲ್ಲಿ ಹರಾಜಿನ ಬಗ್ಗೆಯೂ ಪ್ರಸ್ತಾಪಿಸಿದೆ. ಆಶಸ್ ಸರಣಿಯನ್ನು ಗೆದ್ದಿದ್ದಕ್ಕಾಗಿ ಡೇವಿಗೆ ಅಭಿನಂದನೆಗಳು. ನೀವು ಫಾರ್ಮ್‌ನಲ್ಲಿರುವಂತೆ ತೋರುತ್ತಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ನಿಮಗೆ ಅದೃಷ್ಟ ಖುಲಾಯಿಸಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಬರೆದುಕೊಂಡಿದೆ.
Congrats on the Ashes win Davey – Looks like you are back to ?? form and enjoying the after party! On the other hand we hope you have a good auction! ??? https://t.co/grZrRn5Zqm
— SunRisers Hyderabad (@SunRisers) December 28, 2021
ಟಿ20 ವಿಶ್ವಕಪ್‌ನಲ್ಲಿ ರಾಕೆಟ್ IPL-2021 ರ ಕೊನೆಯ ಕೆಲವು ಪಂದ್ಯಗಳಲ್ಲಿ, ಸನ್‌ರೈಸರ್ಸ್ ಹೈದರಾಬಾದ್‌ನಿಂದ ಕೊನೆಯ 11 ರಲ್ಲಿ ವಾರ್ನರ್‌ಗೆ ಸ್ಥಾನ ನೀಡಲಿಲ್ಲ. ಐಪಿಎಲ್ ನಂತರವೇ ಐಸಿಸಿ ಟಿ20 ವಿಶ್ವಕಪ್ ಆಯೋಜಿಸಲಾಗಿತ್ತು. ಈ ವಿಶ್ವಕಪ್‌ನಲ್ಲಿ, ವಾರ್ನರ್ ಫಾರ್ಮ್‌ಗೆ ಮರಳಿದರು ಮತ್ತು ಆಸ್ಟ್ರೇಲಿಯಾದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯಾವಳಿಯಲ್ಲಿ ಅವರು ಏಳು ಪಂದ್ಯಗಳಲ್ಲಿ 289 ರನ್ ಗಳಿಸಿದರು. ಈ ಕಾರಣದಿಂದಾಗಿ, ಅವರು ಪಂದ್ಯಾವಳಿಯ ಆಟಗಾರರಾಗಿ ಆಯ್ಕೆಯಾದರು.