SRH, IPL 2022: ಕೇನ್ ನಾಯಕತ್ವದಲ್ಲಿ ಚಾಂಪಿಯನ್ ಆಗುತ್ತಾ ಹೈದರಾಬಾದ್? ತಂಡದ ಸಂಭಾವ್ಯ ಇಲೆವೆನ್ ಹೀಗಿದೆ

Sunrisers Hyderabad, IPL 2022: ನಾಯಕ ಕೇನ್ ಹೊರತಾಗಿ, ಸನ್ ರೈಸರ್ಸ್ ಅಬ್ದುಲ್ ಸಮದ್ ಮತ್ತು ಉಮ್ರಾನ್ ಮಲಿಕ್ ಅವರನ್ನು ಉಳಿಸಿಕೊಂಡಿತ್ತು. ನಂತರ ಭುವನೇಶ್ವರ್ ಕುಮಾರ್ ಮತ್ತು ಟಿ ನಟರಾಜನ್ ರಂತಹ ಆಟಗಾರರನ್ನು ಹರಾಜಿನಲ್ಲಿ ಮರು ಖರೀದಿಸಿತು.

SRH, IPL 2022: ಕೇನ್ ನಾಯಕತ್ವದಲ್ಲಿ ಚಾಂಪಿಯನ್ ಆಗುತ್ತಾ ಹೈದರಾಬಾದ್? ತಂಡದ ಸಂಭಾವ್ಯ ಇಲೆವೆನ್ ಹೀಗಿದೆ
Simon Katich and Sunrisers Hyderabad
Follow us
TV9 Web
| Updated By: ಪೃಥ್ವಿಶಂಕರ

Updated on: Mar 18, 2022 | 9:01 PM

ಕಳೆದ ಆವೃತ್ತಿಯ ವಿವಾದಗಳೆಲ್ಲವನ್ನು ಬದಿಗಿಟ್ಟು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಹೊಸ ತಂಡದೊಂದಿಗೆ ಹೊಸ ಸೀಸನ್‌ಗೆ (IPL 2022) ಸಿದ್ಧವಾಗಿದೆ . ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಅನುಭವಿ ನಾಯಕ ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್‌ರೈಸರ್ಸ್ ತಂಡ ಕಳೆದ ಆವೃತ್ತಿಯ ವೈಫಲ್ಯವನ್ನು ಬಿಟ್ಟು ಈ ಬಾರಿ ಉತ್ತಮ ಪ್ರದರ್ಶನ ನೀಡಲು ಉತ್ಸುಕವಾಗಿದೆ. ಹರಾಜಿನ ಹೊರತಾಗಿ, ತಂಡವು ತನ್ನ ಕೋಚಿಂಗ್ ಸ್ಟಾಫ್‌ನಲ್ಲಿ ಬ್ರಿಯಾನ್ ಲಾರಾ ಮತ್ತು ಡೇಲ್ ಸ್ಟೇನ್ ಅವರಂತಹ ಅನುಭವಿಗಳನ್ನು ಸಹ ಸೇರಿಸಿಕೊಂಡಿದೆ. ಆದರೆ ಕಳೆದ ಆವೃತ್ತಿಯ ತಪ್ಪುಗಳಿಂದ ತಂಡವು ಪಾಠ ಕಲಿತು ಉತ್ತಮ ಪ್ಲೇಯಿಂಗ್ ಇಲೆವೆನ್ ಅನ್ನು ಮಾಡಿದೆಯೇ ಎಂಬುದು ಪ್ರಶ್ನೆಯಾಗಿದೆ. ನಾವು ಹರಾಜಿನ ದೃಷ್ಟಿಕೋನವನ್ನು ನೋಡಿದರೆ, ಈ ಫ್ರ್ಯಾಂಚೈಸ್ ಅನೇಕ ಆಟಗಾರರ ಮೇಲೆ ಬಿಡ್ ಮಾಡಿತ್ತು. ಆದರೆ ಪ್ರತಿ ಬಾರಿಯೂ ಯಾವುದೇ ಯಶಸ್ಸು ಸಿಗಲಿಲ್ಲ. ಅದೇನೇ ಇದ್ದರೂ, ತಂಡವು ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್ ಮತ್ತು ಏಡನ್ ಮಾರ್ಕ್ರಾಮ್ ಅವರಂತಹ ಉತ್ತಮ ಆಟಗಾರರನ್ನು ಖರೀದಿಸಿದೆ. ಇಂತಹ ಖ್ಯಾತ ನಾಮರೊಂದಿಗೆ ಹೈದರಾಬಾದ್ ತನ್ನ ಪ್ಲೇಯಿಂಗ್ ಇಲೆವೆನ್​ನನ್ನು ಹೇಗೆ ರಚಿಸಲಿದೆ ಎಂಬುದು ಪ್ರಶ್ನೆಯಾಗಿದೆ.

ನಾಯಕ ಕೇನ್ ಹೊರತಾಗಿ, ಸನ್ ರೈಸರ್ಸ್ ಅಬ್ದುಲ್ ಸಮದ್ ಮತ್ತು ಉಮ್ರಾನ್ ಮಲಿಕ್ ಅವರನ್ನು ಉಳಿಸಿಕೊಂಡಿತ್ತು. ನಂತರ ಭುವನೇಶ್ವರ್ ಕುಮಾರ್ ಮತ್ತು ಟಿ ನಟರಾಜನ್ ರಂತಹ ಆಟಗಾರರನ್ನು ಹರಾಜಿನಲ್ಲಿ ಮರು ಖರೀದಿಸಿತು. ಆದರೆ, ಈ ಬಾರಿಯ ಹರಾಜಿನ ನಂತರವೂ ರಶೀದ್ ಖಾನ್ ಅವರಂತಹ ದಂತಕಥೆಯ ನಿರ್ಗಮನದ ಕೊರತೆಯನ್ನು ತಂಡಕ್ಕೆ ಸರಿಯಾಗಿ ತುಂಬಲು ಸಾಧ್ಯವಾಗಲಿಲ್ಲ ಎಂಬುದು ಸ್ಪಷ್ಟವಾಗಿದೆ. ಇದರ ಹೊರತಾಗಿಯೂ, ಸನ್‌ರೈಸರ್ಸ್ ಹೈದರಾಬಾದ್‌ನ 23 ಆಟಗಾರರ ತಂಡವು ಉತ್ತಮ ಆಡುವ XI ಅನ್ನು ಸಿದ್ಧಪಡಿಸುವ ಆಯ್ಕೆಗಳನ್ನು ಹೊಂದಿದೆ.

ತಂಡದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಕಳೆದ ಸೀಸನ್‌ಗಿಂತ ಉತ್ತಮವಾಗಿದೆ. ವಿಶೇಷವಾಗಿ ಮಧ್ಯಮ ಕ್ರಮಾಂಕವು ನಿಕೋಲಸ್ ಪೂರನ್, ಮಾರ್ಕ್ರಾಮ್ ಮತ್ತು ಅಬ್ದುಲ್ ಸಮದ್ ಅವರಂತಹ ವಿಧ್ವಂಸಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಅಭಿಷೇಕ್ ಶರ್ಮಾ ಅವರಿಗೆ ಓಪನಿಂಗ್ ಭಾಗ್ಯ ಸಿಗಲಿದ್ದು, ಅವರೊಂದಿಗೆ ರಾಹುಲ್ ತ್ರಿಪಾಠಿ ಓಪನಿಂಗ್ ಮಾಡಬಹುದು. ಅಂದಹಾಗೆ, ಆರಂಭಿಕ ಮತ್ತು ಮೂರನೇ ಕ್ರಮಾಂಕದಲ್ಲಿ ರಾಹುಲ್ ಮತ್ತು ನಾಯಕ ಕೇನ್ ಕೂಡ ಅಗತ್ಯಕ್ಕೆ ಅನುಗುಣವಾಗಿ ಬದಲಾಗಬಹುದು.

ವಾಷಿಂಗ್ಟನ್ ಸುಂದರ್ ತಂಡದ ಪ್ರಮುಖ ಆಲ್ ರೌಂಡರ್ ಪಾತ್ರದಲ್ಲಿದ್ದಾರೆ. ಸುಂದರ್ ಇಲ್ಲಿಯವರೆಗೆ ಟಿ20ಯಲ್ಲಿ ಬ್ಯಾಟ್‌ನಿಂದ ಹೆಚ್ಚಿನ ಪ್ರಭಾವವನ್ನು ತೋರಿಸಲು ಸಾಧ್ಯವಾಗದಿದ್ದರೂ, ಅವರಿಂದ ಇನ್ನೂ ಭರವಸೆ ಇದೆ. ಇವರಲ್ಲದೆ ಮಾರ್ಕ್ರಾಮ್, ಅಬ್ದುಲ್ ಸಮದ್ ಮತ್ತು ಅಭಿಷೇಕ್ ಕೂಡ ಪಾರ್ಟ್ ಟೈಮ್ ಸ್ಪಿನ್ ಮಾಡಬಹುದು.

ವೇಗದ ಬೌಲಿಂಗ್‌ನಲ್ಲಿ ಉತ್ತಮ ಆಯ್ಕೆಗಳು ವೇಗದ ಬೌಲಿಂಗ್‌ನಲ್ಲಿ ತಂಡವು ಉತ್ತಮ ಆಯ್ಕೆಗಳನ್ನು ಹೊಂದಿದೆ, ಇದರಲ್ಲಿ ಉಮ್ರಾನ್ ಮಲಿಕ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ, ಮಾರ್ಕೊ ಯಾನ್ಸನ್ ಮತ್ತು ರೊಮಾರಿಯೊ ಶೆಫರ್ಡ್ ಪ್ರಮುಖರಾಗಿದ್ದಾರೆ. ಇವರುಗಳಲ್ಲಿ ಉಮ್ರಾನ್ ಮತ್ತು ಭುವನೇಶ್ವರ್ ತಂಡದಲ್ಲಿ ಆಡುವುದು ಖಚಿತ. ಉಳಿದಂತೆ ನಟರಾಜನ್, ಯಾನಾಸನ್ ಮತ್ತು ಕಾರ್ತಿಕ್ ನಡುವೆ ಫೈಪೋಟಿ ನಡೆಯಲಿದ್ದು, ಇದರಲ್ಲಿ ನಟರಾಜನ್​ಗೆ ಅವಕಾಶಗಳು ಹೆಚ್ಚಿವೆ. ರಿಸ್ಟ್ ಸ್ಪಿನ್ನರ್ ಆಗಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಇರಲಿದ್ದು, ಸುಂದರ್ ಅವರಿಗೆ ಬೆಂಬಲ ನೀಡಲಿದ್ದಾರೆ.

SRH ಸಂಭಾವ್ಯ ಪ್ಲೇಯಿಂಗ್ 11 ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ನಿಕೋಲಸ್ ಪೂರನ್, ಏಡನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್.

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್