IND vs UAE, Asia Cup 2025: ಅಸಲಿ ಆಟ ಸೆಪ್ಟೆಂಬರ್ 14 ರಂದು ನಡೆಯಲಿದೆ… ಪೋಸ್ಟ ಮ್ಯಾಚ್ ವೇಳೆ ಸೂರ್ಯಕುಮಾರ್ ಏನೆಲ್ಲ ಹೇಳಿದ್ರು ನೋಡಿ

Suryakumar Yadav post match presentation: 2025 ರ ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯಾ ಯುಎಇಯನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದ ಗೆಲುವಿನ ನಂತರ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ದೊಡ್ಡ ಹೇಳಿಕೆ ನೀಡಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಅಭಿಷೇಕ್ ಶರ್ಮಾ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಹೊಗಳಿದರು.

IND vs UAE, Asia Cup 2025: ಅಸಲಿ ಆಟ ಸೆಪ್ಟೆಂಬರ್ 14 ರಂದು ನಡೆಯಲಿದೆ... ಪೋಸ್ಟ ಮ್ಯಾಚ್ ವೇಳೆ ಸೂರ್ಯಕುಮಾರ್ ಏನೆಲ್ಲ ಹೇಳಿದ್ರು ನೋಡಿ
Suryakumar Yadav Post Match Ind Vs Uae
Edited By:

Updated on: Sep 11, 2025 | 7:14 AM

ಬೆಂಗಳೂರು (ಸೆ. 11): 2025 ರ ಏಷ್ಯಾಕಪ್ ನ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ (Indian Cricket Team) ಯುಎಇ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ ತನ್ನ ಅಭಿಯಾನವನ್ನು ಅದ್ಭುತವಾಗಿ ಶುರುಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ಈ ಪಂದ್ಯದಲ್ಲಿ ಕೇವಲ 57 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ ತಂಡ ಕೇವಲ 4.3 ಓವರ್ ಗಳಲ್ಲೇ ಪಂದ್ಯವನ್ನು ಮುಗಿಸಿತು. ಈ ಇಡೀ ಪಂದ್ಯ ಇಷ್ಟೊಂದು ಏಕಪಕ್ಷೀಯವಾಗಿ ಕೊನೆಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಪಂದ್ಯವನ್ನು ಗೆದ್ದ ನಂತರ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಒಂದು ದೊಡ್ಡ ಹೇಳಿಕೆ ನೀಡಿದರು.

ಯುಎಇ ವಿರುದ್ಧದ ಗೆಲುವಿನ ನಂತರ ಸೂರ್ಯಕುಮಾರ್ ಹೇಳಿದ್ದೇನು?

ಬುಧವಾರ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಗ್ರೂಪ್ ಎ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಗೆಲುವಿನ ನಂತರ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಬೌಲರ್‌ಗಳ ಪ್ರದರ್ಶನವನ್ನು ಶ್ಲಾಘಿಸಿದರು. ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಆತಿಥೇಯ ತಂಡದ ದುರ್ಬಲ ಬ್ಯಾಟಿಂಗ್ ಕ್ರಮಾಂಕವನ್ನು ಕೆಡವಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಭಾರತ 9 ವಿಕೆಟ್‌ಗಳ ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಲು ಸಹಾಯ ಮಾಡಿದರು.

ಪಂದ್ಯದ ನಂತರ ಸೂರ್ಯಕುಮಾರ್, ‘‘ನಮ್ಮ ಹುಡುಗರು ಅದ್ಭುತ ಪ್ರದರ್ಶನ ನೀಡಿದರು. ನಾವು ಪೂರ್ಣ ಶಕ್ತಿಯಿಂದ ಮೈದಾನಕ್ಕೆ ಇಳಿಯಲು ಬಯಸಿದ್ದೆವು ಮತ್ತು ಬ್ಯಾಟಿಂಗ್‌ನಲ್ಲೂ ಅದೇ ಕಂಡುಬಂದಿತು. ವಿಕೆಟ್ ಚೆನ್ನಾಗಿತ್ತು. ಆದರೆ ಇಲ್ಲಿಯ ವಾತಾವರಣ ತುಂಬಾ ಬಿಸಿಯಾಗಿದೆ. ಸ್ಪಿನ್ನರ್‌ಗಳು ಚೆನ್ನಾಗಿ ಬೌಲಿಂಗ್ ಮಾಡಿದರು. ಇವರ ಜೊತೆಗೆ ಜಸ್ಪ್ರಿತ್ ಬುಮ್ರಾ, ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಚೆನ್ನಾಗಿ ಬೌಲಿಂಗ್ ಮಾಡಿದರು’’ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಸೂರ್ಯಕುಮಾರ್ ಕ್ರೀಡಾ ಸ್ಫೂರ್ತಿಗೆ ಎಲ್ಲೆಡೆ ಭಾರಿ ಮೆಚ್ಚುಗೆ; ವಿಡಿಯೋ ನೋಡಿ
ಯುಎಇ ವಿರುದ್ಧ 4.3 ಓವರ್​ಗಳಲ್ಲಿ ಗೆದ್ದ ಟೀಂ ಇಂಡಿಯಾ
W,W,W,W..; ಕಲ್ದೀಪ್ ಗೂಗ್ಲಿಗೆ ಮಂಡಿಯೂರಿದ ಯುಎಇ
ಬಿರುಗಾಳಿಯಂತೆ ಬಂದು ಸ್ಟಂಪ್ಸ್ ಹಾರಿಸಿದ ಬುಮ್ರಾ ಡೆಡ್ಲಿ ಯಾರ್ಕರ್

Asia Cup 2025: ಅಂಪೈರ್ ಔಟ್ ಕೊಟ್ಟರೂ ಬೇಡ ಎಂದ ಸೂರ್ಯ; ಸಲಾಂ ಹೊಡೆದ ಕ್ರಿಕೆಟ್ ಜಗತ್ತು

ಅಭಿಷೇಕ್ ಶರ್ಮಾರನ್ನು ಮರೆಯದ ಸೂರ್ಯ

ಸೂರ್ಯಕುಮಾರ್ ಅಭಿಷೇಕ್ ಶರ್ಮಾ (30 ರನ್) ಅವರನ್ನು ಕೂಡ ಹೊಗಳಿದರು. ‘‘ಅಭಿಷೇಕ್ ಪ್ರಸ್ತುತ ಈ ಸ್ವರೂಪದಲ್ಲಿ ಅಗ್ರ ಬ್ಯಾಟ್ಸ್‌ಮನ್ ಮತ್ತು ಇದಕ್ಕೆ ಕಾರಣ ಅವರ (ಆಕ್ರಮಣಕಾರಿ) ಶೈಲಿ. ಆದರೆ ನಮಗೆ ಈಗ ಮುಂದಿನ ಪಂದ್ಯದ ಮೇಲೆ (ಸೆಪ್ಟೆಂಬರ್ 14 ರಂದು ಪಾಕಿಸ್ತಾನ ವಿರುದ್ಧ) ಕಣ್ಣುಗಳಿವೆ’’ ಎಂದು ಅವರು ಹೇಳಿದರು.

ಸೋಲಿನ ನಂತರ ಯುಎಇ ನಾಯಕ ಹೇಳಿದ್ದೇನು?

“ನಾವು ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಪ್ರಾರಂಭಿಸಿದೆವು ಆದರೆ ನಂತರ ನಾವು ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡೆವು ಮತ್ತು ಇದು ನಮ್ಮ ಸೋಲಿಗೆ ಕಾರಣವಾಗಿತ್ತು” ಎಂದು ಯುಎಇ ನಾಯಕ ಮೊಹಮ್ಮದ್ ವಾಸಿಮ್ ಹೇಳಿದರು. “ಭಾರತ ಬಲಿಷ್ಠ ತಂಡ ಮತ್ತು ಅವರು ಅದ್ಭುತವಾಗಿ ಬೌಲಿಂಗ್ ಮಾಡಿದರು. ಅವರು ತಮ್ಮ ತಂತ್ರವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದರು. ನಾವು ಈ ತಪ್ಪುಗಳಿಂದ ಕಲಿಯಲು ಮತ್ತು ಗೆಲುವಿನ ಮೂಲಕ ಕಮ್​ಬ್ಯಾಕ್ ಮಾಡಲು ಪ್ರಯತ್ನಿಸುತ್ತೇವೆ” ಎಂದು ಅವರು ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ