AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಒಂದೇ ಓವರ್‌ನಲ್ಲಿ 3 ವಿಕೆಟ್ ಉರುಳಿಸಿ ಕ್ರಿಕೆಟ್ ದೇವರ ದಾಖಲೆ ಸರಿಗಟ್ಟಿದ ಕುಲ್ದೀಪ್

Kuldeep Yadav's 4-Wicket Haul: ಏಷ್ಯಾಕಪ್ 2025ರ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಯುಎಇ ತಂಡವನ್ನು ಕೇವಲ 57 ರನ್​ಗಳಿಗೆ ಆಲೌಟ್ ಮಾಡಿದೆ. ಕುಲ್ದೀಪ್ ಯಾದವ್ ಅವರ ಅದ್ಭುತ ಬೌಲಿಂಗ್ (4 ವಿಕೆಟ್) ಇದಕ್ಕೆ ಮುಖ್ಯ ಕಾರಣ. ಒಂದೇ ಓವರ್‌ನಲ್ಲಿ 3 ವಿಕೆಟ್ ಪಡೆದ ಕುಲ್ದೀಪ್, ಸಚಿನ್ ತೆಂಡೂಲ್ಕರ್ ಅವರ ಏಷ್ಯಾಕಪ್ ದಾಖಲೆಯನ್ನು ಸಮೀಕರಿಸಿದ್ದಾರೆ.

Asia Cup 2025: ಒಂದೇ ಓವರ್‌ನಲ್ಲಿ 3 ವಿಕೆಟ್ ಉರುಳಿಸಿ ಕ್ರಿಕೆಟ್ ದೇವರ ದಾಖಲೆ ಸರಿಗಟ್ಟಿದ ಕುಲ್ದೀಪ್
Kuldeep Yadav
ಪೃಥ್ವಿಶಂಕರ
|

Updated on:Sep 10, 2025 | 9:38 PM

Share

2025ರ ಏಷ್ಯಾಕಪ್​ನಲ್ಲಿ (Asia Cup 2025) ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನವನ್ನೇ ನೀಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಿರುವ ಸೂರ್ಯಕುಮಾರ್ ಪಡೆ, ಆತಿಥೇಯ ತಂಡವನ್ನು ಕೇವಲ 57 ರನ್​ಗಳಿಗೆ ಆಲೌಟ್ ಮಾಡಿದೆ. ಭಾರತದ ಬೌಲರ್​ಗಳ ಮುಂದೆ ಪೆವಿಲಿಯನ್ ಪರೇಡ್ ನಡೆಸಿದ ಯುಎಇ ಆಟಗಾರರಿಗೆ ಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಮಿಕ್ಕ ಐವರು ಬೌಲರ್​ಗಳಿಗೆ ವಿಕೆಟ್ ಸಿಕ್ಕಿತು. ಅದರಲ್ಲೂ ಮ್ಯಾಜಿಕಲ್ ಸ್ಪಿನ್ ದಾಳಿ ನಡೆಸಿದ ಕುಲ್ದೀಪ್ ಯಾದವ್ (Kuldeep Yadav) ಕೇವಲ 2.1 ಓವರ್ ಬೌಲ್ ಮಾಡಿ 7 ರನ್‌ಗಳನ್ನು ಬಿಟ್ಟುಕೊಟ್ಟು ಅತ್ಯಧಿಕ 4 ವಿಕೆಟ್ ಉರುಳಿಸಿದರು. ತಂಡದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್​ಗೆ 1 ವರ್ಷದ ಬಳಿಕ ಭಾರತದ ಪರ ಟಿ20 ಪಂದ್ಯ ಆಡುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಕುಲ್ದೀಪ್ ತಮ್ಮ ಎರಡನೇ ಓವರ್‌ನಲ್ಲಿ ಯುಎಇ ತಂಡವನ್ನು ನಡುಗಿಸಿಬಿಟ್ಟರು.

ಒಂದೇ ಓವರ್‌ನಲ್ಲಿ 3 ವಿಕೆಟ್

ಜೂನ್ 2024 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಆಡಿದ್ದ ಕುಲ್ದೀಪ್ ಯಾದವ್ ಯುಎಇ ವಿರುದ್ಧದ ತಮ್ಮ ಮೊದಲ ಓವರ್‌ನಲ್ಲಿ ತುಂಬಾ ಮಿತವ್ಯಯದಿಂದ ಬೌಲಿಂಗ್ ಮಾಡಿ ಕೇವಲ 4 ರನ್‌ಗಳನ್ನು ಬಿಟ್ಟುಕೊಟ್ಟರು. ಇದಾದ ನಂತರ, ತಮ್ಮ ಖೋಟಾದ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ರಾಹುಲ್ ಚೋಪ್ರಾ ಅವರ ವಿಕೆಟ್ ಪಡೆದರು . ರಾಹುಲ್ ಚೋಪ್ರಾ ದೊಡ್ಡ ಹೊಡೆತವನ್ನು ಆಡಲು ಯತ್ನಿಸಿ ಶುಭ್​ಮನ್ ಗಿಲ್‌ಗೆ ಕ್ಯಾಚ್ ನೀಡಿದರು.

ಇದಾದ ನಂತರ, ಕುಲ್ದೀಪ್ ಯಾದವ್ ಆ ಓವರ್​ನ ಎರಡನೇ ಎಸೆತದಲ್ಲಿ 1 ರನ್ ಬಿಟ್ಟುಕೊಟ್ಟು ಮೂರನೇ ಎಸೆತದಲ್ಲಿ ಡಾಟ್ ಬಾಲ್ ಎಸೆದರು. ನಂತರ ನಾಲ್ಕನೇ ಎಸೆತದಲ್ಲಿ ಯುಎಇ ನಾಯಕ ಮುಹಮ್ಮದ್ ವಾಸಿಮ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಅದೇ ಓವರ್​ನ ಕೊನೆಯ ಎಸೆತದಲ್ಲಿ ಹರ್ಷಿತ್ ಕೌಶಿಕ್ ಅವರನ್ನು ಸಹ ಪೆವಿಲಿಯನ್​ಗೆ ಕಳುಹಿಸಿದರು. ಕುಲ್ದೀಪ್ ಯಾದವ್ ಅವರ ಈ ಮಾಂತ್ರಿಕ ಬೌಲಿಂಗ್ ನಿಂದಾಗಿ ಯುಎಇ ತಂಡ ಕೇವಲ 50 ರನ್​ಗಳೊಳಗೆ ಪ್ರಮುಖ 5 ವಿಕೆಟ್​ಗಳನ್ನು ಕಳೆದುಕೊಂಡಿತು.

Asia Cup 2025: ಬುಮ್ರಾ ಡೆಡ್ಲಿ ಯಾರ್ಕರ್​ಗೆ ಹಾರಿತು ವಿಕೆಟ್; ವಿಡಿಯೋ ನೋಡಿ

ಸಚಿನ್ ತೆಂಡೂಲ್ಕರ್ ಅವರನ್ನು ಸರಿಗಟ್ಟಿದ ಕುಲ್ದೀಪ್

ಈ ಪಂದ್ಯದಲ್ಲಿ 3 ವಿಕೆಟ್​ಗಳ ಗೊಂಚಲು ಪಡೆಯುವ ಮೂಲಕ ಕುಲ್ದೀಪ್ ಯಾದವ್ ವಿಶೇಷ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಸರಿಗಟ್ಟಿದ್ದಾರೆ. ವಾಸ್ತವವಾಗಿ, ಸಚಿನ್ ತೆಂಡೂಲ್ಕರ್ ಏಷ್ಯಾಕಪ್‌ನಲ್ಲಿ 4 ಬಾರಿ 3 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದರು. ಇದೀಗ ಕುಲ್ದೀಪ್ ನಾಲ್ಕನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತ ಪರ ಅತಿ ಹೆಚ್ಚು ಬಾರಿ 3 ವಿಕೆಟ್ ಗೊಂಚಲು ಪಡೆದ ದಾಖಲೆ ರವೀಂದ್ರ ಜಡೇಜಾ ಅವರ ಹೆಸರಿನಲ್ಲಿದ್ದು, 5 ಬಾರಿ ಈ ಸಾಧನೆ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:36 pm, Wed, 10 September 25

ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ
ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ