AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಏಷ್ಯಾಕಪ್​ಗೆ ಸೂರ್ಯಕುಮಾರ್ ಯಾದವ್ ಸಾರಥಿ

Asia Cup 2025: ಏಷ್ಯಾಕಪ್ 2025 ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳೆಂದರೆ, ಭಾರತ, ಪಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಯುಎಇ, ಒಮಾನ್ ಹಾಗೂ ಹಾಂಗ್​ಕಾಂಗ್. ಈ ಎಂಟು ತಂಡಗಳಲ್ಲಿ ನಾಲ್ಕು ಟೀಮ್​​ಗಳು ಸೂಪರ್ ಫೋರ್ ಹಂತಕ್ಕೇರಲಿದೆ. ಸೂಪರ್​ ಫೋರ್​ ಹಂತದಲ್ಲಿ ಟಾಪ್-2 ಬರುವ ತಂಡಗಳು ಫೈನಲ್ ಆಡಲಿದೆ.

Asia Cup 2025: ಏಷ್ಯಾಕಪ್​ಗೆ ಸೂರ್ಯಕುಮಾರ್ ಯಾದವ್ ಸಾರಥಿ
Suryakumar Yadav
ಝಾಹಿರ್ ಯೂಸುಫ್
|

Updated on:Aug 06, 2025 | 7:26 AM

Share

ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಮುಂಬರುವ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಲಿದ್ದು, ಹೀಗಾಗಿ ಪ್ರಸ್ತುತ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಅವರನ್ನೇ ಕ್ಯಾಪ್ಟನ್ ಆಗಿ ಮುಂದುವರೆಸಲು ನಿರ್ಧರಿಸಲಾಗಿದೆ.

ಇನ್ನು ಟೆಸ್ಟ್ ತಂಡದ ನಾಯಕ ಶುಭ್​ಮನ್ ಗಿಲ್ ಅವರಿಗೆ ಉಪನಾಯಕತ್ವ ನೀಡುವ ಸಾಧ್ಯತೆ ಇದೆ. ಈ ಹಿಂದೆ ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಉಪನಾಯಕನನ್ನು ಬದಲಿಸಲು ಬಿಸಿಸಿಐ ಚಿಂತಿಸಿದೆ ಎಂದು ವರದಿಯಾಗಿದೆ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇಲ್ಲ..!

ಸೆಪ್ಟೆಂಬರ್‌ ನಲ್ಲಿ ನಡೆಯಲಿರುವ ಏಷ್ಯಾಕಪ್ ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ. ಹಿಟ್ ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಇಬ್ಬರು ದಿಗ್ಗಜರಿಲ್ಲದೇ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಏಷ್ಯಾಕಪ್ ಆಡಲಿದೆ.

ಏಷ್ಯಾಕಪ್ ವೇಳಾಪಟ್ಟಿ:

ಏಷ್ಯಾಕಪ್ ನ ಉದ್ಘಾಟನಾ ಪಂದ್ಯ ಸೆಪ್ಟೆಂಬರ್ 9 ರಂದು ನಡೆಯಲಿದೆ. ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಒಮಾನ್ ಹಾಗೂ ಹಾಂಗ್ ಕಾಂಗ್ ತಂಡಗಳು ಮುಖಾಮುಖಿ ಮಯಾಗಲಿದೆ.

ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಆಡಲಿದ್ದು, ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಟೀಮ್ ಇಂಡಿಯಾದ ಏಷ್ಯಾಕಪ್ ವೇಳಾಪಟ್ಟಿ ಈ ಕೆಳಗಿನಂತಿದೆ

ಭಾರತದ ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ:

  • ಭಾರತ vs ಯುಎಇ – ಸೆಪ್ಟೆಂಬರ್ 10 (ದುಬೈ)
  • ಭಾರತ vs ಪಾಕಿಸ್ತಾನ್ – ಸೆಪ್ಟೆಂಬರ್ 14 (ದುಬೈ)
  • ಭಾರತ vs ಒಮಾನ್ – ಸೆಪ್ಟೆಂಬರ್ 19  (ಅಬುಧಾಬಿ)

ಏಷ್ಯಾಕಪ್ ಸೂಪರ್ ಫೋರ್ ಹಂತದ ವೇಳಾಪಟ್ಟಿ:

  • ಬಿ1 vs ಬಿ 20 ಸೆಪ್ಟೆಂಬರ್ (ದುಬೈ)
  • A1 vs A2  21 ಸೆಪ್ಟೆಂಬರ್ (ದುಬೈ)
  • A2 vs B1  23 ಸೆಪ್ಟೆಂಬರ್ (ಅಬುಧಾಬಿ)
  • A1 vs B2  24 ಸೆಪ್ಟೆಂಬರ್ (ದುಬೈ)
  • A2 vs B2  25 ಸೆಪ್ಟೆಂಬರ್ (ದುಬೈ)
  • A1 vs B1  26 ಸೆಪ್ಟೆಂಬರ್ (ದುಬೈ)
  • (ಭಾರತ ತಂಡ A1 ಅಥವಾ A2 ಆಗಿರಲಿದೆ)

ಇದನ್ನೂ ಓದಿ: Mohammed Siraj: ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಭಯ್ಯಾ..!

ಇನ್ನು ಏಷ್ಯಾಕಪ್​ ಟೂರ್ನಿಯ ಫೈನಲ್ ಪಂದ್ಯವು ಸೆಪ್ಟೆಂಬರ್ 28 ರಂದು ನಡೆಯಲಿದೆ. ಈ ಪಂದ್ಯಕ್ಕೂ ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

Published On - 7:24 am, Wed, 6 August 25