T20 Blast 2024: ಟಿ20 ಬ್ಲಾಸ್ಟ್​ನಲ್ಲಿ ಗ್ಲೌಸೆಸ್ಟರ್‌ಶೈರ್ ತಂಡ ಚಾಂಪಿಯನ್ಸ್

T20 Blast 2024 Final: 22 ವರ್ಷಗಳ ಇತಿಹಾಸ ಹೊಂದಿರುವ ಟಿ20 ಬ್ಲಾಸ್ಟ್​ನಲ್ಲಿ ಇದೇ ಮೊದಲ ಬಾರಿಗೆ ಗ್ಲೌಸೆಸ್ಟರ್‌ಶೈರ್ ತಂಡವು ಚಾಂಪಿಯನ್​ ಪಟ್ಟಕ್ಕೇರಿದೆ. ಈ ಮೂಲಕ ಇಂಗ್ಲೆಂಡ್ ಕೌಂಟಿ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆಯುವಲ್ಲಿ ಕೊನೆಗೂ ಗ್ಲೌಸೆಸ್ಟರ್‌ಶೈರ್ ತಂಡ ಯಶಸ್ವಿಯಾಗಿದೆ.

T20 Blast 2024: ಟಿ20 ಬ್ಲಾಸ್ಟ್​ನಲ್ಲಿ ಗ್ಲೌಸೆಸ್ಟರ್‌ಶೈರ್ ತಂಡ ಚಾಂಪಿಯನ್ಸ್
Gloucestershire
Follow us
|

Updated on: Sep 15, 2024 | 8:08 AM

ಇಂಗ್ಲೆಂಡ್​ನಲ್ಲಿ ನಡೆದ ಟಿ20 ಬ್ಲಾಸ್ಟ್​ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗ್ಲೌಸೆಸ್ಟರ್‌ಶೈರ್ ತಂಡ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಸೋಮರ್‌ಸೆಟ್ ಮತ್ತು ಗ್ಲೌಸೆಸ್ಟರ್‌ಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗ್ಲೌಸೆಸ್ಟರ್‌ಶೈರ್ ತಂಡದ ನಾಯಕ ಜ್ಯಾಕ್ ಟೇಲರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೋಮರ್​ಸೆಟ್ ತಂಡ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಗ್ಲೌಸೆಸ್ಟರ್‌ಶೈರ್ ಬೌಲರ್​ಗಳು ಪವರ್​ಪ್ಲೇನಲ್ಲಿ ನೀಡಿದ್ದು ಕೇವಲ 41 ರನ್​ಗಳು ಮಾತ್ರ. ಅಲ್ಲದೆ 42 ರನ್​ಗಳಿಗೆ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಕಳುಹಿಸಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಲೂಯಿಸ್ ಗ್ರೆಗೊರಿ 37 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 53 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಸೋಮರ್​ಸೆಟ್ ತಂಡವು 19.4 ಓವರ್​ಗಳಲ್ಲಿ 124 ರನ್ ಕಲೆಹಾಕಿ ಆಲೌಟ್ ಆಯಿತು.

125 ರನ್​ಗಳ ಸುಲಭ ಗುರಿ:

120 ಎಸೆತಗಳಲ್ಲಿ 125 ರನ್​ಗಳ ಸುಲಭ ಗುರಿ ಪಡೆದ ಗ್ಲೌಸೆಸ್ಟರ್‌ಶೈರ್ ತಂಡಕ್ಕೆ ಮೈಲ್ಸ್ ಹ್ಯಾಮಂಡ್ ಹಾಗೂ ಕ್ಯಾಮರೋನ್ ಬ್ಯಾಂಕ್ರಾಫ್ಟ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 112 ರನ್​ಗಳ ಭರ್ಜರಿ ಜೊತೆಯಾಟವಾಡಿದ ಬಳಿಕ ಬ್ಯಾಂಕ್ರಾಫ್ಟ್ (53) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಜೇಮ್ಸ್ ಬ್ರೇಸಿ (2) ಸಹ ಔಟಾದರು.

ಆದರೆ ಮತ್ತೊಂದೆಡೆ 58 ರನ್​ಗಳೊಂದಿಗೆ ಅಜೇಯರಾಗಿ ಉಳಿದ ಮೈಲ್ಸ್ ಹ್ಯಾಮಂಡ್ 15 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಗ್ಲೌಸೆಸ್ಟರ್‌ಶೈರ್ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ 2024ರ ಟಿ20 ಬ್ಲಾಸ್ಟ್​ ಟೂರ್ನಿಯ ಚಾಂಪಿಯನ್ಸ್ ಎನಿಸಿಕೊಂಡಿದ್ದಾರೆ.

ಗ್ಲೌಸೆಸ್ಟರ್‌ಶೈರ್ ಗೆಲುವಿನ ಸಂಭ್ರಮ:

ಸೋಮರ್​ಸೆಟ್ ಪ್ಲೇಯಿಂಗ್ 11: ಟಾಮ್ ಕೊಹ್ಲರ್-ಕ್ಯಾಡ್ಮೋರ್ , ವಿಲ್ ಸ್ಮೀಡ್ , ಟಾಮ್ ಅಬೆಲ್ , ಜೇಮ್ಸ್ ರೆವ್ (ವಿಕೆಟ್ ಕೀಪರ್) , ಸೀನ್ ಡಿಕ್ಸನ್ , ಲೂಯಿಸ್ ಗ್ರೆಗೊರಿ (ನಾಯಕ) , ಬೆನ್ ಗ್ರೀನ್ , ಕ್ರೇಗ್ ಓವರ್ಟನ್ , ರೋಲೋಫ್ ವ್ಯಾನ್ ಡೆರ್ ಮೆರ್ವೆ , ಜೋಶ್ ಡೇವಿ , ಜೇಕ್ ಬಾಲ್.

ಇದನ್ನೂ ಓದಿ: Virat Kohli: ಕೇವಲ 58 ರನ್​ಗಳು… ವಿಶ್ವ ದಾಖಲೆಯ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ

ಗ್ಲೌಸೆಸ್ಟರ್‌ಶೈರ್ ಪ್ಲೇಯಿಂಗ್ 11: ಮೈಲ್ಸ್ ಹ್ಯಾಮಂಡ್ , ಕ್ಯಾಮರೋನ್ ಬ್ಯಾಂಕ್ರಾಫ್ಟ್ , ಜೇಮ್ಸ್ ಬ್ರೇಸಿ (ವಿಕೆಟ್ ಕೀಪರ್) , ಆಲಿವರ್ ಪ್ರೈಸ್ , ಜ್ಯಾಕ್ ಟೇಲರ್ (ನಾಯಕ) , ಬೆನ್ ಚಾರ್ಲ್ಸ್‌ವರ್ತ್ , ಟಾಮ್ ಪ್ರೈಸ್ , ಮ್ಯಾಟ್ ಟೇಲರ್ , ಜೋಶ್ ಶಾ , ಡೇವಿಡ್ ಪೇನ್ , ಟಾಮ್ ಸ್ಮಿತ್.

ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?