T20 World Cup 2022: 12 ತಂಡಗಳು, 30 ಪಂದ್ಯಗಳು: ಹೇಗಿರಲಿದೆ ಸೂಪರ್-12 ಹಣಾಹಣಿ?

| Updated By: ಝಾಹಿರ್ ಯೂಸುಫ್

Updated on: Oct 22, 2022 | 3:42 PM

T20 World Cup 2022: 2007 ರ ಟಿ20 ವಿಶ್ವಕಪ್​ ಬಳಿಕ ಉಭಯ ತಂಡಗಳು ಚುಟುಕು ಕ್ರಿಕೆಟ್ ಕದನದಲ್ಲಿ ಮತ್ತೆ ಫೈನಲ್ ಆಡಿಲ್ಲ. ಹೀಗಾಗಿ ಈ ಬಾರಿ ಫೈನಲ್ ಫೈಟ್​ನಲ್ಲಿ ಮತ್ತೆ ಮುಖಾಮುಖಿಯಾಗಲಿದೆಯಾ ಕಾದು ನೋಡಬೇಕಿದೆ.

T20 World Cup 2022: 12 ತಂಡಗಳು, 30 ಪಂದ್ಯಗಳು: ಹೇಗಿರಲಿದೆ ಸೂಪರ್-12 ಹಣಾಹಣಿ?
T20 World Cup 2022
Follow us on

T20 World Cup 2022: ಟಿ20 ವಿಶ್ವಕಪ್​ 2ನೇ ಹಂತಕ್ಕೆ ಕಾಲಿಟ್ಟಿದೆ. ಮೊದಲ ಹಂತದಲ್ಲಿ 8 ತಂಡಗಳ ನಡುವೆ ಅರ್ಹತಾ ಸುತ್ತಿನ ಪಂದ್ಯಗಳು ನಡೆದಿದ್ದು, ಅದರಲ್ಲಿ ಗೆದ್ದ ನಾಲ್ಕು ತಂಡಗಳು ಇದೀಗ ಸೂಪರ್-12 ಹಂತಕ್ಕೆ ಪ್ರವೇಶಿಸಿದೆ. ಹೆಸರೇ ಸೂಚಿಸುವಂತೆ ಸೂಪರ್-12 ನಲ್ಲಿ ಒಟ್ಟು 12 ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಆದರೆ ಈ ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿರುವುದು ವಿಶೇಷ. ಅಂದರೆ ಇಲ್ಲಿ 12 ತಂಡಗಳನ್ನು 6 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆಯಾ ಗ್ರೂಪ್​ನ ತಂಡಗಳು ಪರಸ್ಪರ ಒಂದೊಂದು ಪಂದ್ಯವಾಡಲಿದೆ. ಇಲ್ಲಿ ಒಂದು ತಂಡವು ತನ್ನ ಗ್ರೂಪ್​ನಲ್ಲಿ ಒಟ್ಟು ಐದು ಪಂದ್ಯಗಳನ್ನಾಡಬೇಕಿದೆ. ಅದರಂತೆ ಸೂಪರ್-12 ಸುತ್ತಿನಲ್ಲಿ ಒಟ್ಟು 30 ಪಂದ್ಯಗಳನ್ನಾಡಲಿದೆ. ಯಾವ ಗ್ರೂಪ್​ನಲ್ಲಿ ಯಾವೆಲ್ಲಾ ತಂಡಗಳಿವೆ…

ಗ್ರೂಪ್- 1

  • ಅಫ್ಘಾನಿಸ್ತಾನ್
  • ಆಸ್ಟ್ರೇಲಿಯಾ
  • ಇಂಗ್ಲೆಂಡ್
  • ಐರ್ಲೆಂಡ್
  • ನ್ಯೂಜಿಲೆಂಡ್
  • ಶ್ರೀಲಂಕಾ

ಗ್ರೂಪ್-2

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
  • ಭಾರತ
  • ಪಾಕಿಸ್ತಾನ್
  • ಬಾಂಗ್ಲಾದೇಶ್
  • ನೆದರ್​ಲ್ಯಾಂಡ್ಸ್​
  • ಸೌತ್ ಆಫ್ರಿಕಾ
  • ಜಿಂಬಾಬ್ವೆ

ಇಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯುವುದರಿಂದ ಸೂಪರ್-12 ಹಂತದಲ್ಲಿ ಗ್ರೂಪ್​ಗಳ ನಡುವೆ ಯಾವುದೇ ಪಂದ್ಯ ನಡೆಯುವುದಿಲ್ಲ. ಅಂದರೆ ಗ್ರೂಪ್-1 ನಲ್ಲಿರುವ ತಂಡಗಳು ಗ್ರೂಪ್-2 ನಲ್ಲಿರುವ ತಂಡಗಳ ವಿರುದ್ಧ ಸೆಣಸುವುದಿಲ್ಲ. ಬದಲಾಗಿ ಎರಡು ಗ್ರೂಪ್​ಗಳ ನಾಲ್ಕು ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲಿದೆ.

ಅಂದರೆ ಇಲ್ಲಿ ಆಯಾ ಗ್ರೂಪ್​ಗಳಿಗೆ ಪಾಯಿಂಟ್ ಟೇಬಲ್​ ಇರಲಿದೆ. ಈ ಪಾಯಿಂಟ್ ಟೇಬಲ್​ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಗ್ರೂಪ್​-1 ಹಾಗೂ ಗ್ರೂಪ್-2 ಪಾಯಿಂಟ್ ಟೇಬಲ್​ನಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆಯುವ 4 ತಂಡಗಳು ಸೆಮಿಫೈನಲ್​ಗೆ ಎಂಟ್ರಿ ಕೊಡಲಿದೆ.

ಟಿ20 ವಿಶ್ವಕಪ್ ಸೆಮಿಫೈನಲ್ ಹೇಗಿರಲಿದೆ?

ಸೆಮಿಫೈನಲ್​ನಲ್ಲಿ ನಾಲ್ಕು ತಂಡಗಳು ವಿರುದ್ಧವಾಗಿ ಸೆಣಸಲಿದೆ. ಅಂದರೆ ಒಂದೇ ಗ್ರೂಪ್​ನಿಂದ ಸೆಮಿಫೈನಲ್​ಗೇರಿದ ಎರಡು ತಂಡಗಳು ಮುಖಾಮುಖಿಯಾಗುವುದಿಲ್ಲ. ಬದಲಾಗಿ ಗ್ರೂಪ್-1 vs ಗ್ರೂಪ್- 2 ತಂಡಗಳ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದೆ.

ಇನ್ನು ಒಂದೇ ಗ್ರೂಪ್​ನಿಂದ ಆಯ್ಕೆಯಾದ ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗಬಹುದು. ಅಂದರೆ ಸೆಮಿಫೈನಲ್​ನಲ್ಲಿ ಪರಸ್ಪರ ವಿರುದ್ಧ ಗ್ರೂಪ್​ನಿಂದ ಆಯ್ಕೆಯಾದ ತಂಡಗಳು ಮುಖಾಮುಖಿಯಾಗುವುದರಿಂದ, ಒಂದೇ ಗ್ರೂಪ್​ನ ಎರಡು ತಂಡಗಳು ಸೆಮಿಫೈನಲ್​ನಲ್ಲಿ ಜಯ ಸಾಧಿಸಿದರೆ ಫೈನಲ್​ಗೇರಬಹುದು. ಈ ಮೂಲಕ ಒಂದೇ ಗ್ರೂಪ್​ನ 2 ತಂಡಗಳು ಫೈನಲ್​ನಲ್ಲಿ ಮತ್ತೆ ಸೆಣಸಿದರೂ ಅಚ್ಚರಿಪಡಬೇಕಿಲ್ಲ.

ಸದ್ಯ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್​ನಲ್ಲಿದ್ದು, ಉಭಯ ತಂಡಗಳು ಸೆಮಿಫೈನಲ್​ಗೇರಿ ಫೈನಲ್​ನಲ್ಲಿ ಮತ್ತೆ ಮುಖಾಮುಖಿಯಾಗಲಿ ಎಂಬುದೇ ಕ್ರಿಕೆಟ್ ಪ್ರೇಮಿಗಳ ಆಶಯ. ಏಕೆಂದರೆ 2007 ರ ಟಿ20 ವಿಶ್ವಕಪ್​ ಬಳಿಕ ಉಭಯ ತಂಡಗಳು ಚುಟುಕು ಕ್ರಿಕೆಟ್ ಕದನದಲ್ಲಿ ಮತ್ತೆ ಫೈನಲ್ ಆಡಿಲ್ಲ. ಹೀಗಾಗಿ ಈ ಬಾರಿ ಫೈನಲ್ ಫೈಟ್​ನಲ್ಲಿ ಮತ್ತೆ ಮುಖಾಮುಖಿಯಾಗಲಿದೆಯಾ ಕಾದು ನೋಡಬೇಕಿದೆ.

 

Published On - 3:42 pm, Sat, 22 October 22