India vs South Africa: ಬಲಿಷ್ಠ ತಂಡಗಳ ಕದನ: ಇಂದು ಗೆಲ್ಲೋದು ಯಾರು?

TV9kannada Web Team

TV9kannada Web Team | Edited By: Zahir PY

Updated on: Oct 30, 2022 | 2:54 PM

T20 World Cup 2022: ಉಭಯ ತಂಡಗಳ ನಡುವಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ.

India vs South Africa: ಬಲಿಷ್ಠ ತಂಡಗಳ ಕದನ: ಇಂದು ಗೆಲ್ಲೋದು ಯಾರು?
India vs South Africa

T20 World Cup 2022:   ಪರ್ತ್​ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ 30ನೇ ಪಂದ್ಯದಲ್ಲಿ ಭಾರತ-ಸೌತ್ ಆಫ್ರಿಕಾ (India vs South Africa) ಮುಖಾಮುಖಿಯಾಗಲಿದೆ. ಸೆಮಿಫೈನಲ್​ ಹಾದಿಯಲ್ಲಿರುವ ಉಭಯ ತಂಡಗಳಿಗೂ ಈ ಪಂದ್ಯವು ತುಂಬಾ ಮಹತ್ವದ್ದು. ಹೀಗಾಗಿ ಇಂದಿನ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಉಭಯ ತಂಡಗಳು ಇದುವರೆಗೆ 23 ಬಾರಿ ಮುಖಾಮುಖಿಯಾಗಿದ್ದು, ಈ ವೇಳೆಯೂ ಭರ್ಜರಿ ಪೈಪೋಟಿ ಕಂಡು ಬಂದಿತ್ತು. ಆದರೆ ಈ ವೇಳೆ ಮೇಲುಗೈ ಸಾಧಿಸಿದ್ದು ಟೀಮ್ ಇಂಡಿಯಾ ಎಂಬುದು ವಿಶೇಷ.

ಅಂದರೆ ಭಾರತ-ಸೌತ್ ಆಫ್ರಿಕಾ ನಡುವಣ 23 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ 13 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು 1 ಪಂದ್ಯವು ರದ್ದಾಗಿತ್ತು. ಹಾಗೆಯೇ ಸೌತ್ ಆಫ್ರಿಕಾ ತಂಡ ಗೆದ್ದಿರುವುದು ಕೇವಲ 9 ಬಾರಿ ಮಾತ್ರ. ಇದಾಗ್ಯೂ ಇತ್ತೀಚೆಗೆ ಭಾರತದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಸರಣಿಯಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಪೈಪೋಟಿ ನೀಡಿತ್ತು. ಅಲ್ಲದೆ 3 ಪಂದ್ಯಗಳ ಸರಣಿಯಲ್ಲಿ 1 ಪಂದ್ಯವನ್ನು ಗೆಲ್ಲುವಲ್ಲಿ ಕೂಡ ಯಶಸ್ವಿಯಾಗಿತ್ತು.

ಇದೀಗ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಎರಡೂ ತಂಡಗಳಿಗೂ ಗೆಲ್ಲುವ ಅವಕಾಶವಿದೆ. ಹೀಗಾಗಿ ಬಲಿಷ್ಠರ ಕದನದಲ್ಲಿ ಕ್ರಿಕೆಟ್​ ಪ್ರೇಮಿಗಳು ರೋಚಕ ಹೋರಾಟವನ್ನು ನಿರೀಕ್ಷಿಸುತ್ತಿದ್ದಾರೆ.

ಇನ್ನು ಉಭಯ ತಂಡಗಳ ನಡುವಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಹಿಟ್​ಮ್ಯಾನ್ 16 ಪಂದ್ಯಗಳಲ್ಲಿ 405 ರನ್ ಗಳಿಸಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು, ಕಿಂಗ್ ಕೊಹ್ಲಿ 12 ಪಂದ್ಯಗಳಲ್ಲಿ 306 ರನ್ ಕಲೆಹಾಕಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೇಲೆ ನಿರೀಕ್ಷೆ ಹೆಚ್ಚಿದೆ.

ಮತ್ತೊಂದೆಡೆ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಟೀಮ್ ಇಂಡಿಯಾದ ಆಟಗಾರರು ಕೂಡ ಉತ್ತಮ ಫಾರ್ಮ್​​ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಹಾಗೂ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿ ಮಿಂಚಿದ್ದರು. ಹಾಗೆಯೇ ಟೀಮ್ ಇಂಡಿಯಾ ಬೌಲರ್​ಗಳು ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಇಂದು ಗೆಲ್ಲುವ ಫೇವರೇಟ್ ತಂಡವಾಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ.

ಭಾರತ ತಂಡ:

ರೋಹಿತ್ ಶರ್ಮಾ (ನಾಯಕ) , ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ , ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ , ಅರ್ಷದೀಪ್ ಸಿಂಗ್ , ರಿಷಭ್ ಪಂತ್ , ದೀಪಕ್ ಹೂಡಾ, ಹರ್ಷಲ್ ಪಟೇಲ್. ಯುಜ್ವೇಂದ್ರ ಚಹಾಲ್.

ಸೌತ್ ಆಫ್ರಿಕಾ ತಂಡ:

ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ (ನಾಯಕ) , ರಿಲೀ ರೊಸ್ಸೊ , ಐಡೆನ್ ಮಾರ್ಕ್ರಾಮ್ , ಟ್ರಿಸ್ಟಾನ್ ಸ್ಟಬ್ಸ್ , ಡೇವಿಡ್ ಮಿಲ್ಲರ್ , ವೇಯ್ನ್ ಪಾರ್ನೆಲ್ , ಕೇಶವ್ ಮಹಾರಾಜ್ , ಕಗಿಸೊ ರಬಾಡ , ಅನ್ರಿಕ್ ನೋಕಿಯಾ, ತಬ್ರೇಝ್ ಶಮ್ಸಿ , ಲುಂಗಿ ಎನ್​ಗಿಡಿ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada