VIDEO : ತೂಫಾನ್ ಸಿಕ್ಸ್​: ಪೊವೆಲ್ ಪವರ್​ಗೆ ಚೆಂಡು ಮೈದಾನದ ಹೊರಕ್ಕೆ..!

| Updated By: ಝಾಹಿರ್ ಯೂಸುಫ್

Updated on: Oct 19, 2022 | 7:24 PM

T20 World Cup 2022: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿತು.

VIDEO : ತೂಫಾನ್ ಸಿಕ್ಸ್​: ಪೊವೆಲ್ ಪವರ್​ಗೆ ಚೆಂಡು ಮೈದಾನದ ಹೊರಕ್ಕೆ..!
Rovman Powell
Follow us on

T20 World Cup 2022: ಟಿ20 ವಿಶ್ವಕಪ್​ನಲ್ಲಿನ ಅರ್ಹತಾ ಸುತ್ತಿನ 8ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ದಾಂಡಿಗ ರೋವ್​ಮನ್ ಪೊವೆಲ್ (Rovman Powell) ಸಿಡಿಸಿದ ಸಿಕ್ಸ್ ಎಲ್ಲರನ್ನೂ ದಂಗಾಗಿಸಿದೆ. ಜಿಂಬಾಬ್ವೆ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ನಿಕೋಲಸ್ ಪೂರನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಜಾನ್ಸನ್ ಚಾರ್ಲ್​ 45 ರನ್​ ಬಾರಿಸುವ ಮೂಲಕ ಉತ್ತಮ ಆರಂಭ ಒದಗಿಸಿದ್ದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕುಸಿತಕ್ಕೊಳಗಾದ ವೆಸ್ಟ್ ಇಂಡೀಸ್ ತಂಡಕ್ಕೆ ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟ್ಸ್​ಮನ್ ರೋವ್​ಮನ್ ಪೊವೆಲ್ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಪೊವೆಲ್ ಕೊನೆಯ ಓವರ್​ ವೇಳೆ ಅಬ್ಬರಿಸಿದರು.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಬ್ಲೆಸಿಂಗ್ಸ್ ಮುಜರಬಾನಿ ಎಸೆದ 20ನೇ ಓವರ್​ನ 3ನೇ ಎಸೆತದಲ್ಲಿ ರೋವ್​ಮನ್ ಪೊವೆಲ್ ತಮ್ಮ ಮಸಲ್ ಪವರ್ ತೋರಿಸುವ ಮೂಲಕ ಪ್ರೇಕ್ಷಕರನ್ನು ದಂಗಾಗಿಸಿದರು. ಮುಜರಬಾನಿ ಎಸೆದ ಲೆಂಗ್ತ್ ಬಾಲ್ ಅನ್ನು ಸ್ಕ್ವೇರ್ ಲೆಗ್ ಓವರ್‌ನಲ್ಲಿ ಪೊವೆಲ್ ಭರ್ಜರಿ ಸಿಕ್ಸ್ ಸಿಡಿಸಿದರು. ಅಚ್ಚರಿ ಎಂದರೆ ಪೊವೆಲ್ ಪವರ್​ಗೆ ಚೆಂಡು ಮೈದಾನದಿಂದ ಹೊರಕ್ಕೆ ಹೋಗಿ ಬಿತ್ತು. ನಾನ್​ ಸ್ಟ್ರೈಕ್​ನಲ್ಲಿ ಅಕೆಲ್ ಹೊಸೈನ್ ಈ ಸ್ಪೋಟಕ ಸಿಕ್ಸ್ ನೋಡಿ ದಿಗ್ಭ್ರಮೆಗೊಂಡರು.

ಇದೀಗ ಈ ತೂಫಾನ್ ಸಿಕ್ಸ್​ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಪೊವೆಲ್ ಪವರ್​ಗೆ ಅಭಿಮಾನಿಗಳು ತಲೆದೂಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿತು. ಈ ಸಾಧಾರಣ ಸವಾಲು ಬೆನ್ನತ್ತಿದ ಜಿಂಬಾಬ್ವೆ ತಂಡವು 18.2 ಓವರ್​ಗಳಲ್ಲಿ 122 ರನ್​ಗಳಿಗೆ ಆಲೌಟ್ ಆಗುವ ಮೂಲಕ 31 ರನ್​ಗಳಿಂದ ಸೋಲೊಪ್ಪಿಕೊಂಡಿತು.