T20 World Cup 2022: ಟಿ20 ವಿಶ್ವಕಪ್​ಗೂ ಮುನ್ನ ಭಾರತ-ಸೌತ್ ಆಫ್ರಿಕಾಗೆ ಫ್ರೀ ಹಿಟ್..!

| Updated By: ಝಾಹಿರ್ ಯೂಸುಫ್

Updated on: Sep 28, 2022 | 1:32 PM

T20 World Cup 2022: ಸೌತ್ ಆಫ್ರಿಕಾ ತಂಡವನ್ನು ಸೋಲಿಸುವುದು ಕೂಡ ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಕಳೆದ ಬಾರಿ ಟೀಮ್ ಇಂಡಿಯಾ ವಿರುದ್ದ ಆಡಿದ ಟಿ20 ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡವು 2-2 ಅಂತರದಿಂದ ಸಮಬಲಗೊಳಿಸಿತ್ತು.

T20 World Cup 2022: ಟಿ20 ವಿಶ್ವಕಪ್​ಗೂ ಮುನ್ನ ಭಾರತ-ಸೌತ್ ಆಫ್ರಿಕಾಗೆ ಫ್ರೀ ಹಿಟ್..!
India vs South Africa
Follow us on

India vs South Africa: ಭಾರತ-ಸೌತ್ ಆಫ್ರಿಕಾ ನಡುವಣ ಟಿ20 ಸರಣಿಯು ಬುಧವಾರದಿಂದ (ಸೆ.28) ಶುರುವಾಗಲಿದೆ. 3 ಪಂದ್ಯಗಳ ಟಿ20 ಸರಣಿಯು ಉಭಯ ತಂಡಗಳ ಪಾಲಿಗೂ ತುಂಬಾ ಮಹತ್ವದ್ದು. ಏಕೆಂದರೆ ಈ ಸರಣಿಯ ಬೆನ್ನಲ್ಲೇ 2 ತಂಡಗಳು ಟಿ20 ವಿಶ್ವಕಪ್​ಗಾಗಿ ಸಜ್ಜಾಗಲಿದೆ. ಅದರಲ್ಲೂ ಟೀಮ್ ಇಂಡಿಯಾ (Team India) ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಹೀಗಾಗಿ ಸರಣಿ ಗೆಲುವಿನೊಂದಿಗೆ ಅತ್ಯುತ್ಸಾಹದೊಂದಿಗೆ ಕಾಂಗರೂ ನಾಡಿಗೆ ತೆರಳಲು ಭಾರತ ತಂಡ ಪ್ಲ್ಯಾನ್ ರೂಪಿಸಿದೆ. ಈ ಮೂರು ಪಂದ್ಯಗಳು ಎರಡೂ ತಂಡಗಳ ಪಾಲಿಗೆ ಮಹತ್ವದ್ದೆನಿಸಿಕೊಳ್ಳಲು ಮತ್ತೊಂದು ಕಾರಣ ಕೂಡ ಇದೆ. ಅದೇನೆಂದರೆ ಟಿ20 ವಿಶ್ವಕಪ್​ ಪಂದ್ಯಾಟ. ಅಂದರೆ ಟಿ20 ವಿಶ್ವಕಪ್​ನಲ್ಲಿ ಭಾರತ -ಸೌತ್ ಆಫ್ರಿಕಾ ತಂಡಗಳು ಒಂದೇ ಗ್ರೂಪ್​ನಲ್ಲಿದೆ. ಹೀಗಾಗಿ ಎರಡೂ ತಂಡಗಳು ಮೊದಲ ಸುತ್ತಿನಲ್ಲೇ ಮುಖಾಮುಖಿಯಾಗಲಿದೆ.

ಅದರಂತೆ ಅಕ್ಟೋಬರ್ 30 ರಂದು ಪರ್ತ್​ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಪಂದ್ಯದಲ್ಲಿ ಭಾರತ – ಸೌತ್ ಆಫ್ರಿಕಾ ತಂಡಗಳು ಸೆಣಸಲಿದೆ. ಅಂದರೆ ಮೊದಲ ಸುತ್ತಿನ 5 ಪಂದ್ಯಗಳಲ್ಲಿ ಟೀಮ್ ಇಂಡಿಯಾ 3ನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಬಹುದು. ಹೀಗಾಗಿ ತವರಿನಲ್ಲೇ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿಯುವ ಮೂಲಕ ಮೇಲುಗೈ ಸಾಧಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.

ಆದರೆ ಸೌತ್ ಆಫ್ರಿಕಾ ತಂಡವನ್ನು ಸೋಲಿಸುವುದು ಕೂಡ ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಕಳೆದ ಬಾರಿ ಟೀಮ್ ಇಂಡಿಯಾ ವಿರುದ್ದ ಆಡಿದ ಟಿ20 ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡವು 2-2 ಅಂತರದಿಂದ ಸಮಬಲಗೊಳಿಸಿತ್ತು. ಹೀಗಾಗಿ ಈ ಬಾರಿ ಕೂಡ ಅಂತಹದ್ದೇ ಭರ್ಜರಿ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಈ ಮೂಲಕ ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾಗೆ ಸೋಲುಣಿಸಿ ಮೇಲುಗೈ ಸಾಧಿಸುವ ತವಕದಲ್ಲಿದೆ. ಅಂದರೆ ಉಭಯ ತಂಡಗಳಿಗೂ ಈ ಸರಣಿಯು ಒಂದಾರ್ಥದಲ್ಲಿ ಟಿ20 ವಿಶ್ವಕಪ್​ ಮುನ್ನ ಸಿಕ್ಕ ಫ್ರೀ ಹಿಟ್ ಪಂದ್ಯಗಳು ಎಂದರೆ ತಪ್ಪಾಗಲಾರದು. ಇದೇ ಕಾರಣದಿಂದಾಗಿ ಇದೀಗ ಭಾರತ-ಸೌತ್ ಆಫ್ರಿಕಾ ನಡುವಣ ಟಿ20 ಸರಣಿಯು ತುಂಬಾ ಮಹತ್ವ ಪಡೆದುಕೊಂಡಿದೆ. ಅದರಂತೆ ಈ ಸರಣಿಯಲ್ಲಿ  ಗೆದ್ದು ಯಾರು ಮೇಲುಗೈ ಸಾಧಿಸಲಿದ್ದಾರೆ ಕಾದು ನೋಡಬೇಕಿದೆ.

ಭಾರತ ಟಿ20 ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಶಹಬಾಜ್ ಅಹ್ಮದ್, ಜಸ್ಪ್ರೀತ್ ಬುಮ್ರಾ.

ದಕ್ಷಿಣ ಆಫ್ರಿಕಾ ಟಿ20 ತಂಡ:

ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಕ್ ನೋಕಿಯಾ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲಿ ರೊಸೊ, ತಬ್ರೇಝ್ ಶಂಸಿ, ಟ್ರಿಸ್ಟಾನ್ ಸ್ಟಬ್ಸ್.

ಟಿ20 ವಿಶ್ವಕಪ್ ಟೀಮ್ ಇಂಡಿಯಾ ವೇಳಾಪಟ್ಟಿ:

  • ಅಕ್ಟೋಬರ್-23 : ಭಾರತ vs ಪಾಕಿಸ್ತಾನ – ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
  • ಅಕ್ಟೋಬರ್-27: ಭಾರತ vs ಅರ್ಹತಾ ಸುತ್ತಿನ A ಗ್ರೂಪ್​ನ ರನ್ನರ್​ ಅಪ್ ತಂಡ – ಸಿಡ್ನಿ ಕ್ರಿಕೆಟ್ ಸ್ಟೇಡಿಯಂ
  • ಅಕ್ಟೋಬರ್- 30: ಭಾರತ vs ದಕ್ಷಿಣ ಆಫ್ರಿಕಾ – ಪರ್ತ್ ಸ್ಟೇಡಿಯಂ
  • ನವೆಂಬರ್-2: ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್
  • ನವೆಂಬರ್-6: ಭಾರತ vs ಅರ್ಹತಾ ಸುತ್ತಿನ B ಗ್ರೂಪ್​ನ ​ವಿನ್ನರ್ ತಂಡ