
ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಟಿ20 ವಿಶ್ವಕಪ್ (T20 World Cup 2024) ಪಂದ್ಯಕ್ಕಾಗಿ ಪ್ರಪಂಚದಾದ್ಯಂತದ ಅಭಿಮಾನಿಗಳು ಕಾಯುತ್ತಿದ್ದಾರೆ. ಭಾನುವಾರ ನ್ಯೂಯಾರ್ಕ್ನ ನಸ್ಸೌ ಸ್ಟೇಡಿಯಂನಲ್ಲಿ (Nassau County International Cricket Stadium) ನಡೆಯಲಿರುವ ಈ ಪಂದ್ಯಕ್ಕೆ ಬೀದಿ ಬೀದಿಗಳಿಂದ ಹಿಡಿದು ಸೋಶಿಯಲ್ ಮೀಡಿಯಾದಲ್ಲೂ ಕ್ರೇಜ್ ಹೆಚ್ಚಿದೆ. ಈ ನಡುವೆ ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಗಳ (Memes Viral) ವಾರ್ ಶುರುವಾಗಿದೆ. ಅದರಲ್ಲಿ ಒಂದಿಷ್ಟು ಮೀಮ್ಸ್ಗಳ ಝಲಕ್ ಇಲ್ಲಿದೆ.
ಭಾರತ ಹಾಗೂ ಪಾಕ್ ಆಟಗಾರರಿಗೆ ಸಂಬಂಧಿಸಿದಂತೆ ವೈರಲ್ ಆಗುತ್ತಿರುವ ಮೀಮ್ಸ್ಗಳಲ್ಲಿ ಒಂದು ಮೀಮ್ ಸಾಕಷ್ಟು ವೈರಲ್ ಆಗಿದೆ. ಇದರಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಆಝಂ, ಟೀಂ ಇಂಡಿಯಾ ಆಟಗಾರರ ದಾಳಿಗೆ ಹೆದರಿ ಸೈಕಲ್ ಏರಿ ಪರಾರಿಯಾಗುತ್ತಿರುವುದನ್ನು ಕಾಣಬಹುದಾಗಿದೆ. ಹೆದರಿ ಹೊಡುತ್ತಿರುವ ಬಾಬರ್ ಅವರನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾದ ಇತರ ಆಟಗಾರರು ಬೆನ್ನಟ್ಟಿದ್ದಾರೆ. ಉಪನಾಯಕ ವಿರಾಟ್ ಕೊಹ್ಲಿ ಎಸ್ಯುವಿ ಕಾರಲ್ಲಿ ಬಾಬರ್ ಅವರನ್ನು ಬೆನ್ನಟ್ಟಿದ್ದು, ಕೊಹ್ಲಿ ಕೈಯಲ್ಲಿ ಕೊಡಲಿಯನ್ನು ಕಾಣಬಹುದಾಗಿದೆ. ಈ ಎಸ್ಯುವಿಯಲ್ಲಿ ಮೊಹಮ್ಮದ್ ಸಿರಾಜ್ ಡ್ರೈವರ್ ಸೀಟಿನಲ್ಲಿ ಕುಳಿತಿರುವುದನ್ನು ಕಾಣಬಹುದು.ಈ ಫನ್ನಿ ಮೀಮ್ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಇದೇ ರೀತಯ ಹಲವು ಮೀಮ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಎರಡು ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ, ತಂಡಗಳು ಐಸಿಸಿ ಅಥವಾ ದೊಡ್ಡ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಹಲವು ವರ್ಷಗಳಿಂದ ಉಭಯ ದೇಶಗಳ ನಡುವೆ ಯಾವುದೇ ಪಂದ್ಯಾವಳಿ ನಡೆದಿಲ್ಲ. 2012-ರಲ್ಲಿ ಕೊನೆಯ ಬಾರಿಗೆ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿತ್ತು. ಆ ವೇಳೆ ಪಾಕಿಸ್ತಾನ ತಂಡ ಭಾರತ ಪ್ರವಾಸಕ್ಕೆ ಬಂದಿದ್ದು, ಎರಡು ಪಂದ್ಯಗಳ ಟಿ20 ಸರಣಿಯನ್ನು 1-1ರಿಂದ ಡ್ರಾ ಮಾಡಿಕೊಂಡಿದ್ದವು. ಆ ಬಳಿಕ ನಡೆದ ಏಕದಿನ ಸರಣಿಯನ್ನು ಪಾಕಿಸ್ತಾನ 2-1ರಿಂದ ಗೆದ್ದುಕೊಂಡಿತು.
ಇನ್ನು ಉಭಯ ತಂಡಗಳ ನಡುವೆ ಇದುವರೆಗೆ ನಡೆದಿರುವ ಟಿ20 ಮುಖಾಮುಖಿಯಲ್ಲಿ, ಭಾರತ ಯಾವಾಗಲೂ ಮೇಲುಗೈ ಸಾಧಿಸಿದೆ. ಆಡಿರುವ 12 ಪಂದ್ಯಗಳಲ್ಲಿ ಭಾರತ 9ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ತಂಡ ಕೇವಲ 3 ಪಂದ್ಯಗಳನ್ನು ಗೆಲ್ಲಲು ಶಕ್ತವಾಗಿದೆ. ಕಳೆದ ಟಿ20 ವಿಶ್ವಕಪ್ನಲ್ಲಿ ಭಾರತ 4 ವಿಕೆಟ್ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಇದರಲ್ಲಿ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 82 ರನ್ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ