T20 World Cup 2024: ಭಾರತ- ಪಾಕ್ ಪಂದ್ಯಕ್ಕೆ ಮಳೆಯ ಆತಂಕ; ಪಂದ್ಯ ರದ್ದಾಗುವ ಭೀತಿಯಲ್ಲಿ ಫ್ಯಾನ್ಸ್..!

T20 World Cup 2024, New York Weather, June 9: ಹವಾಮಾನ ಮುನ್ಸೂಚನೆಯ ಪ್ರಕಾರ ಜೂನ್ 9ರ ಭಾನುವಾರದಂದು ಶೇ.42ರಷ್ಟು ಮಳೆಯಾಗುವ ಸಾಧ್ಯತೆ ಇದೆ. ತಾಪಮಾನವು ಸುಮಾರು 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ತೇವಾಂಶವು 58% ಆಗಿರುತ್ತದೆ. ಮಳೆಯಿಂದಾಗಿ ಟಾಸ್ ವಿಳಂಬವಾಗಬಹುದು.

T20 World Cup 2024: ಭಾರತ- ಪಾಕ್ ಪಂದ್ಯಕ್ಕೆ ಮಳೆಯ ಆತಂಕ; ಪಂದ್ಯ ರದ್ದಾಗುವ ಭೀತಿಯಲ್ಲಿ ಫ್ಯಾನ್ಸ್..!
ಭಾರತ- ಪಾಕಿಸ್ತಾನ
Follow us
|

Updated on: Jun 08, 2024 | 10:24 PM

ಟಿ20 ವಿಶ್ವಕಪ್​ನ (T20 World Cup 2024) ಅತಿ ದೊಡ್ಡ ಪಂದ್ಯ ನಾಳೆ ಅಂದರೆ ಜೂನ್ 9 ರ ಭಾನುವಾರದಂದು ನ್ಯೂಯಾರ್ಕ್‌ನ ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ (Nassau County International Cricket Stadium) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯುತ್ತಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ವಿಶ್ವದಾದ್ಯಂತ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಟೂರ್ನಿಯಲ್ಲಿ ಭಾರತ ಗೆಲುವಿನ ಶುಭಾರಂಭ ಮಾಡಿದ್ದರೆ, ಪಾಕಿಸ್ತಾನ ತಂಡ ಸೋಲಿನ ಆಘಾತ ಎದುರಿಸಿದೆ. ಹೀಗಾಗಿ ಲೀಗ್​ನಲ್ಲಿ ಉಳಿಯಲು ಪಾಕ್ ತಂಡ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಇತ್ತ ಟೀಂ ಇಂಡಿಯಾ, ಪಾಕ್ ವಿರುದ್ಧ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಲು ನೋಡುತ್ತಿದೆ. ಆದರೆ ಈ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದ್ದು, ಮಳೆಯಿಂದಾಗಿ ಸಂಪೂರ್ಣ 20 ಓವರ್‌ಗಳ ಪಂದ್ಯ ನಡೆಯದಿರುವ ಸಾಧ್ಯತೆಯೂ ಇದೆ.

ಹವಾಮಾನ ವರದಿ

ಈ ಬಿಗ್ ಮ್ಯಾಚ್ ನ್ಯೂಯಾರ್ಕ್​ನ ನಸ್ಸೌ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪೈಪೋಟಿ ವಿಶ್ವದ ಅತಿದೊಡ್ಡ ಪೈಪೋಟಿಗಳಲ್ಲಿ ಒಂದಾಗಿದೆ. ಪಂದ್ಯವು ಬೆಳಿಗ್ಗೆ 10:30 ಕ್ಕೆ (ಭಾರೀಯ ಕಾಲಮಾನ ರಾತ್ರಿ 8 ಗಂಟೆಗೆ) ಪ್ರಾರಂಭವಾಗುತ್ತದೆ. ಹವಾಮಾನ ಇಲಾಖೆಯ ಪ್ರಕಾರ, ಟಾಸ್ ಸಮಯದಲ್ಲಿ 40% ರಿಂದ 50% ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಮಳೆಯಾಗುವ ಸಾಧ್ಯತೆ 10% ಕ್ಕೆ ಇಳಿಯಲಿದೆ.

ಹವಾಮಾನ ಮುನ್ಸೂಚನೆಯ ಪ್ರಕಾರ ಜೂನ್ 9ರ ಭಾನುವಾರದಂದು ಶೇ.42ರಷ್ಟು ಮಳೆಯಾಗುವ ಸಾಧ್ಯತೆ ಇದೆ. ತಾಪಮಾನವು ಸುಮಾರು 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ತೇವಾಂಶವು 58% ಆಗಿರುತ್ತದೆ. ಮಳೆಯಿಂದಾಗಿ ಟಾಸ್ ವಿಳಂಬವಾಗಬಹುದು. ಆದರೆ ಹವಾಮಾನ ಇಲಾಖೆ ಪ್ರಕಾರ, ಪಂದ್ಯವನ್ನು ನಿಗದಿತ ಸಮಯಕ್ಕೆ ಆಡಬಹುದು ಎಂದು ಹೇಳಲಾಗಿದೆ.

T20 World Cup 2024: ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಫನ್ನಿ ಮೀಮ್ಸ್ ವೈರಲ್

ಉಭಯ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ: ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಆಝಂ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾ ಆಫ್ರಿದಿ, ಉಸ್ಮಾನ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಕಾಸರಗೋಡಿನಲ್ಲಿ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು
ಕಾಸರಗೋಡಿನಲ್ಲಿ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು
ವಿಭಿನ್ನತೆಯಿಂದಲೇ ಜನರ ಮನ ಗೆದ್ದ ಈ ಕೋಳಿಯನ್ನೊಮ್ಮೆ ನೋಡಿ
ವಿಭಿನ್ನತೆಯಿಂದಲೇ ಜನರ ಮನ ಗೆದ್ದ ಈ ಕೋಳಿಯನ್ನೊಮ್ಮೆ ನೋಡಿ
ಬಸ್​​ಲ್ಲಿ ಸಿಕ್ತು 2.5 ಲಕ್ಷ ರೂ ಹಣ: ಹಿಂದಿರುಗಿಸಿದ KSRTC ಸಿಬ್ಬಂದಿ
ಬಸ್​​ಲ್ಲಿ ಸಿಕ್ತು 2.5 ಲಕ್ಷ ರೂ ಹಣ: ಹಿಂದಿರುಗಿಸಿದ KSRTC ಸಿಬ್ಬಂದಿ
ದರ್ಶನ್ ಅಂಧಾಭಿಮಾನಿ ಜೊತೆಗಿನ ಫೋನ್ ಮಾತುಕತೆ ಬಿಚ್ಚಿಟ್ಟ ಪ್ರಥಮ್
ದರ್ಶನ್ ಅಂಧಾಭಿಮಾನಿ ಜೊತೆಗಿನ ಫೋನ್ ಮಾತುಕತೆ ಬಿಚ್ಚಿಟ್ಟ ಪ್ರಥಮ್
ನಭೋ ಮಂಡಲದಲ್ಲಿ ವಿಸ್ಮಯ, ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲಿನ ಉಂಗುರ
ನಭೋ ಮಂಡಲದಲ್ಲಿ ವಿಸ್ಮಯ, ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲಿನ ಉಂಗುರ
KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವ
KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವ
ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!
ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!