SA vs NED: ಆಫ್ರಿಕಾ ತಂಡಕ್ಕೆ ಸೋಲಿನ ಭಯ ಹುಟ್ಟಿಸಿ ಸೋತ ಡಚ್ಚರು..!

T20 World Cup 2024: ಟಿ20 ವಿಶ್ವಕಪ್‌ನ 16ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಿದ್ದ ದಕ್ಷಿಣ ಆಫ್ರಿಕಾ ತಂಡ,'ಕಿಲ್ಲರ್' ಮಿಲ್ಲರ್ ಅವರ ಅದ್ಭುತ ಅರ್ಧಶತಕದ ಇನಿಂಗ್ಸ್‌ನ ಆಧಾರದ ಮೇಲೆ ಡಚ್ಚರನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ.

SA vs NED: ಆಫ್ರಿಕಾ ತಂಡಕ್ಕೆ ಸೋಲಿನ ಭಯ ಹುಟ್ಟಿಸಿ ಸೋತ ಡಚ್ಚರು..!
ದಕ್ಷಿಣ ಆಫ್ರಿಕಾ ತಂಡ
Follow us
|

Updated on:Jun 08, 2024 | 11:54 PM

ಟಿ20 ವಿಶ್ವಕಪ್‌ನ (T20 World Cup 2024) 16ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಿದ್ದ ದಕ್ಷಿಣ ಆಫ್ರಿಕಾ ತಂಡ (Netherlands vs South Africa),’ಕಿಲ್ಲರ್’ ಮಿಲ್ಲರ್ ಅವರ ಅದ್ಭುತ ಅರ್ಧಶತಕದ ಇನಿಂಗ್ಸ್‌ನ ಆಧಾರದ ಮೇಲೆ ಡಚ್ಚರನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತು. ಉತ್ತರವಾಗಿ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 18.5 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಪ್ರಯಾಸದ ಗೆಲುವು ದಾಖಲಿಸಿತು. ಆಫ್ರಿಕಾ ಪರ ಅದ್ಭುತ ಇನ್ನಿಂಗ್ಸ್ ಆಡಿದ ಮಿಲ್ಲರ್ (David Miller) 51 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 59 ರನ್​ಗಳಿಸಿ ಅಜೇಯರಾಗಿ ಉಳಿದರು. ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ಸೋತರೂ, ಗೆಲುವಿಗಾಗಿ ಈ ತಂಡ ನೀಡಿದ ಹೋರಾಟ ಎಲ್ಲರನ್ನು ಬೆರಗಗೊಳಿಸಿತು ಎಂದರೆ ತಪ್ಪಾಗಲಾರದು.

ನೆದರ್ಲೆಂಡ್ಸ್ ಕಳಪೆ ಆರಂಭ

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ವೇಗಿ ಮಾರ್ಕೊ ಯಾನ್ಸೆನ್, ಆರಂಭಿಕ ಮೈಕಲ್ ಲೆವಿಟ್ (0) ಮತ್ತು ವಿಕ್ರಮಜೀತ್ ಸಿಂಗ್ (12) ಅವರನ್ನು ಬಹುಬೇಗನೇ ಪೆವಿಲಿಯನ್​ಗೆ ಕಳುಹಿಸಿದರು. ಅದೇ ವೇಳೆಗೆ ಕಳೆದ ಪಂದ್ಯದ ಹೀರೋ ಎನಿಸಿಕೊಂಡಿದ್ದ ಮ್ಯಾಕ್ಸ್ ಒಡೌಡ್ ಎರಡು ರನ್ ಗಳಿಸಿ ಓಟ್ನಿಯಲ್ ಬಾರ್ಟ್​ಮನ್​ಗೆ ಬಲಿಯಾದರು. ಬಾಸ್ ಡಿ ಲೀಡೆ ಅವರನ್ನು ಆನ್ರಿಚ್ ನೋಕಿಯಾ ಪೆವಿಲಿಯನ್‌ಗೆ ಕಳುಹಿಸಿದರು. ನಾಯಕ ಸ್ಕಾಟ್ ಎಡ್ವರ್ಡ್ಸ್ 10 ರನ್​ಗಳಿಗೆ ಸುಸ್ತಾದರೆ, ತೇಜ ನಿಡುಮನೂರ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಬಾರ್ಟ್‌ಮ್ಯಾನ್ ಮಾರಕ ದಾಳಿ

ಹೀಗಾಗಿ ಕೇವಲ 48 ರನ್ ಗಳಿಸುವಷ್ಟರಲ್ಲಿ ತಂಡ ಆರು ವಿಕೆಟ್ ಕಳೆದುಕೊಂಡಿತ್ತು. ಇದರ ನಂತರ ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ ಏಳನೇ ವಿಕೆಟ್‌ಗೆ ಲೋಗನ್ ವ್ಯಾನ್ ಬೀಕ್ ಅವರೊಂದಿಗೆ 54 ರನ್ ಜೊತೆಯಾಟವನ್ನು ಮಾಡಿದರು. ಇದರಿಂದಾಗಿ ನೆದರ್ಲೆಂಡ್ಸ್‌ ತಂಡ 100 ರ ಗಡಿ ದಾಟಿತು. ಎಂಗಲ್‌ಬ್ರೆಕ್ಟ್ ಅವರ ವಿಕೆಟ್ ಪಡೆಯುವ ಮಾಡುವ ಮೂಲಕ ಬಾರ್ಟ್‌ಮ್ಯಾನ್ ಈ ಪಾಲುದಾರಿಕೆಯನ್ನು ಮುರಿದರು. ಎಂಗಲ್‌ಬ್ರೆಕ್ಟ್ 45 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಔಟಾದರು. ಕೊನೆಯಲ್ಲಿ ವ್ಯಾನ್ ಬೀಕ್ 22 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 23 ರನ್ ಗಳಿಸಿದರು.

ಮತ್ತೆ ವೇಗಿಗಳ ಮೇಲುಗೈ

ನಿರೀಕ್ಷೆಯಂತೆ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಮತ್ತೊಮ್ಮೆ ವೇಗದ ಬೌಲರ್‌ಗಳ ಪರಾಕ್ರಮ ಕಂಡುಬಂತು. ನೆದರ್ಲೆಂಡ್ಸ್‌ ತಂಡದ ಒಂಬತ್ತು ವಿಕೆಟ್‌ಗಳಲ್ಲಿ ಎಂಟು ಆಫ್ರಿಕನ್ ವೇಗದ ಬೌಲರ್‌ಗಳ ಪಾಲಾದವು. ಇದರಲ್ಲಿ ಒಟ್ನಿಯಲ್ ಬಾರ್ಟ್‌ಮನ್ ಒಬ್ಬರೇ ನಾಲ್ಕು ವಿಕೆಟ್ ಪಡೆದರು. ಉಳಿದಂತೆ ಮಾರ್ಕೊ ಯಾನ್ಸೆನ್ ಮತ್ತು ಎನ್ರಿಕ್ ನೋಕಿಯಾ ತಲಾ ಎರಡು ವಿಕೆಟ್ ಪಡೆದರು.

ಆಫ್ರಿಕಾಗೆ ಪ್ರಯಾಸದ ಗೆಲುವು

ನೆದರ್ಲೆಂಡ್ಸ್‌ ನೀಡಿದ 103 ರನ್​ಗಳ ಸುಲಭ ಗುರಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ ಪೆವಿಲಿಯನ್ ಪರೇಡ್ ಆರಂಭಿಸಿತು. ತಂಡ ಕೇವಲ 12 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಮಾರ್ಕ್ರಾಮ್ ಪಡೆ ಸೋಲಿನ ಸುಳಿಗೆ ಸಿಲುಕಿಕೊಂಡಿತ್ತು. ಆದಾಗ್ಯೂ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಡೇವಿಡ್ ಮಿಲ್ಲರ್ ಐದನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು ಸಂಕಷ್ಟದಿಂದ ಹೊರಗೆಳೆದರು. ನಂತರ ಮಿಲ್ಲರ್, ಯಾನ್ಸೆನ್ ಮತ್ತು ಕೇಶವ್ ಮಹಾರಾಜ್ ಅವರೊಂದಿಗೆ ಸಣ್ಣ ಪಾಲುದಾರಿಕೆಗಳನ್ನು ಮಾಡಿ ವಿಜಯಕ್ಕೆ ಕಾರಣರಾದರು.

ತತ್ತರಿಸಿದ ಆಫ್ರಿಕಾ ಟಾಪ್ ಆರ್ಡರ್

ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರೀಜಾ ಹೆಂಡ್ರಿಕ್ಸ್ ಮೂರು ರನ್ ಗಳಿಸಿ ಔಟಾದರೆ, ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಏಡೆನ್ ಮಾರ್ಕ್ರಾಮ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೆನ್ರಿಕ್ ಕ್ಲಾಸೆನ್ ನಾಲ್ಕು ರನ್​ಗಳಿಗೆ ಸುಸ್ತಾದರು. ಸ್ಟಬ್ಸ್ 37 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 33 ರನ್ ಬಾರಿಸಿದರೆ, ಮಿಲ್ಲರ್ 59 ರನ್ ಗಳಿಸಿ ಅಜೇಯರಾಗಿ ಉಳಿದರು. ನೆದರ್ಲೆಂಡ್ಸ್ ಪರ ವಿವಿಯನ್ ಕಿಂಗ್ಮಾ ಮತ್ತು ಲೋಗನ್ ವ್ಯಾನ್ ಬೀಕ್ ತಲಾ ಎರಡು ವಿಕೆಟ್ ಪಡೆದರೆ ಬಾಸ್ ಡಿ ಲೀಡೆ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:38 pm, Sat, 8 June 24

ತಾಜಾ ಸುದ್ದಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ