T20 World Cup 2024: ಪಾಕ್ ವಿರುದ್ಧ ಭಾರತದ ಆರಂಭಿಕ ಜೋಡಿ ಬದಲಾಗುತ್ತಾ? ನಾಯಕ ರೋಹಿತ್ ಹೇಳಿದ್ದಿದು

T20 World Cup 2024 IND vs PAK: ಪಂದ್ಯಕ್ಕೆ ಒಂದು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಇಡೀ ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಆರಂಭಿಕರನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಆದರೆ ಇತರ ಸ್ಥಳಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

T20 World Cup 2024: ಪಾಕ್ ವಿರುದ್ಧ ಭಾರತದ ಆರಂಭಿಕ ಜೋಡಿ ಬದಲಾಗುತ್ತಾ? ನಾಯಕ ರೋಹಿತ್ ಹೇಳಿದ್ದಿದು
ರೋಹಿತ್, ಕೊಹ್ಲಿ
Follow us
|

Updated on:Jun 08, 2024 | 11:26 PM

ಟಿ20 ವಿಶ್ವಕಪ್ 2024 (T20 World Cup 2024) ರ ಪ್ರಮುಖ ಪಂದ್ಯ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಾಳೆ ಅಂದರೆ, ಜೂನ್ 9 ಭಾನುವಾರ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ (Nassau County International Cricket Stadium) ನಡೆಯಲಿದೆ. ಎಂದಿನಂತೆ ಈ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಎರಡೂ ತಂಡಗಳು ಈ ಪಂದ್ಯವನ್ನು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಲಿವೆ. ಟಿ20 ವಿಶ್ವಕಪ್ ನಲ್ಲಿ ಈಗಾಗಲೇ 6 ಬಾರಿ ಪಾಕಿಸ್ತಾನವನ್ನು ಮಣಿಸಿರುವ ಭಾರತ ತಂಡ ಏಳನೇ ಬಾರಿ ಈ ಸಾಧನೆ ಮಾಡಲು ಪ್ರಯತ್ನಿಸಲಿದೆ. ಆದಾಗ್ಯೂ, ಈ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ ಹೇಗಿರಲಿದೆ? ತಂಡದಲ್ಲಿ ಯಾವುದಾದರು ಬದಲಾವಣೆಗಳಲ್ಲಿವೆಯೇ? ಅದರಲ್ಲೂ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ವಿಫಲರಾಗಿದ್ದ ಕೊಹ್ಲಿ ಬದಲು ಜೈಸ್ವಾಲ್ ಓಪನಿಂಗ್‌ಗೆ ಮರಳುತ್ತಾರಾ? ಎಂಬ ಪ್ರಶ್ನೆಗಳು ಮೂಡಿವೆ. ಆದರೆ ಈ ಪ್ರಶ್ನೆಗಳಿಗೆಲ್ಲ ಉತ್ತರ ನೀಡುವ ಕೆಲಸವನ್ನು ನಾಯಕ ರೋಹಿತ್ ಶರ್ಮಾ (Rohit Sharma) ಮಾಡಿದ್ದಾರೆ.

ಆರಂಭಿಕರು ಬದಲಾಗ್ತಾರಾ?

ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವನ್ನು ಟೀಂ ಇಂಡಿಯಾ ಕೇವಲ 96 ರನ್‌ಗಳಿಗೆ ಆಲೌಟ್ ಮಾಡಿತ್ತು. ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ವಿರಾಟ್ ಕೊಹ್ಲಿ ಒಂದಂಕಿಗೆ ಸುಸ್ತಾದರು. ಸೂರ್ಯಕುಮಾರ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲ್ಲಿಲ್ಲ. ಈ ಇಬ್ಬರ ವೈಫಲ್ಯದ ಹೊರತಾಗಿಯೂ ಭಾರತ, ನಾಯಕ ರೋಹಿತ್ ಶರ್ಮಾರ ಅರ್ಧಶತಕ ಹಾಗೂ ರಿಷಬ್ ಪಂತ್ ಸಿಡಿಸಿದ 36 ರನ್​ಗಳಿಂದ ತಂಡ ಸುಲಭವಾಗಿ ಜಯ ಸಾಧಿಸಿತ್ತು. ಆದರೆ ಇದೀಗ ಪಾಕಿಸ್ತಾನದಂತಹ ಬಲಿಷ್ಠ ತಂಡದೆದುರು ಟೀಂ ಇಂಡಿಯಾ ಇದೇ ರೀತಿ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ತಂಡಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ಆರಂಭಿಕರಾಗಿ ಜೈಸ್ವಾಲ್​ರನ್ನು ಕಣಕ್ಕಿಳಿಸಬೇಕು ಎಂಬುದು ಅಭಿಮಾನಿಗಳ ಅಭಿಪ್ರಾಯ. ಆದರೆ ಇದಕ್ಕೆ ರೋಹಿತ್ ಶರ್ಮಾ ನೀಡಿದ ಉತ್ತರ ಹೀಗಿತ್ತು.

T20 World Cup 2024: ಭಾರತ- ಪಾಕ್ ಪಂದ್ಯಕ್ಕೆ ಮಳೆಯ ಆತಂಕ; ಪಂದ್ಯ ರದ್ದಾಗುವ ಭೀತಿಯಲ್ಲಿ ಫ್ಯಾನ್ಸ್..!

ಆರಂಭಿಕರಲ್ಲಿ ಯಾವುದೇ ಬದಲಾವಣೆ ಇಲ್ಲ

ಪಂದ್ಯಕ್ಕೆ ಒಂದು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಇಡೀ ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಆರಂಭಿಕರನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಆದರೆ ಇತರ ಸ್ಥಳಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ರೋಹಿತ್ ಸ್ಪಷ್ಟಪಡಿಸಿದ್ದಾರೆ. ಅಂದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂಬುದು ಖಚಿತವಾಗಿದೆ. ಅಂದರೆ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯಲ್ಲಿದ್ದಾರೆ.

ಇನ್ನು ಬೌಲರ್‌ಗಳ ಬದಲಾವಣೆಯ ಬಗ್ಗೆ ಕೇಳಿದಕ್ಕೆ, ರೋಹಿತ್ ಏನನ್ನೂ ಹೇಳಲಿಲ್ಲ. ಆದರೆ ಹಿಂದಿನ ದಾಖಲೆಯನ್ನು ಪರಿಗಣಿಸಿ, ಟೀಂ ಇಂಡಿಯಾ ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬದಲಿಗೆ ಕುಲ್ದೀಪ್ ಯಾದವ್​ಗೆ ಅವಕಾಶ ನೀಡಬಹುದು. ಕುಲ್ದೀಪ್ ಮೊದಲ ಪಂದ್ಯದಲ್ಲಿ ಆಡಲಿಲ್ಲ. ಆದರೆ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳ ವಿರುದ್ಧ ಈ ಮೊದಲು ಕುಲ್ದೀಪ್ ಪ್ರದರ್ಶನ ಅದ್ಭುತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗಬಹುದು.

ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 pm, Sat, 8 June 24

ತಾಜಾ ಸುದ್ದಿ
ಕೇಂದ್ರವನ್ನು ಟೀಕಿಸಿದ್ದ ಇವರು ಈಗ ಬೆಲೆ ಏರಿಕೆ ಮಾಡಿದ್ಯಾಕೆ? ಕುಮಾರಸ್ವಾಮಿ
ಕೇಂದ್ರವನ್ನು ಟೀಕಿಸಿದ್ದ ಇವರು ಈಗ ಬೆಲೆ ಏರಿಕೆ ಮಾಡಿದ್ಯಾಕೆ? ಕುಮಾರಸ್ವಾಮಿ
ದರ್ಶನ್-ಪವಿತ್ರಾ ಗೌಡ ಅವರನ್ನು ನ್ಯಾಯಾಲಯಕ್ಕೆ ಕರೆತಂದ ವಿಡಿಯೋ
ದರ್ಶನ್-ಪವಿತ್ರಾ ಗೌಡ ಅವರನ್ನು ನ್ಯಾಯಾಲಯಕ್ಕೆ ಕರೆತಂದ ವಿಡಿಯೋ
ದರ್ಶನ್ ಕೇಸ್ನಲ್ಲಿ ಒತ್ತಡ ಹಾಕ್ತಿರೋ ಆ ಸಚಿವ ಯಾರು? ಜಾರಕಿಹೊಳಿ ಏನಂದ್ರು
ದರ್ಶನ್ ಕೇಸ್ನಲ್ಲಿ ಒತ್ತಡ ಹಾಕ್ತಿರೋ ಆ ಸಚಿವ ಯಾರು? ಜಾರಕಿಹೊಳಿ ಏನಂದ್ರು
ಸಫಾರಿ ಕಾರಿನಲ್ಲಿ ಬಂದು ಬಿಡಾಡಿ ದನ ಕಳ್ಳತನಕ್ಕೆ ಯತ್ನ; ವಿಡಿಯೋ ವೈರಲ್​
ಸಫಾರಿ ಕಾರಿನಲ್ಲಿ ಬಂದು ಬಿಡಾಡಿ ದನ ಕಳ್ಳತನಕ್ಕೆ ಯತ್ನ; ವಿಡಿಯೋ ವೈರಲ್​
ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?
ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ